newsfirstkannada.com

×

ಸ್ನೇಹಿತನ ತಮಾಷೆಯಿಂದ ಅಮಾಯಕ ಬಲಿ.. ಬೈಕ್​ ಸರ್ವೀಸ್​ ಮಾಡಲು ಹೋದಾತ ಅನ್ಯಾಯವಾಗಿ ಸಾವನ್ನಪ್ಪಿದ

Share :

Published March 28, 2024 at 12:31pm

    ಬೈಕ್ ಸರ್ವಿಸ್ ಮಾಡಲು ಸ್ನೇಹಿತನ ಬಳಿ ಹೋಗಿದ್ದ ಯುವಕ

    ಬೈಕ್​ ಸರ್ವೀಸ್​ ಮಾಡುವಾತ ಯುವಕನ ಮೇಲೆ ಹುಚ್ಚಾಟ ಮಾಡಲು ಮುಂದಾದ

    ಹುಡುಗನ ತುಂಟಾಟಕ್ಕೆ ರಕ್ತಸ್ತಾವದಿಂದ ನರಳಾಡಿದ್ದ ಆಪ್ತ ಸ್ನೇಹಿತ ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರು: ಸ್ನೇಹಿತನ ಹುಚ್ಚಾಟಕ್ಕೆ ಅಮಾಯಕ ಬಲಿಯಾದ ಘಟನೆ ಥಣಿಸಂದ್ರದ ಬಳಿ ನಡೆದಿದೆ. 24 ವರ್ಷದ ಯೊಗೇಶ್(24) ಸ್ನೇಹಿತನ ಹುಚ್ಚಾಟದಿಂದ ಸಾವನ್ನಪ್ಪಿದ್ದಾನೆ.

ಮಾರ್ಚ್​ 25 ರಂದು 8 ಘಂಟೆಗೆ ಸುಮಾರಿಗೆ ನಡೆದ ಘಟನೆ ಇದಾಗಿದೆ. ಅಕ್ಕನ ಮದುವೆ ಎಂದು ಬ್ಯುಸಿಯಾಗಿದ್ದ ಯೊಗೇಶ್ ಬೈಕ್ ಸರ್ವಿಸ್ ಮಾಡಲು ಸ್ನೇಹಿತನ ಬಳಿ ಹೋಗಿದ್ದನು. ಈ ವೇಳೆ ಮುರಳಿ ಎಂಬಾತ ಬೈಕ್​ ಸರ್ವೀಸ್​​ ಮಾಡಿದ ಬಳಿಕ ಡ್ರೈ ಮಾಡಲು ಮುಂದಾಗುತ್ತಾನೆ. ಡ್ರೈ ಮಾಡುವ ವೇಳೆ ತನ್ನ ಬಳಿ ಇದ್ದ ಏರ್ ಪ್ರೇಷರ್ ಗನ್ ಯೊಗೇಶ್ ಮುಖಕ್ಕೆ ಹಿಡಿದಿದ್ದಾನೆ. ಇದನ್ನು ತಪ್ಪಿಸಿಕೊಳ್ಳಲು ಬಾಗಿದ್ದ ಯೊಗೇಶ್​ನ ಖಾಸಗಿ ಭಾಗಕ್ಕೆ ಏರ್ ಬಿಟ್ಟಿದ್ದಾನೆ.

ಮುರಳಿ ಮಾಡಿದ ತಮಾಷೆಯ ಪರಿಣಾಮ ಏರ್ ಪ್ರೇಷರ್ ಗನ್ ಗಾಳಿ​ ಯೊಗೇಶ್ ಹೊಟ್ಟೆ ಒಳ ಸೇರಿ ಅಂಗಾಗಳು ಒಡೆದು ಹೊಗಿದ್ದವು. ಈ ವೇಳೆ ಆತ ಸ್ಥಳದಲ್ಲೇ ಕುಸಿದುಬಿದ್ದು, ರಕ್ತಸ್ರಾವದಿಂದ ನರಳಾಡಿದ್ದಾನೆ. ಕೂಡಲೇ ಅಲ್ಲಿದ್ದ ಸ್ನೇಹಿತರೆಲ್ಲಾ ಆತನನ್ನು ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೊಗೇಶ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Breaking: ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್​ಗೆ ಲಘು ಹೃದಯಾಘಾತ

ಈ ಹಿನ್ನಲೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುರುಳಿಯನ್ನು‌ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತನ ತಮಾಷೆಯಿಂದ ಅಮಾಯಕ ಬಲಿ.. ಬೈಕ್​ ಸರ್ವೀಸ್​ ಮಾಡಲು ಹೋದಾತ ಅನ್ಯಾಯವಾಗಿ ಸಾವನ್ನಪ್ಪಿದ

https://newsfirstlive.com/wp-content/uploads/2024/03/Bengaluru-death.jpg

Load More