Advertisment

ನಮ್ಮ ಮೆಟ್ರೋದಲ್ಲಿ ಅನಾಹುತ.. ರೈಲಿನ ಅಡಿಯಲ್ಲೇ ಸಿಲುಕಿದ ಮೃತದೇಹ; ಪ್ರಯಾಣಿಕರ ಪರದಾಟ

author-image
Bheemappa
Updated On
ನಮ್ಮ ಮೆಟ್ರೋದಲ್ಲಿ ಅನಾಹುತ.. ರೈಲಿನ ಅಡಿಯಲ್ಲೇ ಸಿಲುಕಿದ ಮೃತದೇಹ; ಪ್ರಯಾಣಿಕರ ಪರದಾಟ
Advertisment
  • ಮೃತ ವ್ಯಕ್ತಿ ಯಾರು, ಯಾವ ಉದ್ದೇಶಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ?
  • ಭದ್ರತೆ ವಿಚಾರವಾಗಿ ನಮ್ಮ ಮೆಟ್ರೋ ವಿರುದ್ಧ ಪ್ರಯಾಣಿಕರ ಆಕ್ರೋಶ
  • ಎರಡು ದಿನದ ಹಿಂದೆಯಷ್ಟೇ ಟ್ರ್ಯಾಕ್​​ಗೆ ಇಳಿದಿದ್ದ 4 ವರ್ಷದ ಮಗು

ಬೆಂಗಳೂರು: ಪದೇ ಪದೇ ಮೆಟ್ರೋ ಹಳಿಗಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯ‌ ವಿಚಾರವಾಗಿ ನಮ್ಮ ಮೆಟ್ರೋ ವಿರುದ್ಧ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisment

ಇದನ್ನೂ ಓದಿ:BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ; ಟ್ರ್ಯಾಕ್​ಗೆ ಹಾರಿ ವ್ಯಕ್ತಿ ಆತ್ಮ*ತ್ಯೆ

ಎರಡು ದಿನದ ಹಿಂದೆಯಷ್ಟೇ ಮೆಟ್ರೋ ಟ್ರ್ಯಾಕ್​​ಗೆ 4 ವರ್ಷದ ಮಗು ಇಳಿದಿತ್ತು. ಇದು ಮಾಸುವ ಮುನ್ನವೇ ಇದೀಗ 35 ವರ್ಷದ ವ್ಯಕ್ತಿಯೊಬ್ಬರು ದೊಡ್ಡ ಕಲ್ಲಸಂದ್ರ ಮೆಟ್ರೋ ನಿಲ್ದಾಣ ಬಳಿ ಹಳಿ ಮೇಲೆ ಜಂಪ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಳಿಗೆ ಜಂಪ್ ಮಾಡಿದಾಗ ವ್ಯಕ್ತಿಯ ಸ್ಥಿತಿ ಗಂಭೀರವಾಗಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಹೀಗಾಗಿಯೇ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದಾಗಿ ದೊಡ್ಡಕಲ್ಲಸಂದ್ರ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಇದನ್ನೂ ಓದಿ: 100km ವೇಗದಲ್ಲಿ ಕಾರು ಸ್ಟಂಟ್ ಮಾಡ್ತಿದ್ದ ಅಪ್ರಾಪ್ತ.. ಸ್ಕೂಟರ್​ಗೆ ಡಿಕ್ಕಿಯಾಗಿ ತಾಯಿ ಸಾವು, ಮಗಳು ಚಿಂತಾಜನಕ

Advertisment

ಈಗಲಾದ್ರೂ ವ್ಯಕ್ತಿ ಮೃತದೇಹ ಮೆಟ್ರೋ ಟ್ರೈನ್​ ಅಡಿಯಲ್ಲೇ ಇದೆ. ಘಟನಾ ಸ್ಥಳಕ್ಕೆ ಕೊಣನಕುಂಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳ ಮಹಜರು ಮಾಡುತ್ತಿದ್ದಾರೆ. ಅಲ್ಲದೇ ಮೃತಪಟ್ಟ ವ್ಯಕ್ತಿ ಯಾರು? ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment