newsfirstkannada.com

Video: ಒಂಟೆಗೆ ಸಿಗರೇಟ್ ಸೇದಿಸುವ ಪ್ರಯತ್ನ.. ಆಮೇಲೆ ಏನಾಯ್ತು ಅಂದರೆ..!

Share :

Published April 26, 2024 at 1:02pm

Update April 26, 2024 at 1:03pm

    ರೆಸ್ಟೋರೆಂಟ್​ನಲ್ಲಿದ್ದ ಒಂಟೆಗೆ ಸಿಗರೇಟ್ ನೀಡಿಲು ಪ್ರಯತ್ನ

    ವಿಡಿಯೋ ವೈರಲ್ ಆಗ್ತಿದ್ದಂತೆ ಜನರಿಂದ ಭಾರೀ ಆಕ್ರೋಶ

    ಪೊಲೀಸರಿಂದ ತನಿಖೆ ಆರಂಭ, ಕ್ರಮಕ್ಕೆ ಆಗ್ರಹಿಸಿದ ಪ್ರಾಣಿಪ್ರಿಯರು

ವ್ಯಕ್ತಿಯೊಬ್ಬ ಒಂಟೆಗೆ ಹಿಂಸೆ ನೀಡುತ್ತಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವ್ಯಕ್ತಿ ಒಂಟೆಯಿಂದ ಸಿಗರೇಟ್ ಸೇದಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಅದಾಗಿದೆ.

ಮಧ್ಯ ಪ್ರದೇಶದ ಇಂದೋರ್​​ನ ರೆಸ್ಟೋರೆಂಟ್​ನಲ್ಲಿ ಈ ಪ್ರಕರಣ ನಡೆದಿದೆ. ವ್ಯಕ್ತಿಯ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪ್ರಿಯಾಂಶು ಜೈನ್ ಅನ್ನೋರು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದೇವೆ.

ಇದನ್ನೂ ಓದಿ: ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ; RCB ವಿರುದ್ಧ ಸೋತ ಬಳಿಕ ಕೋಪಿಸಿಕೊಂಡ ಕಮ್ಮಿನ್ಸ್

ಐಪಿಸಿ ಸೆಕ್ಸನ್​ ಅನಿಮಲ್ ಅಕ್ಟ್​ 11 ಅಡಿಯಲ್ಲಿ ಕೇಸ್​ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಣಿಗೆ ಹಿಂಸೆ ನೀಡುತ್ತಿರೋದು ಆತಂಕಕಾರಿ ವಿಚಾರ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಿಗರೇಟ್ ಸೇದುವುದರಿಂದ ಮನಷ್ಯ ತನ್ನ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ. ಅದರ ಜೊತೆಗೆ ಸಿಗರೇಟ್​ನಿಂದ ಆಗುವ ದುಷ್ಪರಿಣಾಮವನ್ನು ಪ್ರಾಣಿಗಳ ಮೇಲೂ ಬೀರಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿIPL ಇತಿಹಾಸದಲ್ಲೇ ಕೆಟ್ಟ ಬೌಲಿಂಗ್; ಮೋಹಿತ್ ಶರ್ಮಾ ಹೊಡಿಸಿಕೊಂಡ ರನ್ ಎಷ್ಟು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಒಂಟೆಗೆ ಸಿಗರೇಟ್ ಸೇದಿಸುವ ಪ್ರಯತ್ನ.. ಆಮೇಲೆ ಏನಾಯ್ತು ಅಂದರೆ..!

https://newsfirstlive.com/wp-content/uploads/2024/04/CAMEL.jpg

Load More