newsfirstkannada.com

IPL ಇತಿಹಾಸದಲ್ಲೇ ಕೆಟ್ಟ ಬೌಲಿಂಗ್; ಮೋಹಿತ್ ಶರ್ಮಾ ಹೊಡಿಸಿಕೊಂಡ ರನ್ ಎಷ್ಟು..

Share :

Published April 26, 2024 at 10:13am

Update April 26, 2024 at 10:43am

    ಹೆಚ್ಚು ರನ್ ಹೊಡೆಸಿಕೊಂಡ ಅಪಖ್ಯಾತಿಗೆ ಒಳಗಾದ ಶರ್ಮಾ

    ನಾಲ್ಕು ಓವರ್​ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ GT ಆಟಗಾರ

    ಗುಜರಾತ್ ವಿರುದ್ಧ 4 ರನ್​​ಗಳಿಂದ ಗೆಲುವು ಸಾಧಿಸಿರುವ DC

ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಟೈಟನ್ಸ್​ನ ಬೌಲರ್​ ಮಹಿತ್ ಶರ್ಮಾ ಅತ್ಯಂತ ಕೆಟ್ಟ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಕೋಟಾದ ನಾಲ್ಕು ಓವರ್​ನಲ್ಲಿ ಬರೋಬ್ಬರಿ 73 ರನ್​​ಗಳನ್ನು ಬಿಟ್ಟುಕೊಟ್ಟು ಭಾರೀ ಮುಜುಗರ ಅನುಭವಿಸಿದ್ದಾರೆ.

ಇದನ್ನೂ ಓದಿ:ವೋಟರ್ ಐಡಿ ಮಿಸ್​​ ಆಗಿದೆಯಾ? ಚಿಂತೆ ಬೇಡ! ವೋಟ್ ಮಾಡಲು ಈ ದಾಖಲೆಗಳಿದ್ದರೆ ಸಾಕು..!

ಕಳೆದ ಬುಧವಾರ ದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಎದುರಿಸಿತ್ತು. ಈ ವೇಳೆ ಮೋಹಿತ್ ಶರ್ಮಾ 73 ರನ್​​ಗಳನ್ನು ಬಿಟ್ಟುಕೊಟ್ಟಿದ್ದಾರೆ. 2018ರಲ್ಲಿ ಎಸ್​ಆರ್​ಹೆಚ್​ನ ಬಸಿಲ್ ತಂಪಿ ಆರ್​ಸಿಬಿಗೆ 70 ರನ್​ ಬಿಟ್ಟುಕೊಟ್ಟಿದ್ದರು. ಒಬ್ಬ ಬೌಲರ್​ ಅತ್ಯಧಿಕ ರನ್ ಹೊಡೆಸಿಕೊಂಡ ಮೊದಲ ಆಟಗಾರ ಎಂಬ ಅಪಖ್ಯಾತಿಗೆ ಒಳಗಾಗಿದ್ದರು. ಇದೀಗ ಮೋಹಿತ್ ಶರ್ಮಾ ಹೆಸರಲ್ಲಿ ಆ ದಾಖಲೆ ಇದೆ. ಇನ್ನು 2023ರಲ್ಲಿ ಗುಜರಾತ್ ಟೈಟನ್ಸ್​ ಪರ ಆಡುತ್ತಿದ್ದ ಯಶ್ ದಯಾಳ್, 69 ರನ್​​ ಹೊಡೆಸಿಕೊಂಡಿದ್ದರು. ಕೆಕೆಆರ್ ಬ್ಯಾಟರ್ಸ್​ ಯಶ್ ದಯಾಳ್​ಗೆ 69 ರನ್​ ಚಚ್ಚಿದ್ದರು.

ಇದನ್ನೂ ಓದಿ:ಕರ್ನಾಟಕದ 3 ಅಭ್ಯರ್ಥಿಗಳ ಆಸ್ತಿ ಝೀರೋ, ಇವತ್ತಿನ ಸ್ಪರ್ಧಾ ಕಣದಲ್ಲಿ 500 ರೂ ಆಸ್ತಿ ಹೊಂದಿರೋರೂ ಇದ್ದಾರೆ..!

ಇನ್ನು ಮೋಹಿತ್ ಶರ್ಮಾಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ರಿಷಬ್ ಪಂತ್, ಕೊನೆಯ ಓವರ್​ನಲ್ಲಿ ನಾಲ್ಕು ಸಿಕ್ಸರ್, ಒಂದು ಬೌಂಡರಿ ಬಾರಿಸಿ ಒಟ್ಟು 31 ರನ್​ ಚಚ್ಚಿದ್ದರು. ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ 4 ವಿಕೆಟ್ ಕಳೆದುಕೊಂಡು 224 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್​, 8 ವಿಕೆಟ್ ಕಳೆದುಕೊಂಡು 220 ರನ್​ಗಳಿಸಿ ಸೋಲಿಗೆ ಶರಣಾಯ್ತು.

ಇದನ್ನೂ ಓದಿ:ಅರ್ಧ ಶತಕ ಬಾರಿಸಿಯೂ ಸಂಭ್ರಮಿಸಿದ ಕೊಹ್ಲಿ; ಬೇರೆಯದ್ದೇ ಮಾತಾಡಿಕೊಂಡ ಅಭಿಮಾನಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL ಇತಿಹಾಸದಲ್ಲೇ ಕೆಟ್ಟ ಬೌಲಿಂಗ್; ಮೋಹಿತ್ ಶರ್ಮಾ ಹೊಡಿಸಿಕೊಂಡ ರನ್ ಎಷ್ಟು..

https://newsfirstlive.com/wp-content/uploads/2024/04/Mohit-sharma.jpg

Load More