newsfirstkannada.com

ಕರ್ನಾಟಕದ 3 ಅಭ್ಯರ್ಥಿಗಳ ಆಸ್ತಿ ಝೀರೋ, ಇವತ್ತಿನ ಸ್ಪರ್ಧಾ ಕಣದಲ್ಲಿ 500 ರೂ ಆಸ್ತಿ ಹೊಂದಿರೋರೂ ಇದ್ದಾರೆ..!

Share :

Published April 26, 2024 at 9:19am

    ದೇಶದಲ್ಲಿ ಇವತ್ತು ಒಟ್ಟು 88 ಕ್ಷೇತ್ರಗಳಿಗೆ ಮತದಾನ

    ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ

    ಅತೀ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳ ವಿವರ ಇಲ್ಲಿದೆ

ದೇಶದ 88 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಹುಲ್ ಗಾಂಧಿ, ಶಶಿ ತರೂರ್, ಹೇಮ ಮಾಲಿನಿ, ರಾಜೀವ್ ಚಂದ್ರಶೇಖರ್, ಡಿ.ಕೆ.ಸುರೇಶ್, ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರ ಬರೆಯುತ್ತಿದ್ದಾನೆ.

ಘಟನಾನುಘಟಿ ನಾಯಕರ ವಿಚಾರ ಒಂದು ಕಡೆಯಾದರೆ ನೇಮೂ, ಫೇಮೂ ಇಲ್ಲದೇ ಸ್ಪರ್ಧೆ ಮಾಡಿದವರೂ ಕೂಡ ಎರಡನೇ ಹಂತದ ಚುನಾವಣಾ ಕಣದಲ್ಲಿ ಇದ್ದಾರೆ. ಜೊತೆಗೆ ಅವರ ಆಸ್ತಿ ವಿವರ ನೀವು ಅಚ್ಚರಿ ಪಡುವಂತೆ ಇದೆ. ಶ್ರೀಮಂತ ಅಭ್ಯರ್ಥಿಗಳ ಲೆಕ್ಕಾಚಾರ ಒಂದಾದರೆ, ಬಡ ಅಭ್ಯರ್ಥಿಗಳ ಲೆಕ್ಕಾಚಾರವೇ ಬೇರೆಯಾಗಿದೆ.

ಇದನ್ನೂ ಓದಿ:ಅರ್ಧ ಶತಕ ಬಾರಿಸಿಯೂ ಸಂಭ್ರಮಿಸಿದ ಕೊಹ್ಲಿ; ಬೇರೆಯದ್ದೇ ಮಾತಾಡಿಕೊಂಡ ಅಭಿಮಾನಿಗಳು..!

ಐದು ಬಡ ಅಭ್ಯರ್ಥಿಗಳ ಆಸ್ತಿ
ಲಕ್ಷ್ಮಣ್ ನಾಗೊರಾವ್ ಪಾಟೀಲ್: ಇವರು ಮಹಾರಾಷ್ಟ್ರದ ನಂದೆದ್ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಎರಡನೇ ಹಂತದ ಮತದಾನ ನಡೆಯುತ್ತಿರುವ ಇವತ್ತು, ಅತಿ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿ ಇವರೇ ಆಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿರುವ ಮಾಹಿತಿ ಪ್ರಕಾರ ಇವರ ಆಸ್ತಿಯ ಮೌಲ್ಯ ಕೇವಲ 500 ರೂಪಾಯಿ ಎಂದು ತಿಳಿಸಿದ್ದಾರೆ.

ಪಾಟೀಲ್: ಇವರು ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರ ಆಸ್ತಿಯ ಒಟ್ಟು ಮೌಲ್ಯ ಕೇವಲ ಸಾವಿರ ರೂಪಾಯಿ ಎಂದು ತಿಳಿಸಿದ್ದಾರೆ.

ಪೃಥ್ವಿಸಾಮ್ರಾಟ್ ಮುಕಿಂದ್ರರಾವ್ ದಿಪ್ವಾಂಶ್: ಇವರು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿದ್ದಾರೆ. ಮಹಾರಾಷ್ಟ್ರದ ಅಮರಾವತಿ (SC) ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿರುವ ಇವರ ಆಸ್ತಿಯ ಒಟ್ಟು ಮೌಲ್ಯ 1400 ರೂಪಾಯಿ ಆಗಿದೆ.

ಇದನ್ನೂ ಓದಿ:ವೋಟರ್ ಐಡಿ ಮಿಸ್​​ ಆಗಿದೆಯಾ? ಚಿಂತೆ ಬೇಡ! ವೋಟ್ ಮಾಡಲು ಈ ದಾಖಲೆಗಳಿದ್ದರೆ ಸಾಕು..!

ಶಹಂಜ್ ಬಾನೋ: ದಲಿತ ಕ್ರಾಂತಿಯ ನಾಯಕರಾಗಿರುವ ಇವರು ರಾಜಸ್ಥಾನದ ಜೋಧ್​ಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯ 2000 ರೂಪಾಯಿ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ವಿಪಿ ಕೊಚುಮೊನ್: ಇವರು ಕೇರಳದ ಕೊಟ್ಟಾಯಂ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸೋಶಿಲಿಸ್ಟ್​ ಯುನಿಟಿ ಸೆಂಟರ್ ಆಫ್ ಇಂಡಿಯಾ (Communist) ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ಇವರ ಒಟ್ಟು ಆಸ್ತಿಯ ಮೌಲ್ಯ 2,230 ರೂಪಾಯಿ ಆಗಿದೆ.

ಝೀರೋ ಆಸ್ತಿ ಅಭ್ಯರ್ಥಿಗಳು
ಎರಡನೇ ಹಂತದ ಚುನಾವಣೆಯಲ್ಲಿ ಝೀರೋ ಆಸ್ತಿ ಹೊಂದಿರು ಅಭ್ಯರ್ಥಿಗಳು ಕೂಡ ಇದ್ದಾರೆ. ಕರ್ನಾಟಕದ ತುಮಕೂರು ಲೋಕಸಭಾ ಕ್ಷೇತ್ರದಿಂದ ಪ್ರಕಾಶ್ ಆರ್​​ಎ ಜೈನ್, ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಿಂದ ರಾಮಮುರ್ತಿ ಎಂ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ರಾಜಾ ರೆಡ್ಡಿ ಸೇರಿ ಒಟ್ಟು ಆರು ಅಭ್ಯರ್ಥಿಗಳ ಆಸ್ತಿ ಝೀರೋ ಆಗಿದೆ. ಮಹಾರಾಷ್ಟ್ರದ ಕಿಶೋರ್ ಭಿಮರಾವ್ ಲಬಡೆ, ನಾಗೇಶ್ ಸಂಭಾಜಿ ಗಾಯಕ್ವಾಡ್, ದ್ಯಾನೇಶ್ವರ್ ರಾಬ್​ಸಾಹೇಬ್ ಕಪತೆ ಕೂಡ ಯಾವುದೇ ಆಸ್ತಿಯನ್ನು ಹೊಂದಿಲ್ಲ.

ಇದನ್ನೂ ಓದಿ: ಇನ್ನೇನು ಸಾಯುತ್ತಿದ್ದ ಮಹಿಳೆಗೆ ಹಂದಿಯ ಮೂತ್ರಪಿಂಡ ಕಸಿ ಯಶಸ್ವಿ, ಮರುಜನ್ಮ ಪಡೆದ ಪವಾಡಗಿತ್ತಿಯ ಕಥೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದ 3 ಅಭ್ಯರ್ಥಿಗಳ ಆಸ್ತಿ ಝೀರೋ, ಇವತ್ತಿನ ಸ್ಪರ್ಧಾ ಕಣದಲ್ಲಿ 500 ರೂ ಆಸ್ತಿ ಹೊಂದಿರೋರೂ ಇದ್ದಾರೆ..!

https://newsfirstlive.com/wp-content/uploads/2024/04/LOK-SBHE-POOR.jpg

Load More