newsfirstkannada.com

ವಿಮಾನ ನಿಲ್ದಾಣ, ತಾಜ್ ಹೋಟೆಲ್​ಗೆ ಬಾಂಬ್​ ಇಟ್ಟಿದ್ದಾಗಿ ಹೇಳಿದ್ದ ಕಿರಾತಕ.. ಲಾಕ್ ಆಗಿದ್ದು ಹೇಗೆ?

Share :

Published June 2, 2024 at 6:18am

    ತನ್ನ ನಲ್ಲೆ ಜೊತೆ ಗಲಾಟೆ ಮಾಡಿಕೊಂಡು ಪೊಲೀಸರಿಗೆ ಕಾಟ ಕೊಟ್ಟ

    ಪ್ರಿಯತಮೆ ಜೊತೆ ಜಗಳವಾಡಿ ಬಾಂಬ್​ ಇಟ್ಟಿರುವುದಾಗಿ ಹೇಳಿದ್ದನು

    ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಇಟ್ಟಿದ್ದಾಗಿ ಕರೆ

ತಾಜ್ ಹೋಟೆಲ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಉತ್ತರ ಪ್ರದೇಶದ ಆಗ್ರಾ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಸೈಬರ್ ಸೆಲ್ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಉತ್ತರ ಪ್ರದೇಶದ ಆಗ್ರಾದ ಅರವಿಂದ್ ರಜಪೂತ್ ಎನ್ನುವ ವ್ಯಕ್ತಿಯನ್ನ ಬಂಧಿಸಲಾಗಿದೆ. ಮೇ 27 ರಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದನು. ಈ ವೇಳೆ ನಗರದ ಹೋಟೆಲ್ ಹಾಗೂ ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಹೇಳಿದ್ದನು. ಹೀಗಾಗಿ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು, ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್‌ಗಳು (ಬಿಡಿಡಿಎಸ್) ಮತ್ತು ಭಯೋತ್ಪಾದನಾ ನಿಗ್ರಹ ದಳದೊಂದಿಗೆ ಪೊಲೀಸರು ಗಂಟೆಗಳ ಶೋಧ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?

ಶೋಧ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿರಲಿಲ್ಲ. ಇದೊಂದು ಸುಳ್ಳು ಕರೆ ಎಂದು ಹೇಳಿದ್ದರು. ನಂತರ ಕರೆ ಬಂದಿದ್ದ ಆಧಾರದ ಮೇಲೆ ಕೇಸ್ ದಾಖಲು ಮಾಡಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಅರವಿಂದ್ ರಜಪೂತ್​ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವಿಚಾರಣೆ ವೇಳೆ ತನ್ನ ಪ್ರೇಯಸಿ ಜೊತೆ ಜಗಳವಾಡಿದ್ದಕ್ಕೆ ಬೇಸರಗೊಂಡು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದನು. ಅಲ್ಲದೇ ಇದರಲ್ಲಿ ತನ್ನ ಪ್ರೇಯಸಿ ಫೋನ್​ನಿಂದಲೇ ಕೃತ್ಯ ಎಸಗಿ ಆಕೆಯನ್ನು ತಗ್ಲಾಕಿಸಿಕೊಡಬೇಕು ಎಂದುಕೊಂಡಿದ್ದನು. ಆದ್ರೆ ಅಷ್ಟರಲ್ಲಿ ಎಲ್ಲ ಉಲ್ಟಾ ಹೊಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಮಾನ ನಿಲ್ದಾಣ, ತಾಜ್ ಹೋಟೆಲ್​ಗೆ ಬಾಂಬ್​ ಇಟ್ಟಿದ್ದಾಗಿ ಹೇಳಿದ್ದ ಕಿರಾತಕ.. ಲಾಕ್ ಆಗಿದ್ದು ಹೇಗೆ?

https://newsfirstlive.com/wp-content/uploads/2024/06/TAJ_HOTEL.jpg

Load More