Advertisment

VIral Video ಟೇಲರ್​ ಸ್ವಿಫ್ಟ್​ ಸಹಿ ಇರುವ ಗಿಟಾರ್ ಖರೀದಿಸಿ ವೃದ್ಧ, ವೇದಿಕೆಯ ಮೇಲೆಯೇ ಒಡೆದು ಹಾಕಿದ್ದು ಏಕೆ?

author-image
Gopal Kulkarni
Updated On
VIral Video ಟೇಲರ್​ ಸ್ವಿಫ್ಟ್​ ಸಹಿ ಇರುವ ಗಿಟಾರ್ ಖರೀದಿಸಿ ವೃದ್ಧ, ವೇದಿಕೆಯ ಮೇಲೆಯೇ ಒಡೆದು ಹಾಕಿದ್ದು ಏಕೆ?
Advertisment
  • ಸಿಂಗರ್​ ಸ್ವಿಫ್ಟ್ ಸಹಿ ಇರುವ ಗಿಟಾರ್ ವೇದಿಕೆಯಲ್ಲಿ ಒಡೆದು ಹಾಕಿದ ವೃದ್ಧ
  • 4 ಸಾವಿರ ಯುಎಸ್ ಡಾಲರ್​ಗೆ ಖರೀದಿಸಿದ ಗಿಟಾರ್​ ಸುತ್ತಿಗೆಯಿಂದ ಜಜ್ಜಿದ
  • ವೃದ್ಧರೊಬ್ಬರ ಈ ನಡೆಯನ್ನು ಕೊಂಡ ಆಕ್ರೋಶಗೊಂಡ ಸ್ವಿಫ್ಟ್ ಅಭಿಮಾನಿಗಳು

ಸಂಗೀತ ಜಗತ್ತಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ ಪ್ರತಿಭೆ ಅಂದ್ರೆ ಅದು ಟೇಲರ್​ ಸ್ವಿಫ್ಟ್. ಈ ಅಮೆರಿಕನ್ ಸಿಂಗರ್​​​​ ಜಾಗತಿಕವಾಗಿ ಬಹುದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಧಕರಿಗೆ ಅಭಿಮಾನಿಗಳು ಇದ್ದಷ್ಟೇ ವೈರಿಗಳು ಕೂಡ ಇರುತ್ತಾರೆ. ಅದೇ ರೀತಿ ಟೇಲರ್ ಸ್ವಿಫ್ಟ್​ಳನ್ನು ದೂರುವ ಜನರು ಇದ್ದಾರೆ. ಅಂತಹುದೇ ಒಬ್ಬ ವ್ಯಕ್ತಿ ಟೇಲರ್​ ಸ್ವಿಫ್ಟ್ ಅವರ ಸಹಿ ಇರುವ ಗಿಟಾರ್​​ನ್ನು 4 ಸಾವಿರ ಯುಎಸ್​ ಡಾಲರ್ ಅಂದ್ರೆ ಭಾರತದ 4 ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಅದನ್ನು ಸುತ್ತಿಗೆಯಿಂದು ಒಡೆದು ಹಾಕಿದ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisment

ಇದನ್ನೂ ಓದಿ:ಶಾಕಿಂಗ್​ ನ್ಯೂಸ್​ ಕೊಟ್ಟ ಇಸ್ರೇಲ್ ಪ್ರಧಾನಿ.. ಹೆಜ್ಬುಲ್ಲಾ ಪ್ರದೇಶಗಳ ಮೇಲೆ ನಿರಂತರ ವಾಯುದಾಳಿ ​

ವಿಡಿಯೋವೊಂದರಲ್ಲಿ ವೃದ್ಧರೊಬ್ಬರು ಸಹಜವಾಗಿ ನಡೆದುಕೊಂಡು ಹೋಗಿ ಗಿಟಾರ್​​ನ್ನು ತೆಗೆದುಕೊಳ್ಳುತ್ತಾರೆ. ನಂತರ ವೇದಿಕೆಯ ಮೇಲೆಯೇ ಅದನ್ನು ಸುತ್ತಿಗೆಯಿಂದ ಒಡೆದು ಹಾಕುತ್ತಾರೆ. ಟೇಲರ್ ಸ್ವಿಫ್ಟ್ ಸಹಿ ಇರುವ ಗಿಟಾರ್​​ನ್ನು ಖರೀದಿ ಮಾಡುವುದು ಅನೇಕ ಅಭಿಮಾನಿಗಳ ಕನಸಾಗಿರುತ್ತದೆ. ಇಂತಹ ಅವಕಾಶಗಳಿಗಾಗಿಯೇ ಅವರು ಕಾದಿರುತ್ತಾರೆ. ಆದ್ರೆ ವೇದಿಕೆಯಲ್ಲಿ ನಡೆದ ಈ ಹಠಾತ್ ಬೆಳವಣಿಗೆ ಕಂಡು ಅಲ್ಲಿ ನೆರದಿದ್ದ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.

Advertisment


">September 30, 2024

ಇದನ್ನೂ ಓದಿ:ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್​ಗೆ ತಳಮಳ ಶುರುವಾಗಿದ್ದು ಏಕೆ..?

ಈ ಒಂದು ವಿಡಿಯೋ ಸೆಪ್ಟಂಬರ್ 30 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದ್ರೆ ಇದು ನಿಜಕ್ಕೂ ನಡೆದಿದ್ದು ಯಾವಾಗ ಎಲ್ಲಿ ಎಂಬ ಬಗ್ಗೆ ಇನ್ನೂ ಕೂಡ ಯಾವುದೇ ಸ್ಪಷ್ಟವಾದ ಮಾಹಿತಿಯೂ ಬಂದಿಲ್ಲ. ಆದ್ರೆ ವೃದ್ಧರೂ ನಡೆದುಕೊಂಡ ರೀತಿಯನ್ನು ಸ್ವಿಫ್ಟ್​ ಅಭಿಮಾನಿಗಳು ಖಂಡಿಸಿದ್ದಾರೆ. ಇದು ದ್ವೇಷದ ಪರಾಕಾಷ್ಠೆ. ಇದನ್ನು ಯಾರು ಕೂಡ ಒಪ್ಪುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment