ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಸಾವನ್ನಪ್ಪಿದ ವ್ಯಕ್ತಿ
ಜಿಮ್ಗೆ ಹೋಗೋ ಮೊದಲು ನಿಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ
ಎಲ್ಲರಂತೆ ಸಾಲಿನಲ್ಲಿ ನಿಂತು ವಾರ್ಮ್ ಅಪ್ ಮಾಡುವಾಗ ಸಾವು
ಮುಂಬೈ: ಜಿಮ್ನಲ್ಲಿ ವಾರ್ಮ್ ಅಪ್ ಮಾಡುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ ಛತ್ರಪತಿ ಸಂಭಾಜಿನಗರದ ಜಿಮ್ವೊಂದರಲ್ಲಿ ನಡೆದಿದೆ.
ಇದನ್ನೂ ಓದಿ: ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್ ಟಾರ್ಗೆಟ್; FIR ದಾಖಲು
ಕನ್ವಾಲ್ಜಿತ್ ಸಿಂಗ್ ಬಗ್ಗಾ ಎನ್ನುವರು ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿ. ಇವರು ಜಿಮ್ಗೆ ತೆರಳಿ ಎಲ್ಲರಂತೆ ಸಾಲಿನಲ್ಲಿ ನಿಂತಿ ಎಂದಿನಂತೆ ವಾರ್ಮ್ ಅಪ್ ಮಾಡುತ್ತಿದ್ದರು. ಈ ವೇಳೆ ಸಡನ್ ಆಗಿ ಎದೆನೋವು ಕಾಣಿಸಿದೆ. ಹೀಗಾಗಿ ಸಾಲಿನಿಂದ ಹಿಂದೆ ಸರಿದು ನಿಂತುಕೊಂಡಿದ್ದಾರೆ. ತಕ್ಷಣ ನೆಲಕ್ಕೆ ಕುಸಿದು ಅಲ್ಲೇ ಬಿದ್ದಿದ್ದಾರೆ. ಇದನ್ನು ಗಮನಿಸಿದ ಜಿಮ್ನಲ್ಲಿದ್ದ ಇತರೆ ಜನರು ಓಡೋಡಿ ಬಂದು ಅವರನ್ನು ಪರೀಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನೆಲಕ್ಕೆ ಕುಸಿದು ಬಿದ್ದಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು
జిమ్లో వ్యాయామం చేస్తుండగా గుండెపోటు.. కుప్పకూలి వ్యక్తి మృతి
మహారాష్ట్ర – శంభాజీ నగర్లో జిమ్లో వ్యాయామం చేస్తున్న సమయంలో ఓ వ్యక్తి అస్వస్థతకు గురయి అకస్మాత్తుగా కుప్పకూలాడు.
అతడిని ఆసుపత్రికి తరలించగా.. అయితే అప్పటికే ఆ వ్యక్తి గుండెపోటుతో మరణించినట్లు వైద్యులు… pic.twitter.com/IovSjREMZY
— Telugu Scribe (@TeluguScribe) July 22, 2024
ವ್ಯಕ್ತಿಗೆ ಹೃದಯಾಘಾತವಾಗುತ್ತಿರೋ ವಿಡಿಯೋ ಜಿಮ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ನೋಡುಗರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜಿಮ್ಗಳಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಫಿಟ್ನೆಸ್ಗಾಗಿ ಜಿಮ್ಗೆ ಹೋಗುವವರು ಮೊದಲೇ ವೈದ್ಯರ ಸಲಹೆ, ಸೂಚನೆ ಪಡೆದುಕೊಳ್ಳಬೇಕು. ತಮ್ಮ ಆರೋಗ್ಯದ ಕುರಿತು ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಂಡು ಬಳಿಕ ಜಿಮ್ಗೆ ಹೋಗುವುದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ