newsfirstkannada.com

VIDEO: ಭಾರೀ ಟ್ರಾಫಿಕ್​ ಮಧ್ಯೆಯೂ ಬುಲ್​ ರೈಡಿಂಗ್​ ಮಾಡಿದ ಯುವಕ; ನೆಟ್ಟಿಗರಿಂದ ಆಕ್ರೋಶ

Share :

Published March 31, 2024 at 4:03pm

  ಒಂದಲ್ಲಾ ಎರಡಲ್ಲಾ ಬರೋಬ್ಬರಿ 41 ಮಿಲಿಯನ್ ವೀವ್ಸ್​ ಪಡೆದ ವಿಡಿಯೋ

  ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಯುವಕನ ಹುಚ್ಚಾಟದ ಪ್ರಯಾಣ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಡಿಯೋ ಸಖತ್​ ವೈರಲ್​ ಆಗುತ್ತಲೇ ಇರುತ್ತವೆ. ಎಲ್ಲರೂ ಆನೆ, ಒಂಟೆ, ಕುದುರೆ ಹಾಗೂ ಕತ್ತೆ ಮೇಲೆ ಸವಾರಿ ಮಾಡುವುದನ್ನು ನೋಡಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಯುವಕನೊಬ್ಬ ಟ್ರಾಫಿಕ್‌ನಲ್ಲಿ ಎಮ್ಮೆಯ ಮೇಲೆ ಕುಳಿತು ಪ್ರಯಾಣಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: ಹೃದಯವನ್ನ ಬ್ಯಾಗ್​ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ

ಹೌದು, ಬುಲ್ ರೈಡರ್ ಎಂಬ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಮೊದಲು ಯುವಕನ ಸ್ಟೈಲ್​ನಲ್ಲಿ ಕಣ್ಣಿಗೆ ಗ್ಲಾಸ್​ ಹಾಕಿಕೊಂಡು ಬಳಿಕ ಹಾರಿ ಎಮ್ಮೆಯ ಮೇಲೆ ಕುಳಿತುಕೊಳ್ಳುತ್ತಾನೆ. ಬಳಿಕ ಹೀಗೆ ನಿಧಾನಗತಿಯಲ್ಲಿ ಎಮ್ಮೆ ಸವಾರಿ ಮಾಡುತ್ತ ಅಲ್ಲೇ ನಿಂತಿದ್ದ ಸಾರ್ವಜನಿಕ ಗಮನವನ್ನು ತನ್ನತ್ತ ಸೆಳೆಯುತ್ತ ಖುಷಿ ಖುಷಿಯಲ್ಲಿ ಹೋಗಿದ್ದಾನೆ. ಬಳಿಕ ವೀಡಿಯೋದಲ್ಲಿ ವಾಹನ ಸವಾರರು ತಮ್ಮ ಬೈಕ್​ ಅನ್ನ ಪಕ್ಕಕ್ಕೆ ನಿಲ್ಲಿಸಿ ಎಮ್ಮೆ ಮೇಲೆ ಸಾಗುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರು.

View this post on Instagram

A post shared by Bull Rider (@bull_rider_077)

ಇನ್ನು, ಇದೇ ವಿಡಿಯೋ ಬರೋಬ್ಬರಿ 45.4 ಮಿಲಿಯನ್ ವೀವ್ಸ್​ ಪಡೆದುಕೊಂಡಿದೆ. ಅಷ್ಟರ ಮಟ್ಟಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಈ ಬುಲ್ ರೈಡರ್ ಕ್ಲಿಪ್​ ಅನ್ನು ನೋಡಿದ ಕೆಲವರು ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಭಾರೀ ಟ್ರಾಫಿಕ್​ ಮಧ್ಯೆಯೂ ಬುಲ್​ ರೈಡಿಂಗ್​ ಮಾಡಿದ ಯುವಕ; ನೆಟ್ಟಿಗರಿಂದ ಆಕ್ರೋಶ

https://newsfirstlive.com/wp-content/uploads/2024/03/bull-rider.jpg

Load More