ತಿರುಪತಿಯಿಂದ ಟಿಕೆಟ್ ಇಲ್ಲದ ಪ್ರಯಾಣ ಬೆಳೆಸಿದ ವ್ಯಕ್ತಿ
ಯಾರಿಗೂ ಸಿಕ್ಕಿಬೀಳದಂತೆ ಟಾಯ್ಲೆಟ್ನಲ್ಲಿ ಅಡಗಿ ಕುಳಿತ
ಆತನ ಬೀಡಿ ಹೊಗೆಯಿಂದ ಬಂತು ಎಚ್ಚರಿಕೆಯ ಘಂಟೆ
ವ್ಯಕ್ತಿಯೋರ್ವನ ಯಡವಟ್ಟಿನಿಂದಾಗಿ ನೂರಾರು ಜನರು ಆತಂಕಕ್ಕೆ ಒಳಗಾದ ಘಟನೆ ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಟ್ರೈನ್ನಲ್ಲಿ ನಡೆದಿದೆ. ರೈಲಿನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿ ಬೋರ್ ಆಗ್ತಿದೆ ಎಂದು ಟಾಯ್ಲೆಟ್ಗೆ ಹೋಗಿ ಬೀಡಿ ಹಚ್ಚಿರುವುದೇ ಇದಕ್ಕೆ ಕಾರಣವಾಗಿದೆ.
ವ್ಯಕ್ತಿ ಅದೆಷ್ಟು ಬೀಡಿ ಸೇದಿದ್ದನೋ ಗೊತ್ತಿಲ್ಲ. ಏನೋ ಭಾರೀ ಪ್ರಮಾಣದ ಹೊಗೆ ಶೌಚಾಲಯದಿಂದ ಹೊರಬರೋಕೆ ಶುರುವಾಗಿದೆ. ಹೀಗೆ ಹೊಗೆ ಹೆಚ್ಚಾದಂತೆ ಫೈರ್ ಅಲರ್ಟ್ ತಾನಾಗಿಯೇ ಆನ್ ಆಗಿದೆ.
ವಿಚಾರಣೆಯ ವೇಳೆ ಈತ ಟ್ರೈನ್ ಟಿಕೆಟ್ ಕೂಡ ಪಡೆದಿರಲಿಲ್ಲ ಅನ್ನೋದು ಗೊತ್ತಾಗಿದೆ. ತಿರುಪತಿಯಿಂದ ಈತ ಟ್ರೈನ್ ಹತ್ತಿದ್ದು, ಟಿಕೆಟ್ ಇಲ್ಲದ ಕಾರಣ ಅಡಗಿ ಕೂರಲು ಶೌಚಾಲಯವನ್ನ ಆರಿಸಿಕೊಂಡಿದ್ದ. ಹಾಗಾಗಿ ಸಮಯ ಕಳೆಯಲೆಂದು ಟಾಯ್ಲೆಟ್ನಲ್ಲಿ ಬೀಡಿ ಸೇದಿದ್ದಾನೆ. ಸದ್ಯ ಈ ವ್ಯಕ್ತಿಯನ್ನ ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Panic prevailed among passengers, after smoke in #Tirupati– #Hyderabad #VandeBharatExpress
An unauthorized passenger was locked himself in the toilet and during smoking, activated aerosol fire extinguisher started emitting powder like #smoke to put of #fire. He was detained :SCR pic.twitter.com/b9mn7IWTXy
— Surya Reddy (@jsuryareddy) August 9, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ