ಒಂಟಿಯಾಗಿ ಓಡಾಡೋ ಮಹಿಳೆಯರೇ ಈತನ ಟಾರ್ಗೆಟ್
ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಒಬ್ಬರೇ ಓಡಾಡಬೇಡಿ
ಎಲ್ಲರೂ ಓದಲೇಬೇಕಾದ ಖತರ್ನಾಕ್ ಕಳ್ಳನ ಸ್ಟೋರಿ ಇದು..!
ಬೆಂಗಳೂರು: ಸಮಯ ಬೆಳ್ಳಗ್ಗೆ 11 ಗಂಟೆ 33 ನಿಮಿಷ, 36 ಸೆಕೆಂಡ್. ರಸ್ತೆ ಬದಿಯಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡ್ತಿರೋ ವ್ಯಕ್ತಿ. ವಾಪಾಸ್ ಬರುವಾಗ 7 ನಿಮಿಷ ತಡ. ಹೀಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡ ವ್ಯಕ್ತಿ ಹೆಸರು ಜೋಶ್ವಾ. ಈತನ ವೃತ್ತಿ ಕಳ್ಳತನ. ಅದರಲ್ಲೂ ಮಹಿಳೆಯರೇ ಈತನ ಟಾರ್ಗೆಟ್. ಇವನ ಕಳ್ಳತನ ಸ್ಟೈಲ್ ಮಾತ್ರ ಸ್ವಲ್ಪ ಡಿಫರೆಂಟ್. ಡಿಫರೆಂಟ್ ಆಗಿ ಕಳ್ಳತನ ಮಾಡಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ.
ಮಹಿಳೆಯರೇ ಈತನ ಟಾರ್ಗೆಟ್
ಆರೋಪಿ ಜೋಶ್ವಾ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ. ಮಹಿಳೆಯರು ಮಗುವನ್ನ ಶಾಲೆಗೆ ಬಿಟ್ಟು ಮನೆ ಕಡೆ ಹೊರಟಾಗ ಅವರನ್ನೇ ಫಾಲೋ ಮಾಡ್ತಿದ್ದ. ಅವರ ಅಪಾರ್ಟ್ಮೆಂಟ್, ಮನೆ ಮತ್ತು ಅಕ್ಕಪಕ್ಕದ ಎಲ್ಲಾ ವಾತಾವರಣ ಅಬ್ಸರ್ವ್ ಮಾಡಿ ಅನಂತರ ಕಳ್ಳತನದ ಪ್ಲಾನ್ ಮಾಡ್ತಿದ್ದ.
ಹೀಗೆ ಎಲ್ಲವನ್ನ ಅಬ್ಸರ್ವ್ ಮಾಡಿದವನು ಮನೆಯವರೆಲ್ಲ ಹೊರಹೋಗುವ ಸಮಯವನ್ನ ನೋಡಿಕೊಂಡು ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯ ಒಂದು ಮನೆಗೆ ಎಂಟ್ರಿ ಕೊಟ್ಟಿದ್ದ. ಮಹಿಳೆ ಒಳ ಹೋದ ತಕ್ಷಣ ಬಾಗಿಲು ಹಾಕಿಕೊಂಡಿದ್ರು. ಆತ ಬಂದವನು ಬಾಗಿಲು ಬಡಿದಿದ್ದ. ಮಹಿಳೆ ಯಾರೋ ಕೋರಿಯರ್ನವರು ಇರಬೇಕು ಅಂತಾ ಬಾಗಿಲು ತೆಗೆದಿದ್ರು. ತಕ್ಷಣ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕೈ ಕೊಯ್ದು ಚಿನ್ನವನ್ನ ಕಳ್ಳತನ ಮಾಡಿದ್ದ.
ಕೊನೆಗೂ ಮಹಿಳೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ಮತ್ತು ಗೂಗಲ್ ಪೇ ಆಧಾರದಲ್ಲಿ ಆರೋಪಿಯನ್ನ ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವ ಮುನ್ನ ಎಚ್ಚರ ವಹಿಸಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ