newsfirstkannada.com

VIDEO: ದೇವರಿಗೆ ನಮಿಸಿ ಮನೆ ಮೇಲೆ ಬಾಂಬ್​ ದಾಳಿ ಮಾಡಿದ ಆಸಾಮಿ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published May 8, 2024 at 7:21pm

  ಭಾರತ್​​ ಕೃಷಿ ಸಮಾಜ ಶಾಲೆಯ ಬಳಿ ಇರೋ ನಿವಾಸದ ಮೇಲೆ ಬಾಂಬ್ ದಾಳಿ

  ಏಕಾಏಕಿ ಬಂದು ಮನೆಯ ಮೇಲೆ ಬಾಂಬ್​ ಹಾಕಿ ಎಸ್ಕೇಪ್​ ಆದ ಆರೋಪಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬಾಂಬ್ ಎಸೆದ ವಿಡಿಯೋ

ಭೋಪಾಲ್: ವ್ಯಕ್ತಿಯೊಬ್ಬ ಏಕಾಏಕಿ ಬಂದು ಮನೆಯ ಮೇಲೆ ಬಾಂಬ್​ ಹಾಕಿ ಪರಾರಿಯಾಗಿರೋ ಘಟನೆ ಜಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಬಾಂಬ್ ಎಸೆಯುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಂಬ್ ಎಸೆದ ಆರೋಪಿಯನ್ನು ಆನಂದ್ ಠಾಕೂರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ವಾರ್ಡ್..​ ವಾರ್ಡ್​ಗೆ ಸ್ಕೂಟಿಯಲ್ಲಿ ಹೋಗಿ ಚಿಕಿತ್ಸೆ ಕೊಡ್ತಾರೆ ಈ ನರ್ಸ್​; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!

ಭಾರತ್​​ ಕೃಷಿ ಸಮಾಜ ಶಾಲೆಯ ಬಳಿಯ ಮನೆಯೊಂದರ ಮೇಲೆ ವ್ಯಕ್ತಿಯು ಬಾಂಬ್​ ದಾಳಿ ಮಾಡಿದ್ದಾನೆ. ಇನ್ನು ಆರೋಪಿ ಆನಂದ್ ಠಾಕೂರ್ ಎಂಬಾತ ಮನೆ ಮೇಲೆ ಬಾಂಬ್​ ದಾಳಿ ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಕೈ ಮುಗಿದ ಬಳಿಕ ಈ ಕೃತ್ಯವನ್ನು ಎಸಗಿದ್ದಾನೆ.

ಅಸಲಿಗೆ ಆಗಿದ್ದೇನು..?

ಆನಂದ್ ಠಾಕೂರ್​ಗೆ ಕೆಲವರು ಹಣವನ್ನು ಪಾವತಿಸಬೇಕಾಗಿತ್ತು. ಆದರೆ ಕೆಲ ನಿವಾಸಿಗಳು ಹಣವನ್ನು ಕೊಡಲು ನಿರಾಕರಿಸಿದ್ದಾರಂತೆ. ಹೀಗಾಗಿ ಆ ನಿವಾಸಿಗಳನ್ನು ಬೆದರಿಸಲು ಆನಂದ್ ಠಾಕೂರ್​ ಅವರ ಮನೆ ಮೇಲೆ ಬಾಂಬ್ ಮಾಡಲು ಮುಂದಾಗಿದ್ದ. ಇದೇ ವೇಳೆ ಮೊದಲು ಮನೆ ಮೇಲೆ ಬಾಂಬ್​ ಎಸೆದಿದ್ದಾನೆ. ಆದರೆ ಆ ಬಾಂಬ್​ ವಿಫಲವಾಗಿದೆ. ಬಳಿಕ ಇನ್ನೊಂದು ಬಾಂಬ್​​ ಹಾಕಿದ್ದಾನೆ. ಆದರೆ ಆ ಬಾಂಬ್​ ಏಕಾಏಕಿ ಸ್ಫೋಟಗೊಂಡು ಹೊಗೆ ಬಂದಿದೆ. ಕೂಡಲೇ ಆರೋಪಿ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ. ಇನ್ನು ಈ ಸಂಬಂಧ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಘಾಮಾಪುರ ಪೊಲೀಸ್ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಸಂಬಂಧ ಘಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಂಬ್​ ದಾಳಿ ಮಾಡಿ ಎಸ್ಕೇಪ್​ ಆದ ಆರೋಪಿಗಾಗಿ ಪೊಲೀಸ್ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದೇವರಿಗೆ ನಮಿಸಿ ಮನೆ ಮೇಲೆ ಬಾಂಬ್​ ದಾಳಿ ಮಾಡಿದ ಆಸಾಮಿ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/05/madhya-pradesh.jpg

Load More