Advertisment

ಮಳೆರಾಯ ಮಾಡಿದ ಅನಾಹುತ.. ಚಲಿಸುತ್ತಿದ್ದ ಬಸ್​​ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬಗಳು

author-image
Ganesh
Updated On
ಮಳೆರಾಯ ಮಾಡಿದ ಅನಾಹುತ.. ಚಲಿಸುತ್ತಿದ್ದ ಬಸ್​​ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬಗಳು
Advertisment
  • ಬಸ್ಸಿನಲ್ಲಿ ಮಕ್ಕಳು, ವಿದ್ಯಾರ್ಥಿಗಳೇ ಹೆಚ್ಚು ಮಂದಿ ಇದ್ದರು
  • ಕೆಲವು ಭಾಗಗಳಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತ
  • ವಿದ್ಯುತ್ ಕಂಬ ಉರುಳಿ ಬಿದ್ದ ಐದು ಮನೆಗಳು ಜಖಂ

ಮೈಸೂರು/ಮಂಡ್ಯ: ಚಲಿಸುತ್ತಿದ್ದ ಬಸ್​ ಮೇಲೆ ವಿದ್ಯುತ್ ಕಂಬಗಳು ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಸ್​ನಲ್ಲಿ ಮಹಿಳೆಯರು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಕಂಬಗಳು ಬಿದ್ದಿವೆ.. ಈ ವೇಳೆ ತಕ್ಷಣ ಸಾರ್ವಜನಿಕರು ಕರೆಂಟ್ ಕಟ್ ಮಾಡಿದ್ದಾರೆ. ಅದೃಷ್ಟವಶಾತ್​ ಕರೆಂಟ್ ಕಟ್ ಆಗಿದ್ದ ಕಾರಣ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Advertisment

ಇದನ್ನೂ ಓದಿ:ಆರ್​ಸಿಬಿಗೆ ಇವತ್ತು ಬಿಗ್​ ಡೇ.. ಪ್ಲೇಯಿಂಗ್-11ನಲ್ಲಿ ಆಗುತ್ತಾ ಭಾರೀ ಬದಲಾವಣೆ..?

ಜನ ಜೀವನ ಅಸ್ತವ್ಯಸ್ತ
ಮತ್ತೊಂದು ಕಡೆ ಜನಜೀವನ ಅಸ್ತವ್ಯಸ್ತವಾಗ್ಬಿಟ್ಟಿದೆ.. ಏಕಾಏಕಿ ಬಿರುಗಾಳಿ ಸಹಿತ ಆಲಿಕಲ್ಲಿನ ಮಳೆಯಾಗಿದೆ.. ಪರಿಣಾಮ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.. ಸಂಜೆ ವೇಳೆ ಕೆಲಸ ಮುಗಿಸಿ ಕಚೇರಿಗೆ ತೆರಳ್ತಿದ್ದವರು ಮಳೆಗೆ ಸಿಲುಕಿ ಪರದಾಡುವಂತಾಗಿತ್ತು. ವರುಣನ ಆರ್ಭಟಕ್ಕೆ ಮರಗಳು ಧರೆಗುಳಿದ್ದು, ಕಾರು, ಬೈಕ್​ಗಳು ಜಖಂ ಆಗಿವೆ.

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?

Advertisment

ಇತ್ತ ಮಂಡ್ಯದಲ್ಲೂ, ಧಾರಕಾರ ಮಳೆ ಸುರಿದ ಹಿನ್ನಲೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಂಡ್ಯದ ಬೀಡಿ ಕಾಲೋನಿಯಲ್ಲಿ ಐದುಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಘಟನೆ ನಡೆದಿದೆ. ಮನೆಗಳ‌ ಮೇಲೂ ಕಂಬಗಳು ಬಿದ್ದಿದ್ದು, ಪರಿಣಾಮ ಕೆಲ ಮನೆಗಳು ಜಖಂ ಆಗಿವೆ ಎನ್ನಲಾಗ್ತಿದೆ. ಸದ್ಯ ಬಿದ್ದ ಕಂಬಗಳನ್ನ ಚೆಸ್ಕಾಂ ಸಿಬ್ಬಂದಿ ತೆರವು ಮಾಡೋ ಕೆಲಸದಲ್ಲಿ ನಿರತರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment