Advertisment

ಮಂಡ್ಯ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ನೀರಿನ ಮಟ್ಟ ಎಷ್ಟಿದೆ ಗೊತ್ತಾ?

author-image
AS Harshith
Updated On
ಕಾವೇರಿ ನದಿಗೆ ಪ್ರಭಾವಿಗಳಿಂದಲೇ ಕನ್ನ; ಕರ್ನಾಟಕದಲ್ಲಿ ಕುಡಿಯೋ ನೀರಿಗೂ ಸಮಸ್ಯೆ..!
Advertisment
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ
  • ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ
  • ಮೈಸೂರು, ಕೊಡಗಿನಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?

ಮಂಡ್ಯ: ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ನಿನ್ನೆ ಸುರಿದ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. ಅತ್ತ ಕಾವೇರಿ ಜಲಾನಯದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರ ತನ್ನ ಒಳಡಲು ತುಂಬಿಕೊಳ್ಳಲು ಪರಿತಪಿಸುತ್ತಿದೆ.

Advertisment

ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ. ಮೈಸೂರಿನಲ್ಲಿ 49 ಮಿಲಿಮೀಟರ್​, ಕೊಡಗಿನಲ್ಲಿ 64 ಮಿಲಿಮೀಟರ್​ ಮಳೆಯಾಗಿದೆ. ಆದರೂ ಕೆಆರ್​ಎಸ್ ಒಡಲು ತುಂಬಬೇಕಿದೆ​.

ಇದನ್ನೂ ಓದಿ: ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 84.24 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.783 ಟಿಎಂಸಿ
ಒಳ ಹರಿವು - 1,467 ಕ್ಯೂಸೆಕ್
ಹೊರ ಹರಿವು - 547 ಕ್ಯೂಸೆಕ್

Advertisment

ಕೆಆರ್​ಎಸ್​ ಅದೆಷ್ಟೋ ಜನರಿಗೆ ಜೀವಾಳ. ಇದನ್ನೇ ನಂಬಿಕೊಂಡು ಬದುಕುವ ಜನರಿದ್ದಾರೆ. ಕೃಷಿಯಿಂದ ಹಿಡಿದು, ಬಾಯಾರಿಕೆ ನೀಗಿಸುತ್ತದೆ. ಹಾಗಾಗಿ ಈ ಬಾರಿ ಹೆಚ್ಚು ಮಳೆಯಾದರೆ ಕೆಆರ್​ಎಸ್​ ಡ್ಯಾಂ ತುಂಬುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment