Advertisment

‘ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಣ್ಣ’ ವಿಜಯೇಂದ್ರ ಅಧಿಕೃತ ಘೋಷಣೆ

author-image
Ganesh
Updated On
‘ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಣ್ಣ’ ವಿಜಯೇಂದ್ರ ಅಧಿಕೃತ ಘೋಷಣೆ
Advertisment
  • ಜನರಿಗಾಗಿ ಪ್ರಾಣ ಮುಡಿಪಾಗಿಡುವ ಕುಮಾರಣ್ಣ MP ಆಗಬೇಕು
  • ಕುಮಾರಸ್ವಾಮಿ ಭಾರೀ ಅಂತರದಿಂದ ಗೆಲ್ಲಬೇಕು ಎಂದ ವಿಜಯೇಂದ್ರ
  • ರಾಜ್ಯದ ಮೊದಲ ಫಲಿತಾಂಶ ಮಂಡ್ಯದ್ದಾಗಿರಬೇಕು ಎಂದ ಬಿಜೆಪಿ ರಾಜ್ಯಾಧ್ಯಕ್ಷ

‘ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುಮಾರಣ್ಣ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಣೆ ಮಾಡಿದ್ದಾರೆ. ಈ ಮೂಲಕ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

Advertisment

publive-image

ಬಿಜೆಪಿ-ಜೆಡಿಎಸ್ ನಾಯಕರ ಸಭೆ ಬಳಿಕ ಮಾತನಾಡಿರುವ ಬಿ.ವೈ.ವಿಜಯೇಂದ್ರ.. ಜನರಿಗಾಗಿ ಪ್ರಾಣ ಮುಡಿಪಾಗಿಡುವ ಜನನಾಯಕ ಕುಮಾರಣ್ಣ ಸಂಸದರಾಗಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಪಕ್ಷ ದೂಳಿಪಟ ಮಾಡುವ ಕೆಲಸ ಮಾಡ್ತಾರೆ. ಕುಮಾರಸ್ವಾಮಿ, ದೇವೇಗೌಡರು ರಾಜ್ಯ ಪ್ರವಾಸ ಮಾಡ್ತಾರೆ. ಚುನಾವಣೆಯನ್ನು ಚುನಾವಣೆ ರೀತಿ ಮಾಡೋಣ ಮೈಮರೆಯುವುದು ಬೇಡ. ರಾಜ್ಯದ ಮೊದಲ ಫಲಿತಾಂಶ ಮಂಡ್ಯದ್ದಾಗಿರಬೇಕು. ಕುಮಾರಸ್ವಾಮಿ ಅತಿ ಹೆಚ್ಚು ಅಂತರದಿಂದ ಗೆಲ್ಲಬೇಕು ಎಂದರು.

ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ.. ಮೌನ ಮುರಿದ ವರುಣ್ ಗಾಂಧಿ ಭಾವುಕ..!

ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿದೆ. ರಾಜ್ಯಕ್ಕೆ ದಾರುಣ ಪರಿಸ್ಥಿತಿ ಬಂದಿದೆ. ಬರಗಾಲ ಇದೆ, ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಸಿಎಂ ಸಿದ್ದರಾಮಯ್ಯ ಜನರ ಸಮಸ್ಯೆಗಳಿಗೆ ಎಳ್ಳಷ್ಟು ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂತಹ ಮುಖ್ಯಮಂತ್ರಿ ಪಡೆದದ್ದು ನಮ್ಮ ದುರಾದೃಷ್ಟಕರ. ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಕಾಂಗ್ರೆಸ್ ಸಾಧನೆ. ಮೂರನೇ ಬಾರಿಗೆ ಮೋದಿ ಪ್ರಧಾನಿಮಂತ್ರಿ ಮಾಡುವ ಸಂಕಲ್ಪ ನಮ್ಮದು. ಬಿಜೆಪಿ ಜೆಡಿಎಸ್‌ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಸಚಿವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಯೋಜನೆಯಲ್ಲಿ ಕಾಂಗ್ರೆಸ್ ಇತ್ತು‌. ಯಾವುದೇ ಒಬ್ಬ ಮಂತ್ರಿ ಅಭ್ಯರ್ಥಿ ಆಗುವ ಧೈರ್ಯ ಮಾಡಲಿಲ್ಲ. ಕಾರಣ ಮೋದಿ ಜನಪ್ರಿಯತೆ, ಬಿಜೆಪಿ ಜೆಡಿಎಸ್‌ ಮೈತ್ರಿ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment