newsfirstkannada.com

ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ.. ಮೌನ ಮುರಿದ ವರುಣ್ ಗಾಂಧಿ ಭಾವುಕ..!

Share :

Published March 28, 2024 at 12:58pm

    ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಆಗಿದ್ದರು

    ‘ಪತ್ರ ಬರೆಯುವಾಗ ಅಸಂಖ್ಯಾತ ನೆನಪುಗಳು ಭಾವುಕರನ್ನಾಗಿಸಿದೆ’

    ‘ಪಿಲಿಭಿತ್‌ನೊಂದಿಗಿನ ನನ್ನ ಸಂಬಂಧ ಕೊನೆ ಉಸಿರು ಇರುವವರೆಗೂ’

ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದ ವರುಣ್ ಗಾಂಧಿಗೆ ಟಿಕೆಟ್ ಮಿಸ್ ಆಗಿದೆ. ಬೆನ್ನಲ್ಲೇ ದೇಶದ ರಾಜಕಾರಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ವರುಣ್ ಗಾಂಧಿ ಮೌನ ಮುರಿದಿದ್ದಾರೆ.

‘ವಂದನೆಗಳು ಪಿಲಿಭಿತ್’ ಎಂದು ಕ್ಷೇತ್ರದ ಜನರಿಗೆ ಭಾವನಾತ್ಮಕವಾಗಿ ಪತ್ರ ಬರೆದಿರುವ ವರುಣ್ ಗಾಂಧಿ.. ಈ ಪತ್ರ ಬರೆಯುವಾಗ ಅಸಂಖ್ಯಾತ ನೆನಪುಗಳು ಭಾವುಕರನ್ನಾಗಿಸಿದೆ. 1983ರಲ್ಲಿ ಮೊದಲ ಬಾರಿಗೆ ತಾಯಿಯ ಬೆರಳು ಹಿಡಿದು ಪಿಲಿಭಿತ್‌ಗೆ ಬಂದಿದ್ದೆ. ಆಗ ನನಗೆ ಕೇವಲ 3 ವರ್ಷ. ಆ ಪುಟ್ಟ ಮಗು ಮುಂದೊಂದು ದಿನ ಈ ಭೂಮಿಯಲ್ಲಿ ಕೆಲಸ ಮಾಡುತ್ತದೆ. ಇಲ್ಲಿನ ಜನರೇ ಆತನ ಕುಟುಂಬ ಆಗಲಿದೆ ಅನ್ನೋದು ಹೇಗೆ ತಿಳಿದಿತ್ತು.. ನನಗೆ ನೆನಪಿದೆ..

ಇದನ್ನೂ ಓದಿ: RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್​ ನಿಗಿನಿಗಿ ಕೆಂಡ; ರೂಪೇಶ್ ರಾಜಣ್ಣ ಕೂಡ ತೀವ್ರ ಖಂಡನೆ..!

ಪಿಲಿಭಿತ್‌ನ ಮಹಾ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಪಿಲಿಭಿತ್‌ನಿಂದ ಪಡೆದ ಆದರ್ಶಗಳು, ಸರಳತೆ ಮತ್ತು ದಯೆ ಕೇವಲ ಸಂಸದನಾಗಿ ಮಾತ್ರವಲ್ಲದೆ ಓರ್ವ ಸಾಮಾನ್ಯ ವ್ಯಕ್ತಿಯಾಗಿಯೂ ನನ್ನ ಪಾಲನೆ ಮತ್ತು ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ನಿಮ್ಮ ಪ್ರತಿನಿಧಿಯಾಗಿರುವುದು ಜೀವನದ ಅತ್ಯಂತ ದೊಡ್ಡ ಗೌರವ.

ಸಂಸದನಾಗಿ ನನ್ನ ಅಧಿಕಾರಾವಧಿ ಮುಗಿಯಬಹುದು ಆದರೆ.. ಆದರೆ ಪಿಲಿಭಿತ್‌ನೊಂದಿಗಿನ ನನ್ನ ಸಂಬಂಧ ಕೊನೆ ಉಸಿರು ಇರುವವರೆಗೂ ಕೊನೆಗೊಳ್ಳಲ್ಲ. ಸಂಸದನಾಗಿ ಇಲ್ಲದಿದ್ದರೆ, ಮಗನಾಗಿ, ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ಬದ್ಧ. ನನ್ನ ಹೃದಯ ನಿಮ್ಮ ಸೇವೆಗಾಗಿ ತೆರೆದಿರುತ್ತದೆ.

ನಾನು ಸಾಮಾನ್ಯ ಜನರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಕೆಲಸ ಮುಂದುವರಿಸಿಕೊಂಡು ಹೋಗಲು ಆಶೀರ್ವಾದ ಕೋರುತ್ತೇನೆ. ನನ್ನ ಮತ್ತು ಪಿಲಿಭಿತ್ ನಡುವಿನ ಸಂಬಂಧವು ಪ್ರೀತಿ ಮತ್ತು ವಿಶ್ವಾಸದಿಂದ ಕೂಡಿದೆ. ಅದು ರಾಜಕೀಯ ಅರ್ಹತೆಗಿಂತ ಹೆಚ್ಚು. ನಾನು ನಿಮ್ಮೊಂದಿಗೆ ಇದ್ದೆ, ಇದ್ದೇನೆ ಮತ್ತು ನಿಮ್ಮವನಾಗಿರುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ.. ಮೌನ ಮುರಿದ ವರುಣ್ ಗಾಂಧಿ ಭಾವುಕ..!

https://newsfirstlive.com/wp-content/uploads/2024/03/MANEKA-GANDHI.jpg

Load More