Advertisment

ಇದು ಮಾವಿನ ಹಣ್ಣಿನ ಸೀಸನ್​.. ತಿನ್ನೋದು ಮಿಸ್​ ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ನಷ್ಟ!

author-image
AS Harshith
Updated On
ಇದು ಮಾವಿನ ಹಣ್ಣಿನ ಸೀಸನ್​.. ತಿನ್ನೋದು ಮಿಸ್​ ಮಾಡಿದ್ರೆ ನಿಮ್ಮ ಆರೋಗ್ಯಕ್ಕೆ ನಷ್ಟ!
Advertisment
  • ಮಾವಿನ ಹಣ್ಣಿನಿಂದ ಒಂದೆರಡಲ್ಲ ಹತ್ತಾರು ಲಾಭ
  • ಪೊಟ್ಯಾಸಿಯಂ​, ವಿಟಮಿನ್​ ಸಿ, ವಿಟಮಿನ್​ ಎ ಎಲ್ಲವೂ ಸಿಗುತ್ತೆ
  • ಜೀರ್ಣಕ್ರಿಯೆಗೂ ಸಹಾಯಕ, ತೂಕ ನಷ್ಟಕ್ಕೂ ಬೆಸ್ಟ್​ ಮ್ಯಾಂಗೋ ಹಣ್ಣು

ಮಾವಿನ ಕಾಯಿ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಮಾವಿನ ಹಣ್ಣಂತೂ ಬಾರಿ ರುಚಿ. ಸದ್ಯ ಮ್ಯಾಂಗೋ ಸೀಸನ್​​. ಮಾವಿನ ಹಣ್ಣಿಗೆ ಬಾರಿ ಡಿಮ್ಯಾಂಡ್​. ಡಿಮ್ಯಾಂಡ್​ಗೆ ತಕ್ಕಂತೆ ಬೆಲೆಯೂ ಅಷ್ಟೇ ಇದೆ. ಆದರೂ ಬೆಲೆ ಬದಿಗಿಟ್ಟು ಸೇವಿಸಿದರೆ ಆರೋಗಕ್ಕೆ ಹತ್ತಾರು ಲಾಭ ಸಿಗುತ್ತದೆ.

Advertisment

ಸೀಸನ್​ನಲ್ಲಿ ಸಿಗೋ ಲಾಭವಿದು

ಆಯಾಯ ಸೀಸನ್​ನಲ್ಲಿ ಸಿಗುವ ಹಣ್ಣುಗಳನ್ನು ತಿಂದರೆ ದೇಹಕ್ಕೆ ಹತ್ತು ಹಲವಾರು ಲಾಭ ಸಿಗುತ್ತದೆ. ಅದರಂತೆಯೇ ಸದ್ಯ ಮ್ಯಾಂಗೋ ಸೀಸನ್​ನಲ್ಲಿ ಮಾವಿನ ಹಣ್ಣಿನ ವಿವಿಧ ಪಾಕಗಳನ್ನು ಸೇವಿಸರೆ ಆರೋಗಕ್ಕೆ ಲಾಭವಿದೆ. ಜೊತೆಗೆ ಆರೋಗ್ಯವಂತರನ್ನಾಗಿ ಮಾಡುವ ಸಾಮರ್ಥ್ಯವಿದೆ.

ರೋಗವ ನಿರೋಧಕ ಶಕ್ತಿ

ಮಾವಿನ ಹಣ್ಣು ಸೇವಿಸಿದರೆ ದೇಹಕ್ಕೆ ಪೊಟ್ಯಾಸಿಯಂ​, ವಿಟಮಿನ್​ ಸಿ, ವಿಟಮಿನ್​ ಎ ಸಿಗಲಿದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತೆ

ಮಾವಿನಹಣ್ಣಿಗೆ ಜೀರ್ಣಕ್ರಿಯೆ ಸುಧಾರಿಸುವ ಗುಣವಿದೆ. ಪ್ರೋಟಿನ್​ ವಿಭಜನೆಗೆ ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್​ ಶಕ್ತಿಯನ್ನು ಕಡಿಮೆ ಮಾಡುವ ಶಕ್ತಿಯಿದೆ. ಇದಲ್ಲದೆ ವಿವಿಧ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಈ ಹಣ್ಣು ಹೊಂದಿದೆಯಂತೆ.

Advertisment

publive-image

ಲ್ಯುಕೇಮಿಯಾ ವಿರುದ್ಧ ಹೋರಾಡುತ್ತೆ

ಇದಲ್ಲದೆ ಲ್ಯುಕೇಮಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪ್ರಾಸ್ಟೇಟ್​​ ಮತ್ತು ಕರುಳಿನ ಕ್ಯಾನ್ಸರ್​ ಹೋಗಲಾಡಿಸುವ ಗುಣವನ್ನು ಹೊಂದಿದೆ.

ಇದನ್ನೂ ಓದಿ: ವಿಮಾನದ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ಛಿದ್ರಛಿದ್ರವಾದ ವ್ಯಕ್ತಿ

ಕಣ್ಣು ದೃಷ್ಟಿಗೆ ಸಹಾಯಕ

ಇನ್ನು ಬೀಟಾ ಕ್ಯಾರೋಟಿನ್​​ ಗುಣ ಇದರಲ್ಲಿದೆ. ಕಣ್ಣು ದೃಷ್ಟಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ತಿನ್ನುವುದರಿಂದ ಆರೋಗ್ಯವನ್ನು ಹತೋಟಿಗೆ ತರಬಹುದಾಗಿದೆ. ಜೊತೆಗೆ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ.

ತೂಕ ನಷ್ಟಕ್ಕೂ ಸಹಾಯಕ

ಇವಿಷ್ಟು ಮಾತ್ರವಲ್ಲದೆ ಉರಿಯೂತ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಮತ್ತೊಂದು ಸಂಗತಿ ಎಂದರೆ ವಯಸ್ಸಾಗುವುದನ್ನು ತಡೆಯುತ್ತದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment