newsfirstkannada.com

ಕಾಂಗ್ರೆಸ್ ಯುವ ಘಟಕಕ್ಕೆ ಮತ್ತೊಂದು ಬಲ.. ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಅಧಿಕಾರ ಸ್ವೀಕಾರ

Share :

Published March 28, 2024 at 7:04am

Update March 28, 2024 at 7:06am

  ಕಾಂಗ್ರೆಸ್ ಯುವ ಘಟಕಕ್ಕೆ ಕಾರ್ಯಾಧ್ಯಕ್ಷರ ಬಲ!

  ಲೋಕ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸೋ ಪಣ

  ಯುವ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ತುಂಬುವ ಶಪಥ ಮಾಡಿದ ಮಂಜುನಾಥ್ ಗೌಡ

ಲೋಕಸಭಾ ಅಖಾಡದಲ್ಲಿ ಗೆಲ್ಲಲೇಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ. ಚುನಾವಣೆಯಲ್ಲಿ ಕಾರ್ಯಕರ್ತರನ್ನ ಸಜ್ಜುಗೊಳಿಸಲು ಇದೀಗ ಕಾಂಗ್ರೆಸ್ ಯುವ ಘಟಕಕ್ಕೆ ಮತ್ತೊಂದು ಬಲ ಸಿಕ್ಕಿದೆ. ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಅಧಿಕಾರ ಸ್ವೀಕರಿಸಿದ್ದು, ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸೋ ಪಣ ತೊಟ್ಟಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಜನರಿಗೆ ಕಾಂಗ್ರೆಸ್ ಸರ್ಕಾರ ತಾವು ತಂದಿದ್ದ ಗ್ಯಾರಂಟಿ ಯೋಜನೆಗಳನ್ನ ತಲುಪಿಸುವ ಸಂಕಲ್ಪ ಹೊಂದಿದೆ. ಯುವ ಕಾರ್ಯಕರ್ತರನ್ನ ಮತ್ತಷ್ಟು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನಾಯಕರು ಮುಂದಾಗಿದ್ದಾರೆ. ಇದೀಗ ಇದೇ ಸಾಲಿಗೆ ಮತ್ತೊಬ್ಬ ಯುವ ನಾಯಕ ಸೇರ್ಪಡೆಯಾಗಿದ್ದು, ಕಾರ್ಯಾಧ್ಯಕ್ಷರಾಗಿ ಪಟ್ಟ ಕಟ್ಟಲಾಗಿದೆ.

ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಅಧಿಕಾರ

ಕೆಪಿಸಿಸಿ ಕಚೇರಿಯಲ್ಲಿ ನಡೆದ‌ ನ್ಯಾಯ ಗ್ಯಾರಂಟಿ ಬಿಡುಗಡೆ ಸಮಾರಂಭದಲ್ಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಅಧಿಕಾರ ಸ್ವೀಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, ಶಾಸಕರಾದ ರಿಜ್ವಾನ್ ಅರ್ಷದ್, ಮಂಜುನಾಥ್ ಬಂಡಾರಿ, ಜಿಸಿ ಚಂದ್ರಶೇಖರ ಸೇರಿದಂತೆ ಯುವ ಕಾಂಗ್ರೆಸ್‌ನ ಹಲವು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಾಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ಮಂಜುನಾಥ್ ಗೌಡ, ಯುವ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ತುಂಬುವ ಶಪಥ ಮಾಡಿದ್ರು. ಜೊತೆಗೆ ಡಿಸಿಎಂ ಅವರ ರಾಜಕೀಯ ಸಹಕಾರವನ್ನ ಸ್ಮರಿಸಿದ್ರು.

ಕಾರ್ಯಕ್ರಮದಲ್ಲಿ‌ ಭಾಗಿಯಾದ ಡಿಸಿಎಂ ಶಿವಕುಮಾರ್ ಮಾತನಾಡಿ, 14 ಮಂದಿ ಯುವಕರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಟಿಕೆಟ್ ನೀಡಲಾಗಿದೆ.. 2 ಕೋಟಿ ಉದ್ಯೋಗ ನೀಡ್ತೀವಿ ಅಂತಾ ಪ್ರಧಾನಿ ಹೇಳಿದ್ರು ಅದು ಕೊಟ್ಟಿಲ್ಲ. ಬದ್ಲಿ ಪಕೋಡ ಮಾರಾಟದ ಬಗ್ಗೆ ಕೊಟ್ಟ ಸಲಹೆಯನ್ನೇ ನಿರುದ್ಯೋಗ ಅಸ್ತ್ರವಾಗಿ ಜಳಪಿಸಿದ್ರು.

ಇದನ್ನೂ ಓದಿ: ಕಾಂಗ್ರೆಸ್​​ಗೆ ಕಗ್ಗಂಟಾದ ಚಿನ್ನದ ಕೋಟೆ; ಟಿಕೆಟ್​ ಪೆಂಡಿಂಗ್ ಇಟ್ಟ ‘ಕೈ’ ಪಡೆ; ಇಂದು ಸಂಜೆ ಎಲ್ಲಾ ಸಮಸ್ಯೆಗೆ ಮುಕ್ತಿ ಪಕ್ಕಾ?

ಇನ್ನು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಯುವ ಕಾರ್ಯಕರ್ತರು ಈ ಅದ್ದೂರಿ ಪದಗ್ರಹಣಕ್ಕೆ ಸಾಕ್ಷಿಯಾದ್ರು.. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ಪ್ರತಿಜ್ಞೆಗೈದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್ ಯುವ ಘಟಕಕ್ಕೆ ಮತ್ತೊಂದು ಬಲ.. ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಅಧಿಕಾರ ಸ್ವೀಕಾರ

https://newsfirstlive.com/wp-content/uploads/2024/03/manjunath-Gowda.jpg

Load More