newsfirstkannada.com

ರಾಯರ 353ನೇ ಆರಾಧನಾ ಮಹೋತ್ಸವ; ಮಂತ್ರಾಲಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಹೋದ ಜನಸಾಗರ 

Share :

Published August 21, 2024 at 9:57am

    ಮಂತ್ರಾಲಯದಲ್ಲಿಂದು ರಾಯರ ಮಧ್ಯಾರಾಧನೆ ಸಂಭ್ರಮ

    ವಿಜೃಂಭಣೆಯಿಂದ ನಡೆಯುತ್ತಿದೆ ರಾಯರ ಆರಾಧನೆ

    ಏಳು ದಿನಗಳ ರಾಯರ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ರಾಯರ 353ನೇ ಆರಾಧನಾ ಮಹೋತ್ಸವ ನಡೀತಿದೆ. ರಾಯರ ಮಠದಲ್ಲಿ ಪೂರ್ವಾರಾಧನೆ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳ ಜೊತೆ ಉತ್ಸವಗಳು ಶ್ರೀ ಮಠದಲ್ಲಿ ನಡೆದವು. ಆರಾಧನಾ ವೈಭವವನ್ನ ಭಕ್ತರು ದೇಶದ ಮೂಲೆಮೂಲೆಯಿಂದ ಆಗಮಿಸಿದ್ರು. ರಾಯರ ದರ್ಶನ ಪಡೆದು ಪಾವನರಾದ್ರು. ಇನ್ನೂ ಇವತ್ತು ರಾಯರ ಮಠದಲ್ಲಿ ಮಧ್ಯಾರಾಧನೆ ನಡೆಯಲಿದೆ.

ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಪವಿತ್ರ ಕ್ಷೇತ್ರ. ತುಂಗಭದ್ರಾ ತೀರದಲ್ಲಿರೋ ವಿಶೇಷ ಕ್ಷೇತ್ರ. ಈ ಕ್ಷೇತ್ರದಲ್ಲಿ ರಾಯರ ಆರಾಧನೆ ವಿಜೃಂಭಣೆಯಿಂದ ನಡೆಯುತ್ತಿದೆ.

ಇದನ್ನೂ ಓದಿ: ಭೀಕರ ಮಳೆ, ಸಿಡಿಲು ಬಡಿದು 6 ಸಾವು, ಮುಂದುವರೆದ ವರುಣಾರ್ಭಟ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಗುರು ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾದ ದಿನದ ಹಿಂದಿನ ದಿನವನ್ನ ಪೂರ್ವಾರಾಧನೆಯಾಗಿ ಆಚರಿಸಲಾಗುತ್ತದೆ. ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಸಂಭ್ರಮದಿಂದ ಪೂಜಿಸಲಾಗುತ್ತದೆ. ನಿನ್ನೆಯೂ ಸಹ ಮಠದ ಪ್ರಾಂಗಣದಲ್ಲಿ ರಾಯರು ರಚಿಸಿರುವ ಪರಿಮಳ ಗ್ರಂಥವನ್ನ ಪಲ್ಲಕ್ಕಿಯಲ್ಲಿ ಇಟ್ಟು ಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ತಮಿಳುನಾಡಿನ ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯದಿಂದ ಬಂದ ಶೇಷವಸ್ತ್ರವನ್ನ ಅದ್ದೂರಿಯಾಗಿ ಸ್ವಾಗತಿಸಲಾಯಿತು, ರಾಯರಿಗೆ ಶೇಷವಸ್ತ್ರ ಸಮರ್ಪಿಸಲಾಯಿತು.

ಇದನ್ನೂ ಓದಿ: ಲೀಕ್​ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ

ರಾಯರು 700 ವರ್ಷಕಾಲ ವೃಂದಾವನದಲ್ಲಿರುತ್ತಾರೆ ಅನ್ನೋ ಪ್ರತೀತಿಯಿದೆ. ಈ ಹಿನ್ನೆಲೆ ಪ್ರತಿ ವರ್ಷ ಪೂರ್ವಾರಾಧನೆ ಹಿನ್ನೆಲೆ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂತ್ರಾಲಯದಲ್ಲಿ ನಡೆಯುತ್ತವೆ. ಬೆಳಗ್ಗೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ನಡೆದಿದ್ದು, ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ಕಾರ್ಯಕ್ರಮ ನಡೆದಿವೆ.

ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್​​ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ?

ರಾಯರ ಏಳು ದಿನಗಳ ಆರಾಧನಾ ಮಹೋತ್ಸವದಲ್ಲಿ ‌ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಈ ಮೂರು ದಿನಗಳು‌ ಅತಿ ಮಹತ್ವವಾಗಿವೆ. ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾಗಿರುವ ಈ ದಿನಗಳಲ್ಲಿ ರಾಯರ ದರ್ಶನ ಪಡೆದರೆ ಸಕಲ ಸಂಕಷ್ಟಗಳು ದೂರಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು, ಭಜನಾ ಮಂಡಳಿಗಳು ಆಗಮಿಸಿ ರಾಯರಿಗೆ ಭಕ್ತಿ ಸೇವೆಯನ್ನ ಸಮರ್ಪಿಸುತ್ತಿದ್ದಾರೆ.

ಇದನ್ನೂ ಓದಿ: Mysore Dasara 2024: ಗಜಪಯಣಕ್ಕೆ ಚಾಲನೆ.. ಇಂದು ಮೈಸೂರಿಗೆ ಆಗಮಿಸಲಿರೋ ಅಭಿಮನ್ಯು ಮತ್ತು ಟೀಂ

ಪೂರ್ವಾಧನೆ ಹಿನ್ನೆಲೆ ಸಂಜೆ ವೇಳೆ ಮಠದ ಪ್ರಾಂಗಣದಲ್ಲಿ ವಿವಿಧ ಸಾಂಸ್ಕೃತಿಕ‌ ಕಾರ್ಯಕ್ರಮಗಳು ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಮಹನಿಯರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ಒಟ್ಟಾರೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಪ್ತರಾತ್ರೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಭಕ್ತರು ಸಹ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ರಾಯರ ಮೊರೆ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಯರ 353ನೇ ಆರಾಧನಾ ಮಹೋತ್ಸವ; ಮಂತ್ರಾಲಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಹೋದ ಜನಸಾಗರ 

https://newsfirstlive.com/wp-content/uploads/2024/08/mantralaya-1.jpg

Load More