newsfirstkannada.com

ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಗೆ ಅದ್ದೂರಿ ಚಾಲನೆ.. ಎಷ್ಟು ದಿನಗಳ ಕಾಲ ನಡೆಯುತ್ತದೆ..?

Share :

Published March 20, 2024 at 7:09am

    ಗುರು ಹಿರಿಯ ಪುರೋಹಿತರ ಮುಂದಾಳತ್ವದಲ್ಲಿ ಮೂಹೂರ್ತ

    ಶೋಭಾಯಾತ್ರೆ ಬಳಿಕ ಗದ್ದುಗೆಯಲ್ಲಿ ಅಮ್ಮನವರ ಪ್ರತಿಷ್ಠಾಪನೆ

    ಸಂಪ್ರದಾಯ ಉಡುಗೆ ಧರಿಸಿ ನೃತ್ಯ ಮಾಡಿದ ನೂರಾರು ಮಹಿಳೆಯರು

ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆ ಅಂತ ಹೆಗ್ಗಳಿಕೆ ಪಡೆದಿರೋ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಕ್ತಿ ದೇವತೆ ಮಾರಿಕಾಂಬಾ ಜಾತ್ರೆ ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ಜಾತ್ರೆಯ ಮುಂಚಿತವಾಗಿ ನಡೆಯೋ ವಿವಿಧ ಧಾರ್ಮಿಕ ಕಾರ್ಯಗಳಿಗೆ ಶಾಸ್ತ್ರೋಕ್ತವಾಗಿ ಹಿರಿಯ ಪುರೋಹಿತರ ಮುಂದಾಳತ್ವದಲ್ಲಿ ಮೂಹೂರ್ತ ಮಾಡಿ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದೇವಿ ಗದ್ದುಗೆಗೆ ಬರುವ ಮೊದಲು ನಡೆಯು ಕಲ್ಯಾಣೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದೆ.

ಇದನ್ನು ಓದಿ: KCR ಪುತ್ರಿಗೆ ‘ಅಕ್ಕ’ ಎಂದು ಜೈಲಿಗೆ ವೆಲ್​ಕಮ್ ಮಾಡಿದ ವಂಚಕ ಸುಕೇಶ್.. AAPಗೂ ಕಾದಿದೆಯಾ ಆಪತ್ತು?

ಉತ್ತರ ಕನ್ನಡ ಜಿಲ್ಲೆಯ ಮಲೆನಾಡ ಮಡಿಲಲ್ಲಿ ನೆಲೆ ನಿಂತಿರೋ ಶಕ್ತಿ ದೇವತೆ ಮಾರಿಕಾಂಬಾ ದೇವಿಯ ಜಾತ್ರೆ ಪ್ರಾರಂಭವಾಗಿದೆ. ದಕ್ಷಿಣ ಭಾರತದಲ್ಲೇ ಅತಿದೊಡ್ಡ ಜಾತ್ರೆ ಅಂತ ಪ್ರಸಿದ್ಧಿ ಪಡೆದ ಮಾರಿಕಾಂಬಾ ಜಾತ್ರೆ ಮಾರ್ಚ್ 27ರವರೆಗೆ ನಡೆಯಲಿದ್ದು, ದೇವಿಯ ಕಲ್ಯಾಣೋತ್ಸವ ಅದ್ಧೂರಿಯಾಗಿ ಜರುಗಿತು. ಶ್ರೀದೇವಿಯ ಮದುವೆಯ ಸಂಪ್ರದಾಯದಂತೆ ಶ್ರೀದೇವಿಗೆ ಮಂಗಳ ಸೂತ್ರ ಧಾರಣೆ, ಗುಡಿಗಾರರ ದ್ರಷ್ಟಿ ಪೂಜೆ, ನಾಡಿಗರ ಪೂಜೆ, ಚಕ್ರಸಾಲಿ ಪೂಜೆ, ಕೇದಾರಿಮನೆತನದ ಪೂಜೆ ಹಾಗೂ ಪೂಜಾರರ ಪೂಜೆಗಳು ನೆರವೇರಿದವು. ದೇವಿಯ ಕಲ್ಯಾಣೋತ್ಸವದಲ್ಲಿ ವಿಶೇಷವಾಗಿ ನಾಡಿಗರು, ಬಾಬುದಾರರು ಊರ ಗಣ್ಯರು ಸಕಲ ಭಕ್ತಾದಿಗಳು ಪಾಲ್ಗೊಂಡಿದ್ದರು. ವಿಶೇಷವಾಗಿ ಮಹಿಳೆಯರು ತಮ್ಮ ಸಂಪ್ರದಾಯ ಉಡುಗೆ ಧರಿಸಿ ನೃತ್ಯ ಮಾಡಿದ್ದು ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿತು.

ಮುಂಜಾನೆ ಶ್ರೀದೇವಿಯನ್ನು ರಥದ ಮೇಲೆ ಪ್ರತಿಷ್ಠಾಪನೆ ಮಾಡುವ ಮೊದಲು ಭೂತರಾಜನಿಗೆ ಸಾತ್ವಿಕ ಬಲಿ ಸಮರ್ಪಣೆ ಮಾಡಲಾಯ್ತು. ಬಳಿಕ ರಥೋತ್ಸವದೊಂದಿಗೆ ಶ್ರೀದೇವಿಯ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಮಾರಿ ಗುಡಿಯಿಂದ ಊರ ಮದ್ಯದ ಬಿಡಕಿ ಬೈಲಿನ ಜಾತ್ರಾ ಗದ್ದುಗೆಗೆ ತರಲಾಯ್ತು.

ಈ ವೇಳೆ ಹರಕೆ ಹೊತ್ತ ಭಕ್ತರು ಹಾರುಗೋಳಿ ಅಂದರೆ ಕೋಳಿಯನ್ನು ಹಾರಿ ಬಿಟ್ಟು, ಹರಕೆ ತೀರಿಸಿದ್ರು. ಶೋಭಾಯಾತ್ರೆ ಮುಗಿದ ಮೇಲೆ ಅಮ್ಮನವರನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯ್ತು. ಒಟ್ಟಾರೆ ದೇವಿಯ ಪ್ರತಿಷ್ಠಾಪನಾ ಕಾರ್ಯದ ಮೂಲಕ ಶಿರಸಿ ಮಾರಿಕಾಂಬಾ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. 8 ದಿನಗಳ ಕಾಲ ಜಗನ್ಮಾತೆ ಸಕಲ ಸರ್ವಾಲಂಕಾರ ಭೂಷಿತಳಾಗಿ ಭಕ್ತರಿಗೆ ದರ್ಶನ ಭಾಗ್ಯ ನೀಡಲಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಗೆ ಅದ್ದೂರಿ ಚಾಲನೆ.. ಎಷ್ಟು ದಿನಗಳ ಕಾಲ ನಡೆಯುತ್ತದೆ..?

https://newsfirstlive.com/wp-content/uploads/2024/03/srs-jatre.jpg

Load More