ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಮುಂಬೈ; ರೋಹಿತ್​ ಆಪ್ತನಿಗೆ ಮುಖ್ಯ ಕೋಚ್​​ ಪಟ್ಟ

author-image
Ganesh Nachikethu
Updated On
ಹಾರ್ದಿಕ್​ಗೆ ಬಿಗ್​ ಶಾಕ್​​.. ರೋಹಿತ್​ ಶರ್ಮಾಗೆ ಬಿಗ್​ ಆಫರ್​ ಕೊಟ್ಟ ಮುಂಬೈ ಇಂಡಿಯನ್ಸ್​!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​​
  • ಐಪಿಎಲ್​​ ಲೀಗ್​​ಗಾಗಿ ಕಾಯುತ್ತಿರೋ ಇಡೀ ಕ್ರೀಡಾಲೋಕ
  • ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಮುಂಬೈ ಟೀಮ್​​

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ಗಾಗಿ ಇಡೀ ಕ್ರೀಡಾಲೋಕವೇ ಕಾಯುತ್ತಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಇದರ ಮಧ್ಯೆ ಬಿಸಿಸಿಐ ಮೆಗಾ ಹರಾಜು ಸೌದಿ ಅರೇಬಿಯಾ ಅಥವಾ ಸಿಂಗಾಪುರದಲ್ಲಿ ನಡೆಯಬಹುದು ತಿಳಿಸಿದೆ. ಈ ಹೊತ್ತಲ್ಲೇ ಮುಂಬೈ ಇಂಡಿಯನ್ಸ್​​ನಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.

ಮಾರ್ಕ್ ಬೌಚರ್ ವಜಾ!

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾರ್ಕ್ ಬೌಚರ್ ಅವರನ್ನು ಹೆಡ್​ ಕೋಚ್​​ ಸ್ಥಾನದಿಂದ ವಜಾ ಮಾಡಿದೆ. ಇವರ ಬದಲಿಗೆ ಶ್ರೀಲಂಕಾದ ಮಾಜಿ ದಿಗ್ಗಜ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಕೋಚ್ ಆಗಿ ನೇಮಿಸಿದೆ.

publive-image

ಯಾರು ಈ ಜಯವರ್ಧನೆ?

ಮಹೇಲಾ ಜಯವರ್ಧನೆ ಈ ಹಿಂದೆ 2017 ರಿಂದ 2022 ರವರೆಗೆ ಮುಂಬೈ ತಂಡದ ಮುಖ್ಯ ಕೋಚ್ ಆಗಿದ್ದರು. ಇವರ ಅವಧಿಯಲ್ಲಿ ಮುಂಬೈ ಇಂಡಿಯನ್ಸ್​ ಮೂರು ಸಲ ಕಪ್​ ಗೆದ್ದಿದೆ. ಜಯವರ್ಧನೆ ಮತ್ತು ರೋಹಿತ್ ಶರ್ಮಾ ಉತ್ತಮ ಸಂಬಂಧ ಹೊಂದಿದ್ರು.

ಹಾರ್ದಿಕ್ ಪಾಂಡ್ಯಗೆ ಬಿಗ್​ ಶಾಕ್​

ಕಳೆದ ಸೀಸನ್​ನಲ್ಲಿ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಕಟ್ಟಲಾಗಿದೆ. ಹಾರ್ದಿಕ್ ಮುಂಬೈಗೆ ಬಂದಾಗ ಅಂದಿನ ಮುಖ್ಯ ಕೋಚ್ ಮಾರ್ಕ್ ಬೌಚರ್ ಸಮರ್ಥಿಸಿಕೊಂಡಿದ್ದರು. ಬೌಚರ್ ಮತ್ತು ಹಾರ್ದಿಕ್ ಮಧ್ಯೆ ಸಂಬಂಧ ಚೆನ್ನಾಗಿತ್ತು. ಈಗ ಜಯವರ್ಧನೆ ಹೊಸ ಕೋಚ್​ ಆಗಿದ್ದು, ಮುಂದೇನು ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ನಂಬಿಕೆ ಕಳ್ಕೊಂಡ ಯುವರಾಜ್​ ಸಿಂಗ್​ ಶಿಷ್ಯ; ಟೀಮ್​ ಇಂಡಿಯಾದಲ್ಲಿ ಮತ್ತೆ ಚಾನ್ಸ್​ ಸಿಗೋದು ಡೌಟ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment