/newsfirstlive-kannada/media/post_attachments/wp-content/uploads/2024/09/smartphone.jpg)
ಪ್ರತಿಯೊಂದು ಆ್ಯಪ್​ಗಳು ಬಳಕೆದಾರರ ಡೇಟಾವನ್ನು ಹಿಡಿದಿಟ್ಟುಕೊಂಡಿರುತ್ತವೆ. ಅಷ್ಟೇ ಏಕೆ ಸಂದೇಶಗಳನ್ನು ಸಂಗ್ರಹಿಸಿಕೊಂಡಿರುತ್ತವೆ. ಆದರೆ ಗ್ರಾಹಕನ ಸಂಭಾಷಣೆಯನ್ನು ಕದ್ದಾಲಿಸುತ್ತಿವೆಯಾ? ಅಥವಾ ಕೇಳುತ್ತಿವೆಯಾ? ಎಂಬ ಬಗ್ಗೆ ಬಹುತೇಕ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಗೊತ್ತಿಲ್ಲ. ಆದರೀಗ ಈ ಕುರಿತಾಗಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದ್ದು, ಸ್ಮಾರ್ಟ್​ಫೋನ್​ ಬಳಕೆದಾರನ ಫೋನ್​ ಕರೆಯನ್ನು ಆಲಿಸುವ ಬಗ್ಗೆ ಮಾರ್ಕೆಟಿಂಗ್​ ಸಂಸ್ಥೆಯೊಂದು ಒಪ್ಪಿಕೊಂಡಿದೆ.
ಗೂಗಲ್​​ ಮತ್ತು ಫೇಸ್​ಬುಕ್​​ ಗ್ರಾಹಕ ಸಂಸ್ಥೆಯೊಂದು ಈ ಬಗ್ಗೆ ಹೇಳಿಕೊಂಡಿದೆ. ಮಾಹಿತಿ ಸಂಗ್ರಹಿಸಲು ಫೋನ್​ನ ಮೈಕ್ರೋಫೋನನ್ನು ಬಳಸುತ್ತಿದೆ ಎಂದು ತಪ್ಪೊಪ್ಪಿಕೊಂಡಿದೆ.
ಬಹುತೇಕರು ಗೂಗಲ್​ ಅಥವಾ ಇನ್ನಿತರ ಸರ್ಚಿಂಗ್​​ ಸೈಟ್​​ನಲ್ಲಿ ಅಗತ್ಯವಿರುವ ಪ್ರಾಡೆಕ್ಟ್​ ಖರೀದಿಸಲು ಹುಡುಕಾಡುತ್ತಾರೆ. ಆದರೆ ಕೆಲವು ಹೊತ್ತಿನ ಬಳಿಕ ಆ ಪ್ರಾಡೆಕ್ಟ್​ಗಳು ಇನ್ನಿತರ ಸೈಟ್​​ನಲ್ಲಿ ಕಾಣಿಸಲು ಶುರುವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲೂ ಆ ಪ್ರಾಡೆಕ್ಟ್​ನ ಜಾಹೀರಾತುಗಳು ಕಾಣಸಿಗುತ್ತವೆ. ಆದರೀಗ ವ್ಯಕ್ತಿ ಸ್ಮಾರ್ಟ್​ಫೋನ್​ನಲ್ಲಿ ಮಾತನಾಡಿದ ಬ್ರ್ಯಾಂಡ್​ ಕುರಿತ ಮಾಹಿತಿಯನ್ನು ಆಲಿಸುತ್ತಿದೆ ಎಂಬ ಸಂಗತಿ ಹೊರಬಿದ್ದಿದೆ​.
404 ಮೀಡಿಯಾ ಕೂಡ ಈ ಕುರಿತಾಗಿ ಮಾಹಿತಿ ಪ್ರಕಟಿಸಿದೆ. ನೀವು ಹುಡುಕಾಡುವ ವಿಷಯ ಮಾತ್ರವಲ್ಲ, ಫೋನ್​ನಲ್ಲಿ ಏನು ಮಾತನಾಡುತ್ತೀರಿ ಎಂಬುದನ್ನು ಆಲಿಸಿ ಅದಕ್ಕೆ ಅನುಗುಣವಾಗಿ ಜಾಹೀರಾತು ಒದಗಿಸುತ್ತದೆ ಎಂದು ಹೇಳಿದೆ.
ಆಕ್ಟೀವ್​ ಲಿಸನಿಂಗ್​ ಸಾಫ್ಟ್​ವೇರ್​
ಟಿವಿ ಮತ್ತು ರೇಡಿಯೋ ಸುದ್ದಿಗಳನ್ನು ಪಸರಿಸುವ ಕಾಕ್ಸ್​ ಮೀಡಿಯಾ ಗ್ರೂಪ್​ ಈ ವಿಚಾರವನ್ನು ಬಹಿರಂಗಪಡಿಸಿದೆ. ಕರೆಯನ್ನು ಆಲಿಸುವ, ವಿಶ್ಲೇಷಿಸುವ ಮೂಲಕ ಡೇಟಾ ಸಂಗ್ರಹಿಸಲು AIಯನ್ನು ಬಳಸುತ್ತಿದೆ. ಜೊತೆಗೆ ಜಾಹೀರಾತುದಾರರಿಗೆ ಧ್ವನಿ ಡೇಟಾವನ್ನು ಸಂಯೋಜಿಸಲು ಅನುಮತಿಸುತ್ತದೆ ಎಂಬ ಸಂಗತಿಯನ್ನು ಹೇಳೀದೆ.
ಇದನ್ನೂ ಓದಿ: EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ
ಇದರ ಜೊತೆಗೆ ಕಂಪನಿಯು ಸಂಭಾಷಣೆ ಮತ್ತು ಆನ್​ಲೈನ್​​ ಹುಡುಕಾಟದ ಡೇಟಾವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. AI ಸಾಫ್ಟ್​​ವೇರ್​ಗಳು 470+ ಮೂಲಗಳಿಂದ ಡೇಟಾ ಸಂಗ್ರಹವಾಗುತ್ತದೆ ಎಂಬುದನ್ನು ಗಮನಿಸಿದೆ.
ಅಮೆಜಾನ್​​ ಮತ್ತು ಮೆಟಾ ಫ್ಲಾಟ್​​ಫಾರ್ಮ್​​ ಮಾರ್ಕೆಟಿಂಗ್​ ಸಂಸ್ಥೆಗೆ ಸಂಬಂಧಿಸಿರುವುದರಿಂದ 2 ಕಂಪನಿಗಳು ಈ ವಿಚಾರಕ್ಕೆ ಹೆಚ್ಚು ಗಮನಹರಿಸಿದೆ. ಡೇಟಾವನ್ನು ಸಂಪೂರ್ಣವಾಗಿ ಸಂಗ್ರಹಿಸುವ ವಿಚಾರವಾಗಿ ಮೆಟಾವನ್ನು ಪ್ರೇರೇಪಿಸಿದೆ. ಇದು ಒಪ್ಪಂದವನ್ನು ಉಲ್ಲಂಘಿಸಿ ಬಳಕೆದಾರನ ನಂಬಿಕೆಗೆ ಮೋಸ ಮಾಡುತ್ತಿದೆಯಾ ಎಂದು ಪರಿಶೀಲಿಸುತ್ತಿವೆ.
ಅತ್ತ ಅಮೆಜಾನ್​​ ಮಾರ್ಕೆಟಿಂಗ್​​ ಏಜೆನ್ಸಿ ಜೊತೆಗಿನ ಡೇಟಾ ಗೌಪ್ಯತೆ ವಿಚಾರದಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ಬಳಕೆದಾರರ ಡೇಟಾ ರಕ್ಷಿಸುವ ಮತ್ತು ಮಾನದಂಡ ಎತ್ತಿಹಿಡಿಯುವಂತೆ ಹೇಳಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾರ್ಕೆಟಿಂಗ್​​ ಸಂಸ್ಥೆಗೆ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ