/newsfirstlive-kannada/media/post_attachments/wp-content/uploads/2024/05/Swift-Car-1.jpg)
ಮಾರುತಿ ಸುಜುಕಿ ಹೊಸ ಸ್ವಿಫ್ಟ್​ ಕಾರನ್ನು ತಯಾರಿಸಿದ್ದು, ಭಾರತದ ರೋಡಲ್ಲಿ ಸಂಚರಿಸಲು ಸಿದ್ಧವಾಗಿದೆ. ಅಂದಹಾಗೆಯೇ ನೂತನ ಕಾರು ಇದೇ ಮೇ9 ರಂದು ರಸ್ತೆಗಿಳಿಯಲಿದೆ.
ಮಾರುತಿ ಸುಜುಕಿ ತಯಾರಿಸಿದ ನೂತನ ಸ್ವಿಫ್ಟ್​ ಕಾರು ಹೊಸ ಅವತಾರದ ಜೊತೆಗೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇನ್ನು 7 ದಿನಗಳಲ್ಲಿ ನೂತನ ಕಾರು ಭಾರತದ ರಸ್ತೆಯಲ್ಲಿ ಓಡಾಡಲಿದೆ. ಆದರೆ ಅದಕ್ಕೂ ಮುನ್ನ ಕಾರು ಪ್ರಿಯರಿಗೆ ಬುಕ್​ ಮಾಡುವ ಅವಕಾಶ ನೀಡಿದೆ.
ಹೊಸ ಮಾರುತಿ ಸ್ವಿಫ್ಟ್​ ಕಾರನ್ನು ಬುಕ್​ ಮಾಡಲು ಅವಕಾಶವನ್ನು ಕಾರು ಪ್ರಿಯರಿಗೆ ತೆರೆದಿಟ್ಟಿದೆ. ಮುಂಗಡವಾಗಿ 11 ಸಾವಿರ ಟೋಕನ್​ ಹಣವನ್ನು ನೀಡುವ ಮೂಲಕ ಕಾರನ್ನು ಖರೀದಿಸಬಹುದಾಗಿದೆ. ಅಂದಹಾಗೆಯೇ ಹೊಸ ಮಾರುತಿ ಸ್ವಿಫ್ಟ್​ 4ನೇ ಜನರೇಶನ್​ ಆಗಿದೆ.
ಹೊಸ ಪವರ್​ಟ್ರೈನ್​ನೊಂದಿಗೆ 1.2 ಲೀಟರ್​, 3 ಸಿಲಿಂಡರ್​, ಪೆಟ್ರೋಲ್​ ಎಂಜಿನ್​ನೊಂದಿಗೆ ಬರುತ್ತಿದೆ. ಇದು ಕೆ12 ಫೋರ್​ ಸಿಲಿಂಡರ್​ ಎಂಜಿನ್​ನಿಂದ ಬದಲಾವಣೆ ಪಡೆದಿದೆ.ಇದಲ್ಲದೆ, ಹೈಬ್ರಿಡ್​ ಟೆಕ್ನಾಲಜಿ, ಸಿಕ್ಸ್​ ಸ್ವೀಡ್​ ಟಾರ್ಕ್​ ಕನ್ವರ್ಟರ್​ ಇದರಲ್ಲಿದೆ.
ನೂತನ ಸ್ವಿಫ್ಟ್​ ಕಾರು ಹುಂಡೈ ಗ್ರಾಂಡ್​​ ಐ10 ನಿಯೋಸ್​, ಟಾಟಾ ಟಿಯಾಗೊ ಮತ್ತು ಸಿಟ್ರೋಯೆನ್​ ಸಿ3 ವಿರುದ್ಧ ಪೈಪೋಟಿ ನೀಡಲಿದೆ. ಇನ್ನು ನೂತನ ಕಾರಿನ ಬೆಲೆ 6.24 ಲಕ್ಷದಿಂದ 8.83 ಲಕ್ಷದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us