newsfirstkannada.com

ಹುಬ್ಬಳ್ಳಿ, ಉಡುಪಿ, ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ; ಇನ್ನೂ 5 ದಿನ ರಾಜ್ಯದಲ್ಲಿ ಭರ್ಜರಿ ವರ್ಷಧಾರೆ; ಎಲ್ಲೆಲ್ಲಿ ಅಲರ್ಟ್?

Share :

Published May 14, 2024 at 5:18pm

  ಬಿಸಿಲಿನ ಶಾಖದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ಸಿಂಚನದಿಂದ ಖುಷ್​​

  ರಾಜ್ಯದ ಜನತೆಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ ಹವಾಮಾನ ತಜ್ಞರು

  ಸಿಲಿಕಾನ್​ ಸಿಟಿಯಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ

ಬಿಸಿಲಿನ ಶಾಖದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಮುಂದಿನ ಐದು ದಿನಗಳ ಕಾಲ ಸಿಲಿಕಾನ್​ ಸಿಟಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ ಅಂತ ಮಾಹಿತಿ ನೀಡಿದ್ದಾರೆ.

ಇಂದು ಉತ್ತರ ಒಳನಾಡು ಹಾಗೂ ಕರಾವಳಿ ಕಡೆಗಳಲ್ಲಿ ಮಾತ್ರ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ನಿನ್ನೆ ಮಂಡ್ಯದಲ್ಲಿ 9 ಸೆಂ.ಮೀ ಮಳೆಯಾಗಿದ್ದು, ಬೆಳಗಾವಿಯಲ್ಲಿ 6 ಸೆಂ.ಮೀ​, ಮೈಸೂರಿನಲ್ಲಿ 5 ಸೆಂ.ಮೀ​ ಮಳೆಯಾಗಿದೆ. ಮೇ 14ರಿಂದ 18ರವರೆಗೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಸಾಧರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಮೇತ ಭಾರೀ ಮಳೆಯಾಗಿದೆ ಎಂದು ಹವಾಮಾನ ತಜ್ಞರು ಎಚ್ಚರಿಗೆ ನೀಡಿದ್ದಾರೆ.

ಚಿಕ್ಕಮಗಳೂರುನಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಧಾರಕಾರ ಮಳೆಯಾಗುತ್ತಿದೆ. ‌ಮಳೆಯಿಂದ ಪ್ರವಾಸಿಗರು ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಧಾರಾಕಾರ ಮಳೆಯಿಂದ ರೈತರು ಹಾಗೂ ಕೃಷಿಕರಲ್ಲಿ ಸಂತಸ ಮನೆ ಮಾಡಿದೆ. ಸತತ ಮಳೆಯಾದರೇ ತುಂಗಾ ನದಿ ಹರಿವು ಕೊಂಚ ಏರಿಕೆಯಾಗೋ ಸಾಧ್ಯತೆ ಇದೆ. ಇತ್ತ ಉಡುಪಿಯಲ್ಲೂ ಗುಡುಗು‌ ಸಹಿತ ಧಾರಾಕಾರ ಮಳೆಯಾಗುತ್ತಿದೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೀಗಾಗಿ ಸಿಲಿಕಾನ್​ ಸಿಟಿ ಮಂದಿ ಮನೆಯಿಂದ ಆಚೆ ಬರುವ ಮುನ್ನ ಛತ್ರಿ, ರೈನ್ ಕೋಟ್ ನಿಮ್ಮ ಬ್ಯಾಗ್​ನಲ್ಲಿ ಇದ್ದರೆ ಮಳೆಯಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು. ಸಂಜೆಯಾಗುತ್ತಿದ್ದಂತೆ ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಡುವ ಮಳೆಯಿಂದ ತಪ್ಪಿಸಿಕೊಳ್ಳು ವಾಹನ ಸವಾರರು ಬೇಗ ಮನೆ ಸೇರಿದರೆ ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಬ್ಬಳ್ಳಿ, ಉಡುಪಿ, ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ; ಇನ್ನೂ 5 ದಿನ ರಾಜ್ಯದಲ್ಲಿ ಭರ್ಜರಿ ವರ್ಷಧಾರೆ; ಎಲ್ಲೆಲ್ಲಿ ಅಲರ್ಟ್?

https://newsfirstlive.com/wp-content/uploads/2024/05/rain27.jpg

Load More