Advertisment

CSK vs RCB ನಡುವೆ ಹೈ-ವೋಲ್ಟೇಜ್ ಪಂದ್ಯ.. ಹವಾಮಾನ ಇಲಾಖೆ ನೀಡಿದ ಮಾಹಿತಿ ಏನು..?

author-image
Ganesh
Updated On
RCB: ಪ್ಲೇ ಆಫ್​ಗೆ ಹೋಗಲು ಆರ್​ಸಿಬಿಗಿರುವ ಕಠಿಣ   ಸವಾಲುಗಳಿವು! ಇದರಲ್ಲಿ ಪಾಸ್​ ಆದ್ರೆ ‘ಕಪ್​ ನಮ್ದೇ’
Advertisment
  • ಆರ್​ಸಿಬಿ ಮತ್ತು ಚೆನ್ನೈ ನಡುವೆ ಶನಿವಾರ ಹೈ-ವೋಲ್ಟೇಜ್ ಪಂದ್ಯ
  • ಆರ್​ಸಿಬಿ ತಂಡವು ಸಿಎಸ್​ಕೆ ವಿರುದ್ಧ ಗೆದ್ದರೆ ಮಾತ್ರ ಪ್ಲೇ-ಆಫ್​
  • ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30ಕ್ಕೆ ಪಂದ್ಯ

IPL 2024 ಅಂತಿಮ ಹಂತ ತಲುಪುತ್ತಿದ್ದು, ಪ್ಲೇ ಆಫ್ಸ್ ಕದನವು ತುಂಬಾ ಕುತೂಹಲಕಾರಿಯಾಗಿದೆ. ಇದರ ಮಧ್ಯೆ ಮಳೆರಾಯ ಪಂದ್ಯಗಳಿಗೆ ಆತಂಕವನ್ನು ಮಾಡುತ್ತಿದ್ದಾನೆ. ಟೂರ್ನಿಯ ನಿರ್ಣಾಯಕ ಹಂತದಲ್ಲಿ ಮಳೆರಾಯ ಬಂದು ಕೆಲವು ತಂಡಗಳಿಗೆ ಬಿಗ್ ಶಾಕ್ ನೀಡುತ್ತಿದ್ದಾನೆ. ಅಂತೆಯೇ ನಿನ್ನೆ ಮಳೆಯಿಂದಾಗಿ ಪ್ಲೇ-ಆಫ್ ರೇಸ್​ನಿಂದ ಗುಜರಾತ್ ಟೈಟನ್ಸ್​ ಅಧಿಕೃತವಾಗಿ ಹೊರ ಬಿದ್ದಿದೆ.

Advertisment

ಹೌದು.. ನಿನ್ನೆ ನಡೆಯಬೇಕಿದ್ದ ಕೆಕೆಆರ್ ವರ್ಸಸ್ ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ರದ್ದಾಗಿದೆ. ಹೀಗಾಗಿ ಅಂಪೈರ್‌ಗಳು ಉಭಯ ತಂಡಗಳಿಗೂ ತಲಾ ಒಂದು ಪಾಯಿಂಟ್‌ ನೀಡಿದ್ದಾರೆ. 19 ಅಂಕಗಳೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೂಲಕ ಕೋಲ್ಕತ್ತ ನೈಟ್​ ರೈಡರ್ಸ್​ಗೆ ಪ್ಲೇ-ಆಫ್​ನ ಟಾಪ್ ಒಂದು ಅಥವಾ ಎರಡನೇ ಸ್ಥಾನ ಗ್ಯಾರಂಟಿ ಆಗಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್​ ಮೊದಲ ಎರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಇತ್ತ ಹೈದರಾಬಾದ್​​ಗೆ ಮೂರನೇ ಸ್ಥಾನ ಬಹುತೇಕ ಪಕ್ಕಾ ಆಗುತ್ತಿದೆ. ಯಾಕೆಂದರೆ ಹೈದರಾಬಾದ್​ಗೆ ಇನ್ನು ಎರಡು ಪಂದ್ಯಗಳು ಬಾಕಿ ಇದ್ದು, ಯಾವುದಾದರು ಒಂದು ಪಂದ್ಯ ಗೆದ್ದರೆ ಸುಲಭವಾಗಿ ಪ್ಲೇ-ಆಫ್ ಪ್ರವೇಶ ಮಾಡಲಿದೆ. ನಾಲ್ಕನೇ ಸ್ಥಾನಕ್ಕಾಗಿ ಆರ್​ಸಿಬಿ, ಸಿಎಸ್​ಕೆ ಹಾಗೂ ಎಲ್​ಎಸ್​​ಜಿ ನಡುವೆ ತೀವ್ರ ಪೈಪೋಟಿ ಇದೆ.

ಇದನ್ನೂ ಓದಿ:ಮದುವೆಯಾಗಿ ವಾರ ಕೂಡ ಕಳೆದಿರಲಿಲ್ಲ.. 18 ವರ್ಷದ ಮದುಮಗಳು ನಿಗೂಢ ಸಾವು.. ಅಂದು ನಡೆದಿದ್ದೇನು..?

publive-image

ಇದೇ ಶನಿವಾರ ಬೆಂಗಳೂರಿನಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಪಂದ್ಯ ನಡೆಯಲಿದೆ. ಇದು ಪ್ಲೇ-ಆಫ್ ಡಿಸೈಡರ್ ಪಂದ್ಯವಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆರಾಯನ ಕಾಟ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Advertisment

RCB ಪ್ರಸ್ತುತ 0.387 ನೆಟ್ ರನ್ ರೇಟ್‌ನೊಂದಿಗೆ ಐದನೇ ಸ್ಥಾನದಲ್ಲಿದೆ. RCB ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 18 ಪ್ಲಸ್ ರನ್‌ಗಳಿಂದ ಸೋಲಿಸಬೇಕು. ಅಥವಾ ಸಿಎಸ್ ಕೆ ವಿರುದ್ಧ 18.1 ಓವರ್ ಗಳಲ್ಲಿ ಗುರಿ ಮುಟ್ಟಬೇಕು. ಆಗ ಮಾತ್ರ ಆರ್​ಸಿಬಿಗೆ ಪ್ಲೇ-ಆಫ್ ಪ್ರವೇಶ ಮಾಡಲು ಚಾನ್ಸ್ ಇದೆ.

ಇದನ್ನೂ ಓದಿ:ಮೇ 18.. ಆರ್​​ಸಿಬಿ ಟಾರ್ಗೆಟ್​ ಕೂಡ 18..! ಆ 18ರಲ್ಲಿ ಅಡಗಿದೆ ಆರ್​​ಸಿಬಿ ಭವಿಷ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment