newsfirstkannada.com

×

ಮತ್ತೊಂದು ತಪ್ಪು ಮಾಡಿದ ಬಿಸಿಸಿಐ.. ಬಟಾ ಬಯಲಾಯ್ತು ಬಿಸಿಸಿಐನ ಇಬ್ಬಗೆಯ ನೀತಿ..!

Share :

Published October 10, 2024 at 4:15pm

Update October 11, 2024 at 7:18am

    ಟೀಮ್​ ಇಂಡಿಯಾ ಪರ ಡೆಬ್ಯೂ ಮಾಡಿದ ಮಯಾಂಕ್​

    ಇಂಜುರಿಗೆ ತುತ್ತಾಗಿ IPLನಿಂದ ಹೊರಬಿದ್ದಿದ್ದ ಆ ವೇಗಿ

    ಬಾಸ್​ಗಳ ಅಭಯ ಹಸ್ತ, NCAನಲ್ಲಿ ಸ್ಪೆಷಲ್​ ಟ್ರೀಟ್​​ಮೆಂಟ್

ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲಿ ಮಿಂಚಿದ ಮಯಾಂಕ್​ ಯಾದವ್​​, ಹೊಸ ಭರವಸೆ ಹುಟ್ಟು ಹಾಕಿದ್ದಾರೆ. ತನ್ನ ಬೌಲಿಂಗ್​ನಿಂದ ಸೆನ್ಸೇಷನ್​ ಸೃಷ್ಟಿಸಿರೋ ಮಯಾಂಕ್​ ಆಟವನ್ನ ಮೆಚ್ಚಿದ ಎಲ್ಲರೂ ಶಹಬ್ಬಾಸ್​ ಅಂತಿದ್ದಾರೆ. ಇದೇ ವೇಳೆ ಬಿಸಿಸಿಐನ ಇಬ್ಬುಗೆಯ ನೀತಿಯನ್ನೂ ಹಲವರು ಪ್ರಶ್ನಿಸ್ತಿದ್ದಾರೆ.

ಮಯಾಂಕ್​ ಯಾದವ್​. ಟೀಮ್​ ಇಂಡಿಯಾದ ಪೇಸ್​ ಸೆನ್ಸೇಷನ್​. ಡೆಬ್ಯೂ ಪಂದ್ಯದಲ್ಲೇ ಜಬರ್ದಸ್ತ್​ ಬೌಲಿಂಗ್​ ಮಾಡಿದ ಮಯಾಂಕ್​, ಎಲ್ಲರ ಗಮನ ಸಳೆದಿದ್ದಾರೆ. ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಹಾಕಿದ ಮೊದಲ ಓವರ್​​ನಲ್ಲಿ ಒಂದೇ ಒಂದು ರನ್​​ ಬಿಟ್ಟು ಕೊಡದೇ ಬೌಲಿಂಗ್​ ಮಾಡಿದ್ದಕ್ಕಂತೂ ಕ್ರಿಕೆಟ್​ ಪ್ರಿಯರು ಕ್ಲೀನ್​ಬೋಲ್ಡ್​ ಆಗಿದ್ದಾರೆ.

ಇದನ್ನೂ ಓದಿ:ರೋಹಿತ್ ಶರ್ಮಾ ಆರ್​ಸಿಬಿಗೆ ಸೇರುವ ವಿಚಾರದ ಬಗ್ಗೆ ಮಾತನಾಡಿದ ಎಬಿ ಡಿ ವಿಲ್ಲಿಯರ್ಸ್..!

ಕಳೆದ ಐಪಿಎಲ್​ ಟೂರ್ನಿಯಲ್ಲಿ ಕನ್ಸಿಸ್ಟೆಂಟ್​ ಆಗಿ 150 ಕಿಲೋ ಮೀಟರ್​ಗೂ ಹೆಚ್ಚಿನ ವೇಗದಲ್ಲಿ ಮಯಾಂಕ್​ ಬೌಲಿಂಗ್​ ಮಾಡಿದ್ರು. ಪೇಸ್​ ಮಾತ್ರವಲ್ಲ.. ಲೈನ್​ ಅಂಡ್ ಲೆಂಥ್ ಕೂಡ​ ಮೆಂಟೇನ್​ ಮಾಡಿದ್ದ ಯುವ ವೇಗಿ ವಿಕೆಟ್​ಗಳನ್ನೂ ಬೇಟೆಯಾಡಿದ್ರು. ಆಗಲೇ ಎಲ್ಲರ ಕಣ್ಣು ಮಯಾಂಕ್​ ಮೇಲೆ ಬಿದ್ದಿತ್ತು. ಆದ್ರೆ, ದುರಾದೃಷ್ಟವೋ ಏನೋ ಮಯಾಂಕ್​ ಇಂಜುರಿಗೆ ತುತ್ತಾಗಿ ಎನ್​ಸಿಎ ಸೇರಿದ್ರು.

NCAನಲ್ಲಿ ಸ್ಪೆಷಲ್​ ಟ್ರೀಟ್​​ಮೆಂಟ್
ಇಂಜುರಿಗೆ ತುತ್ತಾದ ಮಯಾಂಕ್ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡದಿದ್ರು, ಬಿಸಿಸಿಐ ಸ್ಪೆಷಲ್​ ಕೇರ್​ ತೆಗೆದುಕೊಳ್ತು. ಬಾಸ್​ಗಳ ಸೂಚನೆ ಮೇರೆಗೆ ಎನ್​ಸಿಎ ಡಾಕ್ಟರ್​​ಗಳು ಮಯಾಂಕ್​ಗೆ​ ಸ್ಪೆಷಲ್​ ಟ್ರೀಟ್​ಮೆಂಟ್​ ನೀಡಿದ್ರು. ಅಂತಿಮವಾಗಿ ಕಳೆದ ತಿಂಗಳು ಫುಲ್​ ಫಿಟ್​ ಆದ ಮಯಾಂಕ್​, ಯಾವ ಡೊಮೆಸ್ಟಿಕ್​ ಪಂದ್ಯವನ್ನೂ ಆಡಲಿಲ್ಲ. ನೇರವಾಗಿ ಬಾಂಗ್ಲಾ ವಿರುದ್ಧ ಸರಣಿಯಲ್ಲಿ ಡೆಬ್ಯೂ ಮಾಡಿ ಭಾರತದ ಪರ ಆಡೋ ಕನಸು ನನಸು ಮಾಡಿಕೊಂಡ್ರು. ಮೊದಲ ಪಂದ್ಯದಲ್ಲೇ ಎಕಾನಮಿಕಲ್​ ಸ್ಪೆಲ್​ ಹಾಕಿ 1 ವಿಕೆಟ್​ ಕೂಡ ಬೇಟೆಯಾಡಿದ್ರು.

ಮತ್ತೊಬ್ಬರಿಗೆ ಒಂದು ನ್ಯಾಯ..?
ಸಿಕ್ಕ ಅವಕಾಶದಲ್ಲಿ ಮಿಂಚಿರುವ ಮಯಾಂಕ್​ ಯಾದವ್​, ಭವಿಷ್ಯದ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು, ಒಟ್ಟಾರೆ ಭಾರತೀಯ ಕ್ರಿಕೆಟ್​ ಲೋಕವೇ ಮಯಾಂಕ್​ನ ಸದ್ಯ ಹಾಡಿ ಹೊಗಳ್ತಾಯಿದೆ. ಇದೇ ಸಂದರ್ಭದಲ್ಲಿ ಬಿಸಿಸಿಐನ ಇಬ್ಬುಗೆಯ ನೀತಿಯೂ ಬಟಾ ಬಯಲಾಗಿದ್ದು, ಟೀಕೆಗಳು ವ್ಯಕ್ತವಾಗ್ತಿವೆ. ಮಯಾಂಕ್ ವಿಚಾರದಲ್ಲಿ​ ಮುತುವರ್ಜಿ ವಹಿಸಿದ ಬಾಸ್​ಗಳು ಉಮ್ರಾನ್​ ಮಲ್ಲಿಕ್​ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದೇಕೆ ಅನ್ನೋದು ಪ್ರಶ್ನೆಯಾಗಿದೆ.

ಇದನ್ನೂ ಓದಿ:RCB ಅಭಿಮಾನಿಗಳಿಗೆ ಗುಡ್​ನ್ಯೂಸ್; ಬಲಿಷ್ಠ ಟೀಂ ಇಂಡಿಯಾದಲ್ಲಿ 4 ಮಂದಿ ಆರ್​ಸಿಬಿ ಆಟಗಾರರು..!

ವೇಗದಿಂದಲೇ ಸೆನ್ಸೇಷನ್​ ಸೃಷ್ಟಿಸಿದ್ದ ಮಲಿಕ್​
ಮಯಾಂಕ್​ ಯಾದವ್​ರಂತೆ 2022ರ ಐಪಿಎಲ್​ನಲ್ಲಿ ಉಮ್ರಾನ್​ ಮಲ್ಲಿಕ್​ ಸೆನ್ಸೇಷನ್​ ಸೃಷ್ಟಿಸಿದ್ರು. 150ಕ್ಕೂ ಹೆಚ್ಚಿನ ವೇಗದಲ್ಲಿ ಬೌಲಿಂಗ್​ ಮಾಡ್ತಾ ಗಮನ ಸೆಳೆದಿದ್ರು. ತನ್ನ ವೇಗದ ಬಲದಿಂದ ಟೀಮ್​ ಇಂಡಿಯಾಗೂ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ರು. 10 ಏಕದಿನ, 8 ಟಿ20 ಪಂದ್ಯಗಳನ್ನಾಡಿದ ಉಮ್ರಾನ್​ ಮಲ್ಲಿಕ್​, ತಂಡಕ್ಕೆ ಎಂಟ್ರಿಯಾದಷ್ಟೇ ವೇಗವಾಗಿ ಕಣ್ಮರೆಯಾದ್ರು.

ಬಿಸಿಸಿಐ ಬಾಸ್​ಗಳ ನಿರ್ಲಕ್ಷ್ಯ
ಮಯಾಂಕ್​ ಯಾದವ್​ರಂತೆ ಉಮ್ರಾನ್​ ಮಲಿಕ್​ ಕೂಡ ಟೀಮ್​ ಇಂಡಿಯಾಗೆ ಸಿಕ್ಕಿದ್ದ ಅಮೂಲ್ಯ ಪ್ರತಿಭೆ. ಕನ್ಸಿಸ್ಟೆಂಟ್​ ಆಗಿ 150 ಕಿಲೋ ಮೀಟರ್​ ವೇಗದಲ್ಲಿ ಬೌಲಿಂಗ್​ ಮಾಡ್ತಿದ್ದ ಉಮ್ರಾನ್​, ಲೈನ್​ ಅಂಡ್ ಲೆಂಥ್​ ವಿಚಾರದಲ್ಲಿ ಎಡವ್ತಿದ್ರು. ಯುವ ವೇಗಿಗೆ ಸಮರ್ಥ ಮಾರ್ಗದರ್ಶನದ ಅವಶ್ಯಕತೆಯಿತ್ತು. ಇದೀಗ ಮಯಾಂಕ್​ ಯಾದವ್​ ಇಂಜುರಿ ವಿಚಾರದಲ್ಲಿ ಮುತುವರ್ಜಿ ವಹಿಸಿದ ಬಿಸಿಸಿಐ ಬಾಸ್​​ಗಳು ಆಗ ಉಮ್ರಾನ್​ ಮಲಿಕ್​ಗೆ ಮಾರ್ಗದರ್ಶನ ನೀಡೋ​ ವಿಚಾರದಲ್ಲಿ ತೋರಿಸಲಿಲ್ಲ. ಕ್ಯಾಪ್ಟನ್​, ಕೋಚ್​, ಸೆಲೆಕ್ಟರ್ಸ್​ ಕೂಡ ಉಮ್ರಾನ್​ ವಿಚಾರದಲ್ಲಿ ನಿರ್ಲಕ್ಯ ತೋರಿದ್ರು. ಪರಿಣಾಮ ಬಂದಷ್ಟೇ ವೇಗವಾಗಿ ತಂಡದಿಂದ ಹೊರಬಿದ್ರು. ಈ ಬಗ್ಗೆಯೇ ಇದೀಗ ಟೀಕೆಗಳು ಎದ್ದಿವೆ.

ಉಮ್ರಾನ್​ ಮಲ್ಲಿಕ್​ ಮಾತ್ರವಲ್ಲ. ಹಲವಾರು ಯಂಗ್​ ಟ್ಯಾಲೆಂಟ್​​ಗಳ ವಿಚಾರದಲ್ಲಿ ಬಿಸಿಸಿಐ ಪದೇ ಪದೇ ತಪ್ಪು ಹೆಜ್ಜೆ ಇಟ್ಟಿದೆ. ಕಳೆದ ಕೆಲ ವರ್ಷಗಳಿಂದ ಇನ್ನೂ ಹಲವು ಆಟಗಾರರು ಟೀಮ್​ ಇಂಡಿಯಾಗೆ ಗೆಸ್ಟ್​ ಅಪಿರೀಯನ್ಸ್​​ ರೀತಿ ಬಂದು ಹೋಗಿದ್ದಾರೆ. ಕೆಲವೇ ಪಂದ್ಯಕ್ಕೆ ಸೀಮಿತವಾದ ಆ ಆಟಗಾರರಿಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ.

ಇದನ್ನೂ ಓದಿ:CSKಯಲ್ಲಿ ದಿನಕ್ಕೊಂದು ಬೆಳವಣಿಗೆ.. ಧೋನಿ ಬಗ್ಗೆ CEO ಶಾಕಿಂಗ್ ಹೇಳಿಕೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮತ್ತೊಂದು ತಪ್ಪು ಮಾಡಿದ ಬಿಸಿಸಿಐ.. ಬಟಾ ಬಯಲಾಯ್ತು ಬಿಸಿಸಿಐನ ಇಬ್ಬಗೆಯ ನೀತಿ..!

https://newsfirstlive.com/wp-content/uploads/2024/10/Mayanka-Yadav.jpg

Load More