/newsfirstlive-kannada/media/post_attachments/wp-content/uploads/2024/10/Mayanka-Yadav.jpg)
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಕಳೆದ ಭಾನುವಾರ ನಡೆದಿತ್ತು. ಈ ಪಂದ್ಯದಲ್ಲಿ ಮಯಾಂಕ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 1 ವಿಕೆಟ್ ಪಡೆದರು.
ಟಿ20 ಕ್ರಿಕೆಟ್‌ನಲ್ಲಿ ಬೌಲರ್ ಮೇಡನ್ ಓವರ್ ಮಾಡುವುದು ತುಂಬಾ ಕಷ್ಟ. ಆದರೆ ಮಯಾಂಕ್ ತಮ್ಮ ಮೊದಲ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದಾರೆ. ಇದೀಗ ಮಯಾಂಕ್ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಅವರು.. ಗಂಭೀರ್ ನನಗೆ ಒಂದಷ್ಟು ಸಲಹೆ ನೀಡಿದ್ದರು. ನಾನು ಅದರ ಮೇಲೆ ಗಮನ ಹರಿಸಿದೆ. ನಾನು ಬಾಂಗ್ಲಾ ವಿರುದ್ಧದ ಈ ಪಂದ್ಯವನ್ನು ಅಂತಾರಾಷ್ಟ್ರೀಯ ಪಂದ್ಯವನ್ನಾಗಿ ನೋಡುವುದಿಲ್ಲ. ಇದು ನನ್ನ ಯಶಸ್ಸಿನ ಸೂತ್ರವಾಯಿತು.
ನನ್ನ ಗಮನ ವೇಗದ ಬೌಲಿಂಗ್ ಮಾಡುವ ಬದಲು ಸರಿಯಾದ ಲೆಂಥ್​ನಲ್ಲಿ ಬೌಲಿಂಗ್ ಮಾಡುವ ಗಮನ ಇತ್ತು. ನಾನು ಸರಿಯಾದ ಲೈನ್ ಮತ್ತು ಲೆಂಥ್​ನತ್ತ ಬೌಲಿಂಗ್ ಮಾಡಿ ಕನಿಷ್ಠ ರನ್ ನೀಡಲು ಪ್ರಯತ್ನಿಸಿದೆ. ಗ್ವಾಲಿಯರ್ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್ ಇಲ್ಲದ ಕಾರಣ, ಪರಿಸ್ಥಿತಿಗೆ ಅನುಗುಣವಾಗಿ ವೇಗವನ್ನು ಹೆಚ್ಚಿಸಿಕೊಂಡೆ. ಮಾಯಾಂಕ್ ಯಾದವ್ ಐಪಿಎಲ್​2024ರಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us