/newsfirstlive-kannada/media/post_attachments/wp-content/uploads/2024/05/coffe-tea.jpg)
ಕಾಫಿ ಹಾಗೂ ಟೀ ಎಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಎದ್ದು, ಹಾಲು, ಕಾಫಿ, ಟೀ ಇಲ್ಲದೇ ಇದ್ರೆ ಲೈಫ್ ಬೋರು ಅಂತಾರೇ ಜನರು. ಅದರಲ್ಲೂ ಕೆಲವರಂತೂ ಟೀ ಹಾಗೂ ಕಾಫಿಯಿಂದಲೇ ದಿನವನ್ನು ಶುರು ಮಾಡುತ್ತಾರೆ. ಬೆಳಗ್ಗೆ ಎದ್ದಾಗ ಒಂದು ಟೀ. ಟಿಫನ್​ ಬಳಿಕ ಒಂದು ಟೀ. ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ. ಆದರೆ ಈ ಟೀ, ಕಾಫಿ ಲವರ್ಸ್ ಈ ಸ್ಟೋರಿ ಓದಲೇಬೇಕು.
/newsfirstlive-kannada/media/post_attachments/wp-content/uploads/2024/05/coffe-tea1.jpg)
ಇದನ್ನೂ ಓದಿ:ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ
ನೀವೇನಾದರೂ ಊಟವಾದ ಬಳಿಕ ಅಥವಾ ಮೊದಲು ಟೀ, ಕಾಫಿ ಸೇವಿಸುತ್ತಿದ್ದರೆ ಈ ಕೂಡಲೇ ಆ ಅಭ್ಯಾಸವನ್ನು ಬಿಡಬೇಕು ಅಂತ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ICMR) ಆಘಾತಕಾರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ಹೌದು, ಊಟಕ್ಕಿಂತ ಮೊದಲ ಅಥವಾ 1 ಗಂಟೆ ನಂತರ ಟೀ, ಕಾಫಿ ಸೇವಿಸಬೇಕು. ಏಕೆಂದರೆ ಈ ಪಾನೀಯಗಳು ಆಹಾರದಲ್ಲಿನ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ರಕ್ತ ಉತ್ಪಾದನೆಗೆ ಕಬ್ಬಿಣಾಂಶ ಅತ್ಯಗತ್ಯ. ದೇಹದ ಶೇ.70ರಷ್ಟು ಕಬ್ಬಿಣಾಂಶವು ಹೀಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿ ಇರುತ್ತದೆ. ಹೀಗಾಗಿ ಟೀ ಅಥವಾ ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಕೊರತೆಯಾಗಿ ರಕ್ತಹೀನತೆಗೆ ಕಾರಣವಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
/newsfirstlive-kannada/media/post_attachments/wp-content/uploads/2024/05/coffe-tea2.jpg)
ಟೀ ಮತ್ತು ಕಾಫಿಗಳಲ್ಲಿ ಕೆಫೀನ್ ಇರುತ್ತದೆ. ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಶಾರೀರಿಕ ಅವಲಂಬನೆಯನ್ನು ಪ್ರೇರೇಪಿಸುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಇತ್ತೀಚೆಗೆ ಭಾರತೀಯರಿಗೆ 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಆ ಮಾರ್ಗಸೂಚಿಯಲ್ಲಿ ರಾಷ್ಟ್ರೀಯ ಪೋಷಣೆಯ ಸಂಸ್ಥೆ (NIN) ಅದರ ಸಂಶೋಧನಾ ವಿಭಾಗದೊಂದಿಗೆ ವೈದ್ಯಕೀಯ ಸಮಿತಿಯು ಚಹಾ ಮತ್ತು ಕಾಫಿಯ ಸೇವನೆಯನ್ನು ಮಿತವಾಗಿ ಸೇವನೆ ಮಾಡಬೇಕು ಅಂತ ವಿವರಿಸಿದೆ. ಚಹಾ ಅಥವಾ ಕಾಫಿಯನ್ನು ಸಂಪೂರ್ಣವಾಗಿ ತ್ಯಜಿಸಿ ಎಂದರೆ ಯಾರು ಕೇಳುವುದಿಲ್ಲ. ಹೀಗಾಗಿ ಇದನ್ನು ಮಿತವಾಗಿ ಸೇವನೆ ಮಾಡಿ. ಏಕೆಂದರೆ ಪಾನೀಯಗಳಲ್ಲಿನ ಕೆಫೀನ್ ಅಂಶದ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಅಥವಾ ನಂತರ ಕಾಫಿ ಮತ್ತು ಚಹಾವನ್ನು ಸೇವಿಸಬೇಕು. ಊಟವಾದ ಕೂಡಲೇ ಕಾಫಿ ಮತ್ತು ಚಹಾ ಸೇವಿಸಿದರೆ ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸಬಹುದು. ಇದರರ್ಥ ಟ್ಯಾನಿನ್ ನಿಮ್ಮ ದೇಹವು ಆಹಾರದಿಂದ ಹೀರಿಕೊಳ್ಳುವ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಕಬ್ಬಿಣದ ಲಭ್ಯತೆ ಕಡಿಮೆಯಾಗಲು ಕಾರಣವಾಗುತ್ತದೆ. ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಹಿಮೋಗ್ಲೋಬಿನ್ ಅನ್ನು ತಯಾರಿಸಲು ಕಬ್ಬಿಣವು ಅವಶ್ಯಕವಾಗಿದೆ.
/newsfirstlive-kannada/media/post_attachments/wp-content/uploads/2024/05/coffe-tea3.jpg)
ದೇಹದಲ್ಲಿ ಕಬ್ಬಿಣದ ಕೊರತೆಯ ಸಾಮಾನ್ಯ ಲಕ್ಷಣಗಳೇನು?
ಆಗಾಗ ದಣಿವು ಅಥವಾ ಶಕ್ತಿಯ ಕೊರತೆ ಉಂಟಾಗುತ್ತದೆ. ಉಸಿರಾಟದ ತೊಂದರೆ, ತಲೆನೋವು, ತ್ವರಿತ ಹೃದಯ ಬಡಿತ, ಉಗುರುಗಳು ಸೀಳುವುದು ಅಥವಾ ಕೂದಲು ಉದುರುವಿಕೆ. ಇದಲ್ಲದೆ, ICMR ಸಂಶೋಧಕರು ಹಾಲು ಇಲ್ಲದೆ ಚಹಾವನ್ನು ಸೇವಿಸುವುದರಿಂದ ರಕ್ತ ಪರಿಚಲನೆಯನ್ನು ಉತ್ತೇಜಿಸಬಹುದು. ಜೊತೆಗೆ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಹೆಚ್ಚಿನ ಮಟ್ಟದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿನ ಅಸಹಜತೆಗಳಿಗೆ ಸಂಬಂಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us