newsfirstkannada.com

ಆಂಧ್ರ ರಾಜಕೀಯಕ್ಕೆ ಬಿಗ್​ ಟ್ವಿಸ್ಟ್​​.. ಪವನ್​ ಕಲ್ಯಾಣ್​​ ಗೆಲ್ಲಿಸಲು ಅಖಾಡಕ್ಕಿಳಿದ ಮೆಗಾಸ್ಟಾರ್​​ ಚಿರಂಜೀವಿ!

Share :

Published May 7, 2024 at 4:37pm

Update May 7, 2024 at 4:40pm

  ಆಂಧ್ರದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಒಟ್ಟಿಗೆ ಮತದಾನ

  ಮೇ 13ನೇ ತಾರೀಕಿನಂದು ನಡೆಯಲಿರೋ ಮತದಾನಕ್ಕೆ ಭರ್ಜರಿ ತಯಾರಿ!

  ಪವನ್​ ಕಲ್ಯಾಣ್​​ನನ್ನು ಗೆಲ್ಲಿಸಲು ಅಖಾಡಕ್ಕಿಳಿದ ಮೆಗಾಸ್ಟಾರ್​ ಚಿರಂಜೀವಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಒಟ್ಟಿಗೆ ಮೇ 13ನೇ ತಾರೀಕು ಮತದಾನ ನಡೆಯಲಿದೆ. ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​​ಆರ್​​​ ಕಾಂಗ್ರೆಸ್​ ಸೋಲಿಸಲು ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಸಜ್ಜಾಗಿದೆ. ಅಷ್ಟೇ ಅಲ್ಲ ಜತೆಗೆ ವೈ.ಎಸ್​ ಶರ್ಮಿಳಾ ನಾಯಕತ್ವದ ಕಾಂಗ್ರೆಸ್​​ ಮತ್ತು ಕಮ್ಯೂನಿಸ್ಟ್​​ ಪಕ್ಷಗಳು ಕಡೆ ಚುನಾವಣೆಗೆ ಮುಂದಾಗಿವೆ.

ಇನ್ನು, ಈ ಬಾರಿ ಇಡೀ ಆಂಧ್ರದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್​ ಕಲ್ಯಾಣ್​​. ಇವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಜನಸೇನಾ ಮೈತ್ರಿ ಅಭ್ಯರ್ಥಿಯಾಗಿ ಕಂಟೆಸ್ಟ್​​ ಮಾಡುತ್ತಿದ್ದಾರೆ. ಸದ್ಯ ನಟ ಪವನ್​ ಕಲ್ಯಾಣ್​ಗೆ ಮೆಗಾಸ್ಟಾರ್​ ಚಿರಂಜೀವಿ ಬೆಂಬಲ ಘೋಷಿಸಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿರೋ ಮೆಗಾಸ್ಟಾರ್​​ ಚಿರಂಜೀವಿ ನನ್ನ ತಮ್ಮ ಜನರಿಗಾಗಿ ರಾಜಕೀಯಕ್ಕೆ ಬಂದಿದ್ದಾನೆ. ಯಾವ ತಾಯಿಗೆ ತಾನೇ ತನ್ನ ಮಗ ಅವಮಾನಕ್ಕೆ ಒಳಗಾಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯ. ನಾನು ತಾಯಿ ಸ್ಥಾನದಲ್ಲಿ ನಿಂತು ಪವನ್​ ಕಲ್ಯಾಣ್​ನನ್ನು ಸಾಕಿದ್ದೇನೆ. ಅವನಿಗೆ ನಿಮ್ಮ ಆಶೀರ್ವಾದ ಬೇಕಿದೆ. ಈ ಬಾರಿ ಪವನ್​ಗೆ ವೋಟ್​ ಹಾಕಿ ಗೆಲ್ಲಿಸಿ. ಪವನ್​ ವಿಧಾನಸಭೆಯಲ್ಲಿ ನಿಮ್ಮ ಧನಿ ಆಗಲಿದ್ದಾನೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್​​.. ಖಡಕ್​ ವಾರ್ನಿಂಗ್​ ಕೊಟ್ಟ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರ ರಾಜಕೀಯಕ್ಕೆ ಬಿಗ್​ ಟ್ವಿಸ್ಟ್​​.. ಪವನ್​ ಕಲ್ಯಾಣ್​​ ಗೆಲ್ಲಿಸಲು ಅಖಾಡಕ್ಕಿಳಿದ ಮೆಗಾಸ್ಟಾರ್​​ ಚಿರಂಜೀವಿ!

https://newsfirstlive.com/wp-content/uploads/2024/05/Chiranjeevi_Pawan-Kalyan.jpg

Load More