/newsfirstlive-kannada/media/post_attachments/wp-content/uploads/2025/03/meghana.jpg)
ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್ ಪ್ರಿಯಾ ತರ್ಲೆ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಈ ಸುದ್ದಿಯಲ್ಲಿ ಇರುತ್ತಾರೆ.
ಇದನ್ನೂ ಓದಿ:DKD SHOW, ಸೀತಾರಾಮ ಸೀರಿಯಲ್ನಿಂದ ದಿಢೀರ್ ಹೊರ ಬಂದ್ರಾ ಮೇಘನಾ ಶಂಕರಪ್ಪ; ಆಗಿದ್ದೇನು?
ಮೊನ್ನೆಯಷ್ಟೇ ನಟಿ ಮೇಘನಾ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಅದೇ ಖುಷಿಯಲ್ಲಿ ಪತಿಯ ಜೊತೆಗೆ ಜಾಲಿ ಮೂಡ್ಗೆ ಜಾರಿದ್ದಾರೆ. ಆದ್ರೆ, ನಟಿ ಮೇಘನಾ ಅವರು ಸೀತಾ ರಾಮ ಸೀರಿಯಲ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅಂತ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ.
ಹೌದು, ಇತ್ತೀಚೆಗೆ ಸೀತಾ ರಾಮ ಸೀರಿಯಲ್ನಲ್ಲಿ ಪ್ರಿಯಾ ಪಾತ್ರಧಾರಿ ನಟಿ ಮೇಘನಾ ಶಂಕರಪ್ಪ ಕಾಣಿಸಿಕೊಳ್ಳುತ್ತಿಲ್ಲ ಹೀಗಾಗಿ ಅಭಿಮಾಗಳು ಬೇಸರ ಹೊರ ಹಾಕುತ್ತಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ಅವರು ಸೀರಿಯಲ್ನಿಂದ ಆಚೆ ಬಂದ್ರಾ ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ, ಈ ಬಗ್ಗೆ ನಟಿ ಮೇಘನಾ ಅವರು ಯಾವುದೇ ಮಾಹಿತಿ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಕೊಡ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ