newsfirstkannada.com

ಬರೋಬ್ಬರಿ 163 ಮಂದಿ ರೆಡಿ ಮಾಡಿದ ಸೀರೆಯಲ್ಲಿ ಮಿಂಚಿದ ಆಲಿಯಾ; ನೆಟ್ಟಿಗರು ಫುಲ್​ ಫಿದಾ!

Share :

Published May 8, 2024 at 6:49am

Update May 8, 2024 at 5:22pm

  ಆಲಿಯಾ ಭಟ್ ಅಷ್ಟು ಸುಂದರವಾಗಿ ಕಾಣಿಸಿಕೊಳ್ಳುವುದಕ್ಕೆ ಇವರೇ ಮುಖ್ಯ ಕಾರಣ

  ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್​ನಲ್ಲಿ ನಡೆದ ಮೆಟ್ ಗಾಲಾ 2024 ಈವೆಂಟ್

  ಮೆಟ್ ಗಾಲಾ ಈವೆಂಟ್​ನಲ್ಲಿ ಮೀರ ಮೀರ ಮಿಂಚಿದ ಭಾರತೀಯ ಸೆಲೆಬ್ರೆಟಿಗಳು

ಪ್ರತಿವರ್ಷದಂತೆ ಈ ವರ್ಷವೂ ಕೂಡ ಮೆಟ್ ಗಾಲಾ 2024 ಈವೆಂಟ್ ನ್ಯೂಯಾರ್ಕ್​ನಲ್ಲಿ ನಡೆದಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಸಾಕಷ್ಟು ಭಾರತೀಯ ಸೆಲೆಬ್ರೆಟಿಗಳು ಸಖತ್​ ಮಿಂಚಿದ್ದಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್ ಗಾಲಾ ಈವೆಂಟ್​ನಲ್ಲಿ ಬಾಲಿವುಡ್​ ಬ್ಯೂಟಿ ಆಲಿಯಾ ಭಟ್​​ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನ ಅಷ್ಟೇ ಅಲ್ಲ.. ಎಲ್ಲೆಲ್ಲಿ ಪೆನ್​ಡ್ರೈವ್ ಹಂಚಿದ್ದಾರೆ ಗೊತ್ತಾ? ಪ್ರೂಫ್​ ಸಮೇತ HDK ಶಾಕಿಂಗ್ ಹೇಳಿಕೆ

ಹೌದು, 2024ರ ಮೆಟ್ ಗಾಲಾ ಪ್ರತಿಷ್ಠಿತ ಸಮಾರಂಭದಲ್ಲಿ ಎರಡನೇ ಬಾರಿಗೆ ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಭಾಗಿಯಾಗಿದ್ದಾರೆ. ಅದರಲ್ಲೂ ನಟಿ ಆಲಿಯಾ ಭಟ್ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಆಲಿಯಾ ಭಟ್ ಉಡುಪು ಹಾಗೂ ಅವರ ಲುಕ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.  ಇನ್ನು, ನಟಿ ಆಲಿಯಾ ಭಟ್ ಅಷ್ಟು ಸುಂದರವಾಗಿ ಕಾಣಿಸಿಕೊಳ್ಳುವುದಕ್ಕೆ ಬಹು ಮುಖ್ಯವಾದ ಅಂಶ ನಟಿ ತಿಟ್ಟಿರೋ ಉಡುಪು.

View this post on Instagram

A post shared by Alia Bhatt 💛 (@aliaabhatt)

ನಟಿ ಆಲಿಯಾ ಭಟ್​ ಅವರು ಈ ಪ್ರತಿಷ್ಠಿತ ಸಮಾರಂಭದಲ್ಲಿ ಸಬ್ಯಸಾಚಿ ಸೀರೆಯನ್ನು ಉಟ್ಟುಕೊಂಡು ಮಿಂಚಿದ್ದಾರೆ. ಕಳೆದ ವರ್ಷ ನಟಿ ಪರ್ಲ್ ಡ್ರೆಸ್ ಧರಿಸಿಕೊಂಡು ಸುದ್ದಿಯಾಗಿದ್ದರು. ಈ ಬಾರಿ ಕೂಡ ನಟಿ ತುಂಬಾ ಸಿಂಪಲ್​ ಕಲರ್ ಗೌನ್​​ ತರಹದ ಸೀರೆಯನ್ನು ಧರಿಸಿಕೊಂಡು ಸಖತ್​ ಸುದ್ದಿಯಲ್ಲಿದ್ದಾರೆ. ಇನ್ನು ನಟಿ ಆಲಿಯಾ ಅವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಹೊಸ ರೀತಿಯ ಸೀರೆಯನ್ನು ರೆಡಿ ಮಾಡಲು 163 ಕುಶಲಕರ್ಮಿಗಳು ಹಾಗೂ ಕಸೂತಿ ಕೆಲಸಗಾರರು ಕೆಲಸ ಮಾಡಿದ್ದಾರಂತೆ. ಜೊತೆಗೆ ಈ ಸೊಗಸಾದ ಸೀರೆಯನ್ನು ರೆಡಿ ಮಾಡಲು ಒಟ್ಟು 1,965 ಗಂಟೆಗಳ ಸಮಯವನ್ನು ಸೀರೆಗೆ ಮೀಸಲಿಟ್ಟಿದ್ದಾರಂತೆ. ಇದನ್ನು ರೆಡಿ ಮಾಡಲು ಕೆಲಸಗಾರರು ಬಹಳಷ್ಟು ಶ್ರಮ ಪಟ್ಟಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 163 ಮಂದಿ ರೆಡಿ ಮಾಡಿದ ಸೀರೆಯಲ್ಲಿ ಮಿಂಚಿದ ಆಲಿಯಾ; ನೆಟ್ಟಿಗರು ಫುಲ್​ ಫಿದಾ!

https://newsfirstlive.com/wp-content/uploads/2024/05/aliya1.jpg

Load More