/newsfirstlive-kannada/media/post_attachments/wp-content/uploads/2024/09/NAVEEN-POULY.jpg)
ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುತ್ತಾ ಇಡೀ ಭಾರತೀಯ ಚಿತ್ರರಂಗವನ್ನೇ ತಿರುಗು ನೋಡುವಂತೆ ಮಾಡಿದ್ದ ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗ್ತಿದೆ. ದಿನಕ್ಕೊಬ್ಬ ನಟರು ಮೀಟೂ ಪ್ರಕರಣದಲ್ಲಿ ಬೆತ್ತಲಾಗ್ತಿದ್ದಾರೆ. ಈ ನಡುವೆ ಖ್ಯಾತ ನಟ ನಿವಿನ್ ಪೌಲಿ ಹೆಸರು ತಳುಕು ಹಾಕಿಕೊಂಡಿದೆ.
ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಜಸ್ಟೀಸ್ ಹೇಮಾ ಸಮಿತಿ ಸಲ್ಲಿಸಿದ ವರದಿಯಲ್ಲಿ ಹಲವು ಬೆಚ್ಚಿ ಬೀಳಿಸುವ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಪ್ರತಿ ದಿನ ಒಬ್ಬೊಬ್ಬ ಸಿನಿಮಾ ರಂಗದವರ ವಿರುದ್ದ ಗಂಭೀರ ಪ್ರಕರಣ ದಾಖಲಾಗುತ್ತಿವೆ. ಅನೇಕ ಮಹಿಳೆಯರು ತಮ್ಮ ಮೇಲೆ ಆಗಿರುವ ದೌರ್ಜನ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಪ್ರೇಮಂ ಖ್ಯಾತಿಯ ನಟ ನಿವಿನ್ ಪೌಲಿ ವಿರುದ್ಧ 40 ವರ್ಷದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ. ನಿವಿನ್ ಪೌಲಿ ಹಾಗೂ ಇತರ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಷ್ಟಗಳಿಗೆ ಮಿಡಿಯುವ ಹೃದಯ ಇವರದ್ದು; Jr NTR, ಮಹೇಶ್ ಬಾಬು, ಪವನ್ ಕಲ್ಯಾಣ್ ಕೋಟಿ ಕೋಟಿ ಹಣ ಕೊಟ್ರು
ಯಾರೆಲ್ಲ ವಿರುದ್ಧ ಆರೋಪ..?
ಎರ್ನಾಕುಲಂ ಜಿಲ್ಲೆಯ ನೆರಿಯಮಂಗಲಂ ನಿವಾಸಿಯಾಗಿರುವ ಮಹಿಳೆ ನೀಡಿರುವ ದೂರಿನಲ್ಲಿ, 2023ರಲ್ಲಿ ನಿವಿನ್ ಪೌಲಿ ಹಾಗೂ ಇತರ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ನಿರ್ಮಾಪಕ ಎಕೆ ಸುನಿಲ್, ಶ್ರೇಯ್, ಬಿನು, ಬಶೀರ್ ಕುಟ್ಟನ್ ಹಾಗೂ ನಿವಿನ್ ಪೌಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೆಲಸ ಕೊಡಿಸುವ ವಿಚಾರದಲ್ಲಿ ಮಹಿಳೆಗೆ ಶ್ರೇಯ್ ಪರಿಚಯವಾಗಿ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯಿಂದ ಹಣ ಪಡೆದಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಅದು ಸಾಧ್ಯವಾಗದಿದ್ದಾಗ ಮಹಿಳೆ ಹಣ ಮರಳಿಸುವಂತೆ ಸೂಚಿಸಿದ್ದಾಳೆ. ಆದರೆ ಹಣ ವಾಪಸ್ ಕೊಡದ ಶ್ರೇಯ್, ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ದುಬೈಗೆ ಕರೆಸಿಕೊಂಡಿದ್ದರು. ಬಳಿಕ ಮಾದಕ ವಸ್ತುಗಳನ್ನು ನೀಡಿ ನಿವಿನ್ ಪೌಲಿ ಸೇರಿದಂತೆ 6 ಮಂದಿ ದೈಹಿಕವಾಗಿ ಬಳಸಿಕೊಂಡಿರೋದಾಗಿ ದೂರಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಈ ಪ್ರಕರಣ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ನಿವಿನ್ ಪೌಲಿ 6ನೇ ಆರೋಪಿಯಾಗಿದ್ದಾರೆ.
ಮಹಿಳೆಯ ಆರೋಪ ತಳ್ಳಿ ಹಾಕಿದ ನಟ ನಿವಿನ್ ಪೌಲಿ
ಇನ್ನು ಮಹಿಳೆ ತಮ್ಮ ಮೇಲೆ ಮಾಡಿದ ಈ ಆರೋಪವನ್ನು ನಿವಿನ್ ಪೌಲಿ ತಳ್ಳಿಹಾಕಿದ್ದಾರೆ. ಸುಳ್ಳು ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇದು ಸಂಪೂರ್ಣ ಸುಳ್ಳು. ನನ್ನ ಮೇಲೆ ಬಂದಿರುವ ಆರೋಪಗಳು ಆಧಾರ ರಹಿತ ಎಂದು ಸಾಬೀತು ಮಾಡುತ್ತೇನೆ. ಇದಕ್ಕೆ ಕಾರಣವಾದವರನ್ನು ಪತ್ತೆ ಹಚ್ಚಲು ಯಾವ ಮಟ್ಟಕ್ಕಾದ್ರೂ ಹೋಗುತ್ತೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಉಳಿದ ಎಲ್ಲವನ್ನೂ ಕಾನೂನಿನ ಮೂಲಕ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ದರ್ಶನ್ ಕೇಸ್ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!
ಒಟ್ಟಾರೆ ಜಸ್ಟೀಸ್ ಹೇಮಾ ಸಮಿತಿಯ ವರದಿ ಸಲ್ಲಿಕೆಯಾಗುತ್ತಿದ್ದಂತೆ ಮಲಯಾಳಂ ಸಿನಿಮಾದಲ್ಲಿನ ಹಗರಣಗಳ ಪಟ್ಟಿ ಬಯಲಾಗ್ತಿವೆ. ಸಿನಿಮಾ ನಟರ ಸಂಘದ ಅಧ್ಯಕ್ಷ ಮೋಹನ್‌ಲಾಲ್ ಸೇರಿ ಎಲ್ಲಾ 16 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಹಳ್ಳಿ ಸೊಗಡಿನ ಉತ್ತಮ ಕಥಾಹಂದರವುಳ್ಳ ಸಿನಿಮಾಗಳನ್ನೇ ಸಿನಿರಸಿಕರಿಗೆ ಉಣಬಡಿಸುತ್ತಾ ಬಂದಿರುವ ಮಾಲಿವುಡ್ ಚಿತ್ರರಂಗದ ಮೇಲೆ ಸದ್ಯ ಮೀಟೂ ಪ್ರಕರಣದ ಕರಿಛಾಯೆ ಬಿದ್ದಿದೆ. ಇದು ಘಟಾನುಘಟಿ ನಟರನ್ನೇ ಶೇಕ್ ಮಾಡಿದೆ.
https://twitter.com/NivinOfficial/status/1830980924416369145
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ