Advertisment

ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್​

author-image
Bheemappa
Updated On
ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್​
Advertisment
  • ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ನೇಮಕ ಮಾಡುತ್ತಿರುವ ಇಲಾಖೆ
  • ಆನ್​ಲೈನ್ ಮೂಲಕ ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
  • ಒಟ್ಟು ಹುದ್ದೆಗಳು ಎಷ್ಟು ಇವೆ, ಮಾಸಿಕ ಸಂಭಾವನೆ ಎಷ್ಟು ಇದೆ?

ಆರೋಗ್ಯ ಇಲಾಖೆಯಿಂದ ಹಲವು ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಆರೋಗ್ಯ ಸೇವೆ ಮಂಡಳಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ ಆಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇದನ್ನು ಸಂಪೂರ್ಣವಾಗಿ ಗಮನಿಸಿ ಅಪ್ಲೇ ಮಾಡಬಹುದು.

Advertisment

ಇದನ್ನೂ ಓದಿ:PUC ಪಾಸ್​ ಆದವರಿಗೆ ಭರ್ಜರಿ ಜಾಬ್​ಗಳು.. ನೂರಲ್ಲ, ಸಾವಿರಲ್ಲ 3 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು

ತೆಲಂಗಾಣ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ನೇಮಕಾತಿ ಮಂಡಳಿ (ಎಂಹೆಚ್​​ಎಸ್​ಆರ್​ಬಿ) ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಇದೀಗ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಿಸಿದ ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರೆ ಎಲ್ಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆನ್​ಲೈನ್ ಮೂಲಕ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಆಫ್​​ಲೈನ್ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಒಟ್ಟು ಹುದ್ದೆಗಳು, ಹುದ್ದೆಯ ಹೆಸರು..?
1,284 ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು

ಮಾಸಿಕ ಸಂಭಾವನೆ ಎಷ್ಟು ಇದೆ..?
31,040 ರೂಪಾಯಿಯಿಂದ 96,890 ರೂಪಾಯಿಗಳು

ಶೈಕ್ಷಣಿಕೆ ಅರ್ಹತೆ ಏನು ಕೇಳಿದ್ದಾರೆ.?
ಬಿಎಸ್​ಸಿ, ಎಂಎಸ್​ಸಿ, ಡಿಪ್ಲೋಮಾ, ಪದವಿ, ಪಿಜಿ ಡಿಪ್ಲೋಮಾ

Advertisment

ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ಫಾರ್ಮ್

publive-image

ವಯೋಮಿತಿ
18 ರಿಂದ 46 ವರ್ಷಗಳು

ವಯೋಮಿತಿ ಸಡಿಲಿಕೆ
ಮಾಜಿ ಸೈನಿಕ, ಎನ್​ಸಿಸಿ- 3 ವರ್ಷಗಳು
ಎಸ್​​ಸಿ, ಎಸ್​ಟಿ, ಬಿಸಿ, ಇಡಬ್ಲುಎಸ್- 10 ವರ್ಷಗಳು

ಅರ್ಜಿ ಶುಲ್ಕ ಎಷ್ಟುಇರುತ್ತದೆ..?
ಎಲ್ಲ ಅಭ್ಯರ್ಥಿಗಳಿಗೆ ಆನ್​​ಲೈನ್ ಅರ್ಜಿ ಶುಲ್ಕ- 500 ರೂ.
ಎಸ್​​ಸಿ, ಎಸ್​ಟಿ, ಬಿಸಿ, ಇಡಬ್ಲುಎಸ್, ಮಾಜಿ ಸೈನಿಕ ಬಿಟ್ಟು ಉಳಿದವರು ಪ್ರೊಸೆಸಿಂಗ್ ಶುಲ್ಕ 200 ರೂಪಾಯಿ ಪಾವತಿ ಮಾಡಬೇಕು.

Advertisment

ಪರೀಕ್ಷೆ ವಿಧಾನ ಹೇಗೆ ಇದೆ.?
100 ಅಂಕಗಳಿಗೆ ಪರೀಕ್ಷೆ ಇದ್ದು ಇದರಲ್ಲಿ 80 ಅಂಕಗಳು ಕಂಪ್ಯೂಟರ್​ಗೆ ಸಂಬಂಧಿಸಿರುತ್ತವೆ. ಉಳಿದ 20 ಅಂಕಗಳು ಈ ಹಿಂದೆ ಅಭ್ಯರ್ಥಿ ಕಾಟ್ರ್ಯಾಕ್ಟ್ ಆಧಾರದ ಮೇಲೆ ಮಾಡಿದ ಕೆಲಸಕ್ಕೆ ನೀಡಲಾಗುತ್ತದೆ.

ಅರ್ಜಿ ಹಾಕಲು ಕೊನೆ ದಿನ- ಅಕ್ಟೋಬರ್ 05, 2024

ಹುದ್ದೆಯ ಸಂಪೂರ್ಣ ಮಾಹಿತಿಗಾಗಿ ಲಿಂಕ್- https://drive.google.com/file/d/1hrAEzcuOrdj8-OcEFRX8CRDS4alg-nMW/view

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment