newsfirstkannada.com

ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ.. ಬೇಸರದಲ್ಲೇ ನೋವಿನ ಸುದ್ದಿಕೊಟ್ಟ ​ಹಿಟ್​ಮ್ಯಾನ್!

Share :

Published May 11, 2024 at 12:18pm

    ಇಂದು ಕೊಲ್ಕತ್ತಾ ಮತ್ತು ಮುಂಬೈ ತಂಡ ನಡುವೆ ಜಿದ್ದಾಜಿದ್ದಿ

    ರೋಹಿತ್​ ​ಮತ್ತು ಕೋಲ್ಕತ್ತಾ ತಂಡದ ಸಹಾಯಕ ಕೋಚ್​ ನಡುವಿನ ಸಂಭಾಷಣೆ ವೈರಲ್

    ಡ್ರೆಸ್ಸಿಂಗ್​ ರೂಂನ ವಿಚಾರಗಳನ್ನು ಅಭಿಷೇಕ್​ ನಾಯರ್ ಜೊತೆ ಹಂಚಿಕೊಂಡ ಹಿಟ್​ ಮ್ಯಾನ್​

KKRvsMI: ಇಂದು ಕೊಲ್ಕತ್ತಾ ಮತ್ತು ಮುಂಬೈ ತಂಡ ಎದುರು ಬದುರಾಗುತ್ತಿವೆ. ಈಡನ್​ ಗಾರ್ಡನ್​ ಮೈದಾನದಲ್ಲಿ ಇತ್ತಂಡಗಳು ಜಯಕ್ಕಾಗಿ ಹೋರಾಡಲಿವೆ. ಆದರೆ ಅದಕ್ಕೂ ಮುನ್ನ ಮುಂಬೈ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ ​ಮತ್ತು ಕೋಲ್ಕತ್ತಾ ತಂಡದ ಸಹಾಯಕ ಕೋಚ್​ ಅಭಿಷೇಕ್​ ನಾಯರ್​ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2024ರ ಐಪಿಎಲ್​ನಲ್ಲಿ ಕೊಲ್ಕತ್ತಾ ತಂಡ ಮೊದಲ ಸ್ಥಾನದಲ್ಲಿದ್ದರೆ, ಅತ್ತ ಹಾರ್ದಿಕ್​ ಪಾಂಡ್ಯ ನಾಯಕತ್ವದ ಮುಂಬೈ ತಂಡ 9ನೇ ಸ್ಥಾನದಲ್ಲಿದೆ. ಇಂದು ಎರಡು ತಂಡಗಳ ನಡುವೆ ಪಂದ್ಯ ನಡೆಯಲಿಕ್ಕಿದೆ. ಆದರೆ ಪಂದ್ಯಕ್ಕೂ ಮುನ್ನ ರೋಹಿತ್​ ಮತ್ತು ಅಭಿಷೇಕ್​ ನಾಯರ್​ ಮಾತನಾಡುವ ವಿಡಿಯೋ ಎಕ್ಸ್​ನಲ್ಲಿ ವೈರಲ್​ ಆಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಹಿಟ್​ ಮ್ಯಾನ್​ ಡ್ರೆಸ್ಸಿಂಗ್​ ರೂಂನ ವಿಚಾರಗಳನ್ನು ಅಭಿಷೇಕ್​ ನಾಯರ್​ ಜೊತೆ ಹಂಚಿಕೊಂಡಿದ್ದಾರೆ.

ರೋಹಿತ್​ ಎನಂದ್ರು?

ಮುಂಬೈ ತಂಡದಲ್ಲಿ ಒಂದೊಂದು ಬದಲಾವಣೆಯಾಗುತ್ತಿದೆ. ಇದು ತಂಡದ ನಿರ್ವಹಣೆಯ ಮೇಲೆ ಅವಲಂಬಿಸಿರೋದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪರಿಸ್ಥಿತಿ ಏನೇ ಇರಲಿ. ಇದು ನನ್ನ ಮನೆ ಮತ್ತು ನಾನು ನಿರ್ಮಿಸಿದ ದೇವಸ್ಥಾನ ಎಂದಿದ್ದಾರೆ. ವಿಡಿಯೋದ ಕೊನೆಯಲ್ಲಿ ಇದು ಕೊನೆಯ ವರ್ಷದ ಐಪಿಎಲ್​ ಎಂದಿದ್ದಾರೆ.

ಇದನ್ನೂ ಓದಿ: RCB: ಪ್ಲೇ ಆಫ್​ಗೆ ಹೋಗಲು ಆರ್​ಸಿಬಿಗಿರುವ ಕಠಿಣ ಸವಾಲುಗಳಿವು! ಇದರಲ್ಲಿ ಪಾಸ್​ ಆದ್ರೆ ‘ಕಪ್​ ನಮ್ದೇ’

ರೋಹಿತ್​ ಶರ್ಮಾ ಮತ್ತು ಅಭಿಷೇಕ್​ ನಾಯರ್​ ನಡುವಿನ ಸಂಭಾಷಣೆಯ ವಿಡಿಯೋವನ್ನು ಕೊಲ್ಕತ್ತಾ ತಂಡ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ ಕೆಲವು ಸಮಯದ ಬಳಿಕ ವಿಡಿಯೋವನ್ನು ಡಿಲೀಟ್​ ಮಾಡಿದೆ.

ಇದನ್ನೂ ಓದಿ: ಶಾಲೆಯ ಮುಂಭಾಗವೇ ಯುವಕನ ಕತ್ತು ಕೊಯ್ದು ಕೊಲೆ.. ಇಷ್ಟಕ್ಕೆಲ್ಲಾ ಕಾರಣ ಅದೊಂದೇ..?

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ರೋಹಿತ್​ ಶರ್ಮಾ 12 ಪಂದ್ಯಗಳಲ್ಲಿ 152.78 ಸ್ಟ್ರೈಕ್ ರೇಟ್​ನಲ್ಲಿದ್ದಾರೆ. ಒಂದು ಶತಕ ಸೇರಿ 330 ರನ್​ಗಳನ್ನು ಒಟ್ಟುಗೂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ.. ಬೇಸರದಲ್ಲೇ ನೋವಿನ ಸುದ್ದಿಕೊಟ್ಟ ​ಹಿಟ್​ಮ್ಯಾನ್!

https://newsfirstlive.com/wp-content/uploads/2024/05/Rohit-sharma-4.jpg

Load More