newsfirstkannada.com

RCB: ಪ್ಲೇ ಆಫ್​ಗೆ ಹೋಗಲು ಆರ್​ಸಿಬಿಗಿರುವ ಕಠಿಣ ಸವಾಲುಗಳಿವು! ಇದರಲ್ಲಿ ಪಾಸ್​ ಆದ್ರೆ ‘ಕಪ್​ ನಮ್ದೇ’

Share :

Published May 11, 2024 at 9:01am

    ಗೆಲುವಿನ ಮಂತ್ರ ಜಪಿಸುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಪ್ಲೇ ಆಫ್​​ ಸೇರಲು ಕಠಿಣ ಸವಾಲು ದಾಟಬೇಕಿದ ಆರ್​ಸಿಬಿ ತಂಡ

    ಆರ್​ಸಿಬಿ ಹೀಗೆ ಮಾಡಿದ್ರೆ ಮಾತ್ರ ‘ಈ ಸಲ ಕಪ್​ ನಮ್ದೇ’ ಆಗುತ್ತೆ

ಇತ್ತೀಚೆಗೆ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ಧ ಆರ್​ಸಿಬಿ 60 ರನ್​ಗಳ ವಿಜಯ ತನ್ನದಾಗಿಸಿಕೊಂಡಿದೆ. ಆ ಮೂಲಕ ಪ್ಲೇ ಆಫ್​ಗೆ ಹೋಗುವ ಬೆಟ್ಟದಷ್ಟು ಕನಸನ್ನು ಇಟ್ಟುಕೊಂಡಿದೆ. ಆದರೆ ಬೆಟ್ಟ ಏರುವ ಮುನ್ನ ಆರ್​ಸಿಬಿಗೆ ಕೆಲವೊಂದು ಸವಾಲುಗಳಿಗೆ. ಆ ಸವಾಲುಗಳನ್ನು ದಾಟಿದರೆ ಆರ್​ಸಿಬಿಗೆ ಕನಸು ಜೀವಂತವಾಗಲಿದೆ.

ಸವಾಲು 1:

ಫಾಫ್ ಡು ಪ್ಲೇಸಿಸ್​ ನಾಯಕತ್ವದ ಆರ್​ಸಿಬಿ ತಂಡ ಮುಂದಿನ ಎಲ್ಲಾ ಪಂದ್ಯಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ಕಾರಣ ಒಂದು ಪಂದ್ಯ ಸೋತರು ಆರ್​ಸಿಬಿ ರೇಸ್​ನಿಂದ ಹಿಂದೆ ಉಳಿಯಲಿದೆ. ಸದ್ಯ ಬೆಂಗಳೂರು ತಂಡ ಸಿಎಸ್​ಕೆ, ಎಸ್​​ಆರ್​ಹೆಚ್​, ಡೆಲ್ಲಿ ಕ್ಯಾಪಿಟಲ್​, ಲಕ್ನೋ ತಂಡವನ್ನು ಬೆನ್ನಟ್ಟಿ ಗೆಲುವು ತನ್ನದಾಗಿಸಿಕೊಳ್ಳಬೇಕು.

ಸವಾಲು 2:

ಮತ್ತೊಂದೆಡೆ ನಿನ್ನೆ ಗುಜರಾತ್​ ತಂಡದ ವಿರುದ್ಧ ಸೋತ ಸಿಎಸ್​ಕೆ ತಂಡ ಕನಿಷ್ಟ ಒಂದು ಸೋಲನ್ನಾದರು ಅನುಭವಿಸಬೇಕು. ಬೆಂಗಳೂರು ತಂಡಕ್ಕೂ ಮೊದಲು ಸಿಎಸ್​ಕೆ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಸದ್ಯ ಸಿಎಸ್​ಕೆ ನೆಟ್​​ ರನ್​ ರೇಟ್​​ +0.491 ಇದ್ದು, ಆರ್​ಸಿಬಿ ರನ್​ ರೇಟ್​ +0.217 ಇದೆ.

ವಿರಾಟ್​ ಕೊಹ್ಲಿ

ಸವಾಲು 3:

ಅತ್ತ ಪ್ಲೇ ಆಫ್​ ರೇಸ್​ನಲ್ಲಿ ಲಕ್ನೋ ತಂಡವು ಇದೆ. 12 ಪಂದ್ಯಗಳಲ್ಲಿ 6 ಗೆಲುವು ತನ್ನದಾಗಿಸಿಕೊಂಡಿದೆ. ಹಾಗಾಗಿ 12 ಅಂಕಗಳನ್ನು ಈ ತಂಡ ಪಡೆದುಕೊಂಡಿದೆ. ಇನ್ನು 2 ಲೀಗ್​ ಪಂದ್ಯ ಬಾಕಿಯಿದ್ದು, ಒಂದು ಪಂದ್ಯದಲ್ಲಿ ಸೋತರು ಆರ್​ಸಿಬಿ ದಾರಿ ಕೊಂಚ ಸುಲಭವಾಗಲಿದೆ. ಒಂದು ವೇಳೆ ಲಕ್ನೋ ಮುಂದಿನ 2 ಪಂದ್ಯ ಗೆದ್ದರೆ ಆರ್​ಸಿಬಿ ಪ್ರಯಾಣ ಸುಖಾಂತ್ಯ ಕಾಣಲಿದೆ.

ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

ಸವಾಲು 4:

ಡೆಲ್ಲಿ ಕ್ಯಾಪಿಟಲ್​ ತಂಡ 12 ಪಂದ್ಯಗಳಲ್ಲಿ 6 ಗೆಲುವು ಪಡೆದು 4ನೇ ಅಗ್ರಸ್ಥಾನದಲ್ಲಿದೆ. ಈ ತಂಡ ಕೂಡ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಳ್ಳಬೇಕಿದೆ. ಡೆಲ್ಲಿ ತಂಡ ಲಕ್ನೋ ಮತ್ತು  ಆರ್​ಸಿಬಿ ವಿರುದ್ಧ ಆಡಲಿದ್ದು, ಈ ಸಮಯದಲ್ಲಿ ಲಕ್ನೋವನ್ನು ಸೋಲಿಸಿದರೆ ಆರ್​ಸಿಬಿಗೆ ಲಾಭವಾಗಿಲಿದೆ.

ಸವಾಲು 5:

ಆರ್​ಸಿಬಿ ಮನಸ್ಸು ಮಾಡಿದರೆ ಹೈದರಾಬಾದ್​ ತಂಡವನ್ನು 4 ಅಥವಾ 5ನೇ ಸ್ಥಾನದಲ್ಲೇ ಉಳಿಸುವಂತೆ ಮಾಡಬಹುದು. ಆದರೆ ಕಾವ್ಯ ಮಾರನ್ ಮಾಲಿಕತ್ವದ ತಂಡ ಎಲ್ಲಾ ಉಳಿದ ಎಲ್ಲಾ ಪಂದ್ಯ ಸೋತರೆ ಆರ್​ಸಿಬಿಗೆ ಇದರಿಂದ ಲಾಭವಿದೆ. ಸದ್ಯ ಹೈದರಾಬಾದ್​ ಬಲಶಾಲಿಯಾಗಿರುವ ತಂಡವಾಗಿದ್ದು, ಸಮಯ, ಸಂದರ್ಭಗಳೇ ಇವೆಲ್ಲವನ್ನು ನಿರ್ಣಯಿಸಬೇಕಿದೆ.

ಇದನ್ನೂ ಓದಿ: ಕೊಡಗು: ಆತ್ಮಹತ್ಯೆ ಸುಳ್ಳು.. ಬಾಲಕಿಯ ರುಂಡ ಕಡಿದವನು ಕೊನೆಗೂ ಜೀವಂತ ಸಿಕ್ಕಿದ​.. ‘ಇವನೇ ಅವನು’

ಆರ್​ಸಿಬಿ ಪ್ಲೇ ಆಫ್​ಗೆ ಬರಲು ಕಠಿಣ ಸವಾಲುಗಳು ಮುಂದಿವೆ. ಇವೆಲ್ಲವನ್ನು ದಾಟಿ ಮುಂದೆ ಬರಲು ಫ್ಯಾನ್ಸ್​ ಕಾದು ಕುಳಿತ್ತಿದ್ದಾರೆ. ಆದರೆ ಆಟಗಾರರ ಕ್ಷಮತೆಯ ಮೇಲೆ ಪಂದ್ಯದ ಸೋಲು, ಗೆಲುವು ನಿರ್ಣಯವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB: ಪ್ಲೇ ಆಫ್​ಗೆ ಹೋಗಲು ಆರ್​ಸಿಬಿಗಿರುವ ಕಠಿಣ ಸವಾಲುಗಳಿವು! ಇದರಲ್ಲಿ ಪಾಸ್​ ಆದ್ರೆ ‘ಕಪ್​ ನಮ್ದೇ’

https://newsfirstlive.com/wp-content/uploads/2024/05/RCB_CSK_1.jpg

Load More