RCB vs MI: ವಾಂಖೆಡೆ ಮೈದಾನದಲ್ಲಿ ಯಾರಿಗೆ ಹೆಚ್ಚು ಲಾಭ..? ಪಿಚ್ ರಿಪೋರ್ಟ್..!

author-image
Ganesh
Updated On
ಬೂಮ್ರಾ ಬೊಂಬಾಟ್ ಆಟಕ್ಕೆ RCBಗೆ ಪ್ರಾಣ ಸಂಕಟ.. ಆದ್ರೆ ಕ್ರಿಕೆಟ್​ ಫ್ಯಾನ್ಸ್ ಖುಷ್ ಆಗಿದ್ದೇಕೆ..?
Advertisment
  • ಆರ್​ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್​ ಮಧ್ಯೆ ಪಂದ್ಯ
  • ಸಂಜೆ 7.30ರಿಂದ ಹೈ-ವೋಲ್ಟೇಜ್ ಪಂದ್ಯ ಆರಂಭ ಆಗಲಿದೆ
  • 30 ಬಾರಿ ಆರ್​ಸಿಬಿ, ಮುಂಬೈ ಮುಖಾಮುಖಿ ಗೆದ್ದಿದ್ದು ಎಷ್ಟು ಬಾರಿ?

ಐಪಿಎಲ್-2024ರ 24ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನ್ನು ಕಂಡಿದೆ.

113 ರನ್​​ಗಳ ಅಜೇಯ ಇನ್ನಿಂಗ್ಸ್ ಆಡಿರುವ ಕೊಹ್ಲಿ ಬ್ಯಾಟಿಂಗ್ ಬಿರುಸಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಗೆಲುವು ಸಾಧಿಸಿದೆ. ಇಂದು ಉಭಯ ತಂಡಗಳ ನಡುವೆ ಪಂದ್ಯ ನಡೆಯಲಿದೆ.

ವಾಂಖೆಡೆ ಪಿಚ್ ಹೇಗೆ..?
ವಾಂಖೆಡೆ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರ. ಈ ಮೈದಾನದಲ್ಲಿ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬಡಿಯುತ್ತದೆ. ಬ್ಯಾಟ್ಸ್‌ಮನ್‌ಗಳು ದೊಡ್ಡ ದೊಡ್ಡ ಹೊಡೆತಗಳಿಗೆ ಕೈಹಾಕುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ 234 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ 205 ರನ್ ಗಳಿಸಿತ್ತು.

ಇದನ್ನೂ ಓದಿ: ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?

publive-image

MI vs RCB ಅಂಕಿ-ಅಂಶ ಏನು ಹೇಳ್ತದೆ?
ವಾಂಖೆಡೆ ಕ್ರೀಡಾಂಗಣದಲ್ಲಿ ಒಟ್ಟು 187 ಪಂದ್ಯಗಳು ನಡೆದಿವೆ. ಅದರಲ್ಲಿ 111 ಐಪಿಎಲ್ ಪಂದ್ಯಗಳು ನಡೆದಿವೆ. ಮುಂಬೈ ಇಂಡಿಯನ್ಸ್ 63 ಬಾರಿ ಗೆದ್ದರೆ, ಪ್ರವಾಸಿ ತಂಡ 48 ಪಂದ್ಯಗಳನ್ನು ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕಿಂತ ನಂತರ ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚು ಗೆಲುವು ಸಿಕ್ಕಿದೆ.

ಇದನ್ನೂ ಓದಿ:ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್​ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?

publive-image

MI vs RCB ಎಷ್ಟು ಬಾರಿ ಮುಖಾಮುಖಿ..?
ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಒಟ್ಟು 34 ಬಾರಿ ಮುಖಾಮುಖಿ ಆಗಿವೆ. ಮುಂಬೈ ಇಂಡಿಯನ್ಸ್ 20 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಇದನ್ನೂ ಓದಿ:ಸತತ ಸೋಲು, ಸೋಲು..! ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿ RCB; ಗೆಲ್ಲಬೇಕು ಅಂದ್ರೆ ಯಾರು ಎಲ್ಲಿ ಆಡಬೇಕು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment