ನಾಗಮಂಗಲದಲ್ಲಿ ಅಮಾಯಕರನ್ನು ಬಂಧಿಸಿದ್ದಕ್ಕೂ ಕಾರಣ ಇದೆ.. ಸಚಿವ ಚೆಲುವರಾಯಸ್ವಾಮಿ ಶಾಕಿಂಗ್ ಉತ್ತರ!

author-image
Gopal Kulkarni
Updated On
ನಾಗಮಂಗಲದಲ್ಲಿ ಅಮಾಯಕರನ್ನು ಬಂಧಿಸಿದ್ದಕ್ಕೂ ಕಾರಣ ಇದೆ.. ಸಚಿವ ಚೆಲುವರಾಯಸ್ವಾಮಿ ಶಾಕಿಂಗ್ ಉತ್ತರ!
Advertisment
  • ನಾಗಮಂಗಲ ಗಲಭೆಯಲ್ಲಿ ಪೊಲೀಸರು ಅಮಾಯಕರನ್ನ ಬಂಧಿಸಿದ್ದು ನಿಜ
  • ಮಂಡ್ಯದಲ್ಲಿ ಅಮಾಯಕರ ಬಂಧನ ಒಪ್ಪಿಕೊಂಡ ಸಚಿವ ಚಲುವರಾಯಸ್ವಾಮಿ
  • ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಕಿಡಿ

ಮಂಡ್ಯ: ಗಣೇಶನ ವಿಸರ್ಜನೆಯ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಹೊತ್ತಿ ಉರಿದ ಬೆಂಕಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯಲ್ಲೀಗ 50ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಲಾಗಿದೆ. ಅವರಲ್ಲಿ ಅಮಾಯಕರ ಬಂಧನವೂ ಆಗಿದೆ ಅನ್ನೋ ವಾದವೂ ಕೂಡ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಚಲುವಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾಗಮಂಗಲ ಗಲಭೆಯಲ್ಲಿ ಅಮಾಯರಕರನ್ನು ಬಂಧಿಸಿದ್ದು ನಿಜ, ಇದನ್ನು ನಾನು ಒಪ್ತೀನಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:ಮುಖ್ಯಮಂತ್ರಿ ರೇಸ್​ನಲ್ಲಿ ಕಾಣಿಸಿದ ಮತ್ತೊಬ್ಬ ಲಿಂಗಾಯತ ಲೀಡರ್​; ಸಾಣೇಹಳ್ಳಿ ಶ್ರೀಗಳು ವಕಾಲತ್ತು

ಗಲಭೆಯ ವಿಚಾರವಾಗಿ ಮಾತನಾಡಿದ ಚಲುವರಾಯಸ್ವಾಮಿ, ಇಲ್ಲಿ ಎಫ್​ಐಆರ್ ಅಂತಿಮ ಅಲ್ಲ, ಪ್ರಕರಣದ ತನಿಖೆ ಅಂತಿಮ. ನನ್ನ ಆಪ್ತ ರಾಜೇಶ್​ ಈ ಗಲಾಟೆಯಲ್ಲಿ ಭಾಗಿಯಾಗಿಲ್ಲ. ಅವರ ಮಗ ಮಾತ್ರ ಭಾಗಿಯಾಗಿದ್ದಾನೆ ಎಂದು ಆಪ್ತ ರಾಜೇಶ್​ ಬಂಧಿಸದ ವಿಚಾರದ ಬಗ್ಗೆ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

publive-image

ಇನ್ನು ನಾಗಮಂಗಲದ ಗಲಭೆ ಬಗ್ಗೆ ಕಿಡಿಕಾರಿದ್ದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿದ ಚಲುವರಾಯಸ್ವಾಮಿ, ನಾಗಮಂಗಲಕ್ಕೆ ಬಂದು ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದು ಯಾಕೆ? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರವೇ ಹೊಣೆ ಎಂದಿದ್ದಾರೆ.

ಇದನ್ನೂ ಓದಿ: ‘1990ರಲ್ಲೂ ಕಾಂಗ್ರೆಸ್ ಸಿಎಂ ಕುರ್ಚಿ ಕಳ್ಕೊಂಡ್ರು’- ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ; ಹೇಳಿದ್ದೇನು?

ಯಾರೇನೇ ಮಾತನಾಡಿದ್ರೂ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಆಗಿರೋ ಗಲಾಟೆ ಬಗ್ಗೆ ಮಾತನಾಡುತ್ತಾ ಕುಳಿತರೇ ಆಗಲ್ಲ, ಮುಂದೆ ಜನ ಬದುಕಬೇಕು. ಶಾಂತಿ ಸಭೆ ಅನಿವಾರ್ಯ, ಎಲ್ಲರೂ ಒಗ್ಗಟ್ಟಾಗಿ ಇರಬೇಕಾಗುತ್ತೆ. ಯಾರೇನೇ ಮಾತನಾಡಿದ್ರು ತಲೆ ಕೆಡಿಸಿಕೊಳ್ಳಲ್ಲ ಎಂದಿರುವ ಚಲುವರಾಯಸ್ವಾಮಿ ಕಾಂಗ್ರೆಸ್​ನಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment