ನಾಗಮಂಗಲ ಗಣೇಶ ಗಲಾಟೆ ಪ್ರಾಯೋಜಿತ ಎಂದ ಹೆಚ್.ಡಿ. ಕುಮಾರಸ್ವಾಮಿ
ಉಪ ಚುನಾವಣೆಗೆ ಇಲ್ಲಿಂದಲೇ ದಾಳ ಉರುಳಿಸಿದ್ರಾ ಕೇಂದ್ರ ಸಚಿವ ಹೆಚ್‌ಡಿಕೆ?
1990ರಲ್ಲಿ ನಡೆದ ಗಲಾಟೆಯನ್ನು ಇಂದು ನೆನಪಿಸಿದ್ದೇಕೆ, ಸಿಎಂ ಕುರ್ಚಿಗೆ ಕಂಟಕ?
ಊರಿಗೆ ಬೆೆಂಕಿ ಹಚ್ಚಿ ರಾಜಕೀಯದ ಬೇಳೆ ಬೇಯಿಸಿಕೊಳ್ಬಹುದಾ? ನಾಗಮಂಗಲದಲ್ಲಿ ಹೊತ್ತಿರೋ ಕಿಚ್ಚಿಗೂ ಸಿಎಂ ಕುರ್ಚಿಗೂ ನಂಟಿದ್ಯಾ? ಹಳೇ ಮೈಸೂರು ಭಾಗದ ಧರ್ಮ ದಂಗಲ್‌ನಿಂದ ಸಿದ್ದರಾಮಯ್ಯ ಪಟ್ಟಕ್ಕೆ ಕಂಟಕವಿದ್ಯಾ? ಈ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿರೋರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ. 3 ದಶಕಗಳ ಹಳೆಯ ರಾಜಕೀಯ ಕಥಾನಕ ತೆಗೆದಿರೋ ಕೇಂದ್ರ ಸಚಿವರು ನಾಗಮಂಗಲಕ್ಕೂ ಚನ್ನಪಟ್ಟಣ ಬೈ ಎಲೆಕ್ಷನ್ ಕದನಕ್ಕೆ ಹೊಸ ಟಚ್ ಕೊಟ್ಟಿದ್ದಾರೆ. ಗಲಭೆ ಕಾಂಗ್ರೆಸ್ ಪ್ರಾಯೋಜಿತ ಎನ್ನುತ್ತಾ ಹೊಸ ಬಾಂಬ್ ಸಿಡಿಸಿದ್ದಾರೆ.
ನಾಗಮಂಗಲ ಪಟ್ಟಣದಲ್ಲಿ ಕಿಡಿಗೇಡಿಗಳ ಕಿಚ್ಚು ಧಗಧಗಿಸಿದೆ. ಈ ಗಲಾಟೆ ಮೂಲವೇನು ಅಂತ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಆದ್ರೆ, ಆಗಾಗ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸೋ ದಳಪತಿ ಗಲಭೆಗೂ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಗಲಭೆಗೂ ಪಟ್ಟಕ್ಕೂ ಕನೆಕ್ಷನ್ ಕೊಟ್ಟು ಸಿಎಂ ಸಿದ್ದರಾಮಯ್ಯ ಕುರ್ಚಿ ಉರುಳುವ ಭವಿಷ್ಯ ನುಡಿದಿದ್ದಾರೆ.
‘ನಾಗಮಂಗಲ ಗಲಭೆ ಕಾಂಗ್ರೆಸ್ ಪ್ರಯೋಜಿತ’
ಎತ್ತಣ ಗಲಭೆ, ಎತ್ತಣ ಸಿಎಂ ಕುರ್ಚಿ. ಆಗಾಗ ರಾಜಕೀಯಕ್ಕೆ ಸ್ಫೋಟಕ ಟ್ವಿಸ್ಟ್ ಕೊಡೋ ಹೆಚ್.ಡಿ ಕುಮಾರಸ್ವಾಮಿ ಅವರು ಅಚ್ಚರಿ ವಿಷಯ ತೆರೆದಿಟ್ಟಿದ್ದಾರೆ. 1990ರಲ್ಲಿ ನಡೆದಿದ್ದ ಬೆಳವಣಿಗೆಯನ್ನ ಈಗಿನ ಸಿಎಂ ಕುರ್ಚಿ ಕದನಕ್ಕೆ ಸಿಂಕ್ ಮಾಡಿ ಹೆಚ್‌ಡಿಕೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ‘ಬೋಗಸ್ L.R ಶಿವರಾಮೇಗೌಡ ಹಠಾವೋ’- ಮಾಜಿ ಸಂಸದರ ವಿರುದ್ಧ ರೊಚ್ಚಿಗೆದ್ದ ಬಲಿಜ ಸಮುದಾಯ; ಕಾರಣವೇನು?
1990ರಲ್ಲಿ ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗಲಭೆ ಎಬ್ಬಿಸಿತ್ತು. ಆಗ ವೀರೇಂದ್ರ ಪಾಟೀಲ್ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯಬೇಕಾದ ಪರಿಸ್ಥಿತಿ ಬಂತು. ಈಗಲೂ ನಡೆದಿರೋ ಈ ಗಲಾಟೆ ಸಿದ್ದರಾಮಯ್ಯರನ್ನ ಕೆಳಗೆ ಇಳಿಸಲು ನಡೆದಿರೋ ಪ್ರೀ ಪ್ಲಾನ್ ಅಂತ ಕವಡೆ ಹಾಕದೇ ಪರೋಕ್ಷ ಭವಿಷ್ಯ ನುಡಿದಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ.
1990ರ ಘಟನೆ ನೆನಪಿಸಿದ್ದೇಕೆ?
1990ರಲ್ಲಿ ವೀರೇಂದ್ರ ಪಾಟೀಲ್ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಿಕ್ಕೆ ಇದೇ ರಾಮನಗರ, ಚನ್ನಪಟ್ಟಣದಲ್ಲಿ ಇದೇ ರೀತಿಯಲ್ಲಿ ಅಂಗಡಿಗೆ ನುಗ್ಗಿ ಬೆಂಕಿಯಿಟ್ಟು ದೊಡ್ಡ ಮಟ್ಟದಲ್ಲಿ ಲಾ ಅಂಡ್ ಆರ್ಡರ್ ಪ್ರಾಬ್ಲಂ ಕ್ರಿಯೇಟ್ ಮಾಡಿದ್ರಲ್ಲಾ ಆ ಘಟನೆಯನ್ನು ನಾನು ನೆನಪಿಸಿಕೊಡುತ್ತೇನೆ. ವೀರೇಂದ್ರ ಪಾಟೀಲ್ ಸರ್ಕಾರ ತೆಗೆಯಲು ಕಾಂಗ್ರೆಸ್ ನಾಯಕರುಗಳೇ ಆವತ್ತು ರಾಮನಗರ, ಚನ್ನಪಟ್ಟಣ ಎರಡು ತಾಲೂಕು ಅವಳಿ ನಗರಗಳಾಗಿದ್ದವು. ಅಂದು ದೊಡ್ಡ ಮಟ್ಟದಲ್ಲಿ ದಿನಸಿ ಅಂಗಡಿ, ಪೇಟೆ ಬೀದಿಯಲ್ಲಿ ಬೆಂಕಿಯಿಟ್ಟು ದೊಡ್ಡ ಸಂಘರ್ಷ ನಡೀತು. ಆವತ್ತು ನಡೆದಿದ್ದು ಕೋಮು ಗಲಭೆಯಲ್ಲ. ಇದೇ ಕಾಂಗ್ರೆಸ್‌ನ ಪ್ರಾಯೋಜಿತ ಕಾರ್ಯಕ್ರಮ.– ಹೆಚ್.ಡಿ ಕುಮಾರಸ್ವಾಮಿ
ಬರೀ ಸಿಎಂ ಕುರ್ಚಿ ಕಥಾನಕ ಅಷ್ಟೇ ಅಲ್ಲ, ಬೊಂಬೆ ನಾಡಿನ ಉಪ ಕದನಕ್ಕೂ ಗಲಭೆ ನಡೆದಿದೆ ಅನ್ನೋದು ಹೆಚ್‌ಡಿಕೆ ವಾದ. ಮುಸ್ಲಿಂ ಮತದಾರರ ಓಲೈಕೆಗಾಗಿ ಈ ಗಲಾಟೆಗೆ ಕುಮ್ಮಕ್ಕು ಕೊಡಲಾಗಿದೆ ಅಂತ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಇತ್ತ ಇದೊಂದು ಪೂರ್ವ ನಿಯೋಜಿತ ಕೃತ್ಯ ಅಂತ ಬಿಜೆಪಿ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ವ್ಯವಸ್ಥಿತ ಸಂಚು’! ನಾಗಮಂಗಲ ಪ್ರಕರಣಕ್ಕೆ ಚನ್ನಪಟ್ಟಣ ಬೈಎಲೆಕ್ಷನ್ ಲಿಂಕ್ ಕೊಟ್ಟ ಕುಮಾರಸ್ವಾಮಿ
ಹೆಚ್‌ಡಿಕೆ ಹೇಳಿರೋ ಸಿಎಂ ಕುರ್ಚಿ ಭವಿಷ್ಯವಾಣಿಗೆ ಮಾಗಡಿ ಶಾಸಕ ಬಾಲಕೃಷ್ಣ ತಿರುಗೇಟು ಕೊಟ್ಟಿದ್ದಾರೆ. ಹೆಚ್‌ಡಿಕೆಯದ್ದು ಬೆಂಕಿ ಹಚ್ಚೋ ಕೆಲಸ ಎನ್ನುತ್ತಾ ಸಿದ್ದರಾಮಯ್ಯಗೆ ಜೈ ಎಂದಿದ್ದಾರೆ.
1990ರ ರಾಜಕೀಯ ಕಥಾನಕ ತೆರೆದಿಟ್ಟಿರೋ ದಳಪತಿ. 2024ಕ್ಕೆ ಅದನ್ನ ಕನೆಕ್ಟ್ ಮಾಡಿ ಕಥೆ ಬರೆದಿದ್ದಾರೆ. ಆದ್ರೆ, ಗಲಭೆ ಎಬ್ಬಿಸಿದ್ದು ಯಾರು? ಸಿಎಂ ಕುರ್ಚಿಗೆ ಕಂಟಕ ಆಗ್ತಿರೋ ಕಾಂಗ್ರೆಸ್‌ನ ಆ ರಾಜಕಾರಣಿ ಯಾರು ಅನ್ನೋದೆ ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ