newsfirstkannada.com

‘ಡಿ.ಕೆ ಶಿವಕುಮಾರ್ ಅವ್ರೇ ನಂ. 1 ಕ್ಯಾಂಡಿಡೇಟ್’- DCM ವಿರುದ್ಧವೇ ತಿರುಗಿಬಿದ್ದ ಸಚಿವರು! ಕಾರಣವೇನು?

Share :

Published February 18, 2024 at 12:43pm

    ಲೋಕಸಭೆಗೆ ಡಿಕೆ ಶಿವಕುಮಾರ್ ಅವರೇ ನಂಬರ್ 1 ಕ್ಯಾಂಡಿಡೇಟ್!

    ಕೆಪಿಸಿಸಿ ಅಧ್ಯಕ್ಷರ ಮೇಲೆ ಹೆಚ್‌.ಸಿ ಮಹದೇವಪ್ಪ ಬಹಿರಂಗ ಅಸಮಾಧಾನ

    ಸರ್ವೇ ಮಾಡಿ ಟಿಕೆಟ್ ನೀಡುವ ವಿಚಾರಕ್ಕೆ ಕೆಲವು ಸಚಿವರ ಆಕ್ಷೇಪ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆಯಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಸಂಪುಟ ಸದಸ್ಯರ ಅಸಮಾಧಾನ ಬಹಿರಂಗವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ಬಾರಿಯ ಚುನಾವಣೆಯಲ್ಲಿ ಸಚಿವರಿಗೆ ಟಿಕೆಟ್ ನೀಡಲು ಆಸಕ್ತಿ ಹೊಂದಿದ್ದರು. ಆದರೆ ಡಿಸಿಎಂ ಡಿಕೆಶಿ ನಡೆಗೆ ಸಚಿವರಿಂದ ವಿರೋಧ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌.ಸಿ ಮಹದೇವಪ್ಪ ತಮ್ಮ ಅಸಮಾಧಾನವನ್ನು ಬಹಿರಂಗ ಪಡಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಸಚಿವರು ಸ್ಪರ್ಧಿಸಬೇಕು ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ ಅವರು ಡಿಕೆ ಶಿವಕುಮಾರ್ ಅವರೇ ನಂಬರ್ 1 ಕ್ಯಾಂಡಿಡೇಟ್. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಡಿಸಿಎಂ ಡಿಕೆಶಿಯವರೇ ಪ್ರಬಲ ಅಭ್ಯರ್ಥಿ ಎಂದಿದ್ದಾರೆ. ಸಚಿವ ಮಹದೇವಪ್ಪ ಅವರ ಈ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಲೋಕಸಭೆ ಚುನಾವಣೆಗೆ ಸಚಿವರು ಸ್ಪರ್ಧೆ ಮಾಡಲಿ ಅನ್ನೋ ಡಿಕೆ ಶಿವಕುಮಾರ್‌ ಅವರ ನಿಲುವಿಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ಸಚಿವರಿಗೆ ಟಿಕೆಟ್​ ನೀಡುವ ಡಿಸಿಎಂ ಪ್ರಸ್ತಾಪಕ್ಕೆ ಹಲವು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್​ ಪ್ರಬಲ ಅಭ್ಯರ್ಥಿಯಾಗಿದ್ದಾರೆ, ಅವರೇ ನಿಲ್ಲಲಿ ಅನ್ನೋದು ಸಚಿವರ ಅಭಿಪ್ರಾಯ. ಅಷ್ಟೇ ಅಲ್ಲ ಸರ್ವೇ ಮಾಡಿ ಟಿಕೆಟ್ ನೀಡುವ ವಿಚಾರಕ್ಕೆ ಕೆಲವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ವೇ ಮಾಡಿ ಟಿಕೆಟ್ ನೀಡುವ ಪದ್ಧತಿ ಸರಿಯಲ್ಲ. ಇಷ್ಟು ವರ್ಷ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಡಿ.ಕೆ. ಶಿವಕುಮಾರ್ ಅವರೂ ಕೂಡ ಯಾವುದಾದ್ರೂ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಎಂದು ಸಚಿವರೇ ಈಗ ಕೆಪಿಸಿಸಿ ಅಧ್ಯಕ್ಷರಿಗೆ ಚೆಕ್‌ಮೇಟ್ ಇಟ್ಟಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಬಿಗ್​​​ ಶಾಕ್​​.. ಪಕ್ಷದ ಬ್ಯಾಂಕ್ ಖಾತೆ ಫ್ರೀಜ್​ ಆಗಿದ್ದೇಕೆ?

ಸಚಿವರಿಗೆ ಡಿಕೆ ಬ್ರದರ್ಸ್‌ ಕೌಂಟರ್‌!
ಲೋಕಸಭಾ ಚುನಾವಣೆಗೆ ನಂಬರ್ 1 ಕ್ಯಾಂಡಿಡೇಟ್ ಅನ್ನೋ ಸಚಿವ ಹೆಚ್‌.ಸಿ ಮಹದೇವಪ್ಪ ಅವರ ಹೇಳಿಕೆಗೆ ಡಿಕೆ ಶಿವಕುಮಾರ್ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. ಮಹದೇವಪ್ಪ ಹೇಳಿಕೆಗೆ ಹೌದು.. ಹೌದು ಎಂದಷ್ಟೇ ಉತ್ತರಿಸಿದ್ದಾರೆ. ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಕೂಡ ಒಳ್ಳೆ ಸಲಹೆ ಕೊಟ್ಟಿದ್ದಾರೆ. ನಾನು ಸ್ವಾಗತ ಮಾಡುತ್ತೇನೆ. ಸ್ಪರ್ಧೆ ಮಾಡುವ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಿ.ಕೆ ಶಿವಕುಮಾರ್ ಅವ್ರೇ ನಂ. 1 ಕ್ಯಾಂಡಿಡೇಟ್’- DCM ವಿರುದ್ಧವೇ ತಿರುಗಿಬಿದ್ದ ಸಚಿವರು! ಕಾರಣವೇನು?

https://newsfirstlive.com/wp-content/uploads/2024/02/Dk-Shivakumar-Congress.jpg

Load More