newsfirstkannada.com

ಮಗಳು ಪ್ರಿಯಾಂಕಾ ಗೆದ್ರೂ ಭಾರೀ ಆಕ್ರೋಶ ಹೊರ ಹಾಕಿದ ಸತೀಶ್​ ಜಾರಕಿಹೊಳಿ; ಅಸಲಿ ಕಾರಣವೇನು?

Share :

Published June 6, 2024 at 6:34am

  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್​ಗೆ ಮೈನಸ್​ ಆಗಿದ್ದು ಎಲ್ಲಿ?

  ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಜಯ ತಂದು ಕೊಟ್ಟ ಕ್ಷೇತ್ರದ ಜನತೆ

  ಬಿಜೆಪಿಯಿಂದ ಬಂದವರು ಸರಿಯಾಗಿ ಕೆಲಸ ಮಾಡಲಿಲ್ಲ ಹೊಸ ಬಾಂಬ್

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್​ ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಕನಸು ಭಗ್ನಗೊಂಡಿದೆ. ಬಿಜೆಪಿಯ ಭದ್ರಕೋಟೆ ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಗೆದ್ದು ಬೀಗಿದ್ದಾರೆ. ಪುತ್ರನ ಸೋಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​​ರನ್ನು ತೀವ್ರ ಬೇಸರಕ್ಕೆ ತಳ್ಳಿದೆ. ಅತ್ತ ಚಿಕ್ಕೋಡಿಯಲ್ಲಿ ಪುತ್ರಿ ಪ್ರಿಯಾಂಕಾ ಗೆದ್ದರೂ ಕೂಡ ಸಚಿವ ಸತೀಶ್ ಜಾರಕಿಹೊಳಿ ಬೇಸರ ಹೊರಹಾಕಿದ್ದು ಬಿಜೆಪಿಯಿಂದ ಬಂದವರು ಸರಿಯಾಗಿ ಕೆಲಸ ಮಾಡಲಿಲ್ಲ ಅಂತ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: PHOTO: ರಾಕಿಂಗ್​ ಸ್ಟಾರ್​ ಯಶ್​ ಮಕ್ಕಳಿಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟ ಡಾರ್ಲಿಂಗ್​ ಪ್ರಭಾಸ್​​.. ಏನದು?

2024ರ ಮಹಾಭಾರತದ ಯುದ್ಧಕ್ಕೆ ತೆರೆಬಿದ್ದಿದೆ. ಚುನಾವಣೆಯಲ್ಲಿ ಸೋತವರ ಪರಿಸ್ಥಿತಿ ಪರೀಕ್ಷೆ ಬರೆದು ಫೇಲಾದ ವಿದ್ಯಾರ್ಥಿಯಂತಾಗಿದೆ. ಈ ಬಾರಿಯ ಫಲಿತಾಂಶ ಕೆಲವರಿಗೆ ಅಚ್ಚರಿಯ ಗೆಲುವು ನೀಡಿದೆ. ಮತ್ತೂ ಕೆಲವರಿಗೆ ಅನಿರೀಕ್ಷಿತ ಆಘಾತ ನೀಡಿದೆ. ಗೆದ್ದವರು ಸಂಭ್ರಮದಲ್ಲಿದ್ದರೆ ಸೋತವರು ಸೋಲಿನ ಆತ್ಮಾವಲೋಕದಲ್ಲಿ ತೊಡಗಿದ್ದಾರೆ. ಬಿಜೆಪಿಯ ಭದ್ರನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರ ಮೃಣಾಲ್​​ ಹೆಬ್ಬಾಳ್ಕರ್ ಸೋಲು ಕಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್​​ 1 ಲಕ್ಷ 80 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರನನ್ನ ಮೊದಲ ಬಾರಿಗೆ ಸಂಸತ್​​ಗೆ ಕಳುಹಿಸುವ ಅವಕಾಶ ಕೈ ತಪ್ಪಿದೆ, ಪುತ್ರನ ಸೋಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​ರನ್ನು ಬೇಸರಕ್ಕೆ ತಳ್ಳಿದೆ. ಬೆಳಗಾವಿ ಕ್ಷೇತ್ರದಲ್ಲಿ ಕಳೆದ 4 ಅವಧಿಗಳಲ್ಲಿ ಸುರೇಶ್ ಅಂಗಡಿ ಸಂಸದರಾಗಿದ್ದರು.

ಇದನ್ನೂ ಓದಿ: ಗೀತಾ ಶಿವರಾಜ್​ಕುಮಾರ್​​ ವಿರುದ್ಧ ನಾಲಿಗೆ ಹರಿಬಿಟ್ಟ ಕುಮಾರ್​ ಬಂಗಾರಪ್ಪ.. ಏನಂದ್ರು?

ಅತ್ತ ಚಿಕ್ಕೋಡಿ ಮೀಸಲು ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಚಮತ್ಕಾರ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಭರ್ಜರಿ ಜಯಗಳಿಸಿ ಚಿಕ್ಕೋಡಿ ಕ್ಷೇತ್ರಾಧಿಪತಿಯಾಗಿದ್ದಾರೆ. ಹಾಲಿ ಸಂಸದರಾಗಿದ್ದ ಅಣ್ಣಾ ಸಾಹೇಬ್ ಜೊಲ್ಲೆಗೆ ಸೋಲುಣಿಸಿ ಚಿಕ್ಕೋಡಿ ಕ್ಷೇತ್ರದಿಂದ ಆಯ್ಕೆಯಾದ ಅತ್ಯಂತ ಕಿರಿಯ ಸಂಸದೆ ಎನಿಸಿದ್ದಾರೆ. ಅಭೂತಪೂರ್ವ ಗೆಲುವಿಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕಾ ಜಾರಕಿಹೊಳಿ ಜಯ ತಂದು ಕೊಟ್ಟ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಗಳು ಗೆದ್ದರೂ ಕೂಡ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ. ಅಥಣಿ ಭಾಗದಲ್ಲಿ ಲೀಡ್ ಕಡಿಮೆಯಾಗಿದ್ದು ಬಿಜೆಪಿಯಿಂದ ಬಂದವರಿಂದ ಮೋಸ ಆಗಿದೆ ಅಂತ ಪರೋಕ್ಷವಾಗಿ ಲಕ್ಷ್ಮಣ್ ಸವದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್​​ಗೆ ಈ ಬಾರಿ ಫಲಿತಾಂಶ ಸ್ವಲ್ಪ ಸಿಹಿ, ಸ್ವಲ್ಪ ಕಹಿ ನೀಡಿದೆ. ಮಗನ ಸೋಲಿನ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ಏನು ಅಂತ ಕಾದು ನೋಡಬೇಕಿದೆ.

ಈ ಚುನಾವಣೆಯೊಂದು ಚಾಲೆಂಜ್ ಆಗಿತ್ತು, ಸಾಕಷ್ಟು ಅಡೆತಡೆಗಳನ್ನ ಮಾಡಿದ್ದಾರೆ. ಸುಮಾರು ವಿರೋಧಿಗಳು ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದರು. ಗೆಲ್ಲಲಿಕೆ ಈ ಜಿಲ್ಲೆಗೆ ಮಾಡಿರುವ ಸೇವೆಗೆ ಹಾಗೂ ಸಿದ್ದರಾಮಯ್ಯ ಅವರ ಸೇವೆ ಗೆಲುವಿಗೆ ಸಹಾಯವಾಗಿದೆ. ಈ ಚುನಾವಣೆ ಗೆಲ್ಲಲಿಕೆ ನಾವು ಬಹಳಷ್ಟು ತಂತ್ರಗಳನ್ನ ಮಾಡಿದ್ವಿ. ನಮ್ಮ ರಾಜಕೀಯ ಅನುಭವ ಆಧಾರದ ಮೇಲೆ ಈ ಚುನಾವಣೆ ಗೆಲ್ಲಲೇಬೇಕಾಯಿತು. ನಾವು ಮೊದಲೇ ಹೇಳಿದ್ವಿ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಅಂತಾ. ಕಾರ್ಯಕರ್ತರನ್ನ ಬೆಳಸಬೇಕು ಮತ್ತು ಬೇರೆ ಸಮುದಾಯಕ್ಕೆ ಕೊಡಬೇಕು ಅಂತಾ ಹೇಳಿದ್ದೆ. ಆದರೆ ನಮ್ಮ ಪಕ್ಷ ನಿಮ್ಮ ಮಗಳನ್ನ ನೀವು ನಿಲ್ಲಿಸಬೇಕು ಗೆಲ್ಲುತ್ತಾರೆ ಅಂತಾ ಹೇಳಿದ್ರು.

ಈಗ ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧೆ ಮಾಡಿದ್ವಿ ಗೆಲುವಾಗಿದೆ. ಬಿಜೆಪಿ ಅಭ್ಯರ್ಥಿ ಜೊಲ್ಲೆ ಅವರ ಕುರಿತು ಅವರ ಪಕ್ಷದಲ್ಲೆ ಅಸಮಾಧಾನ ಇತ್ತು. ಕೇವಲ‌ ಮೋದಿ ಅವರನ್ನ ನಂಬಿದ್ದರು ಮತ್ತು ಧರ್ಮವನ್ನ ನಂಬಿ ಕೆಲಸ ಮಾಡಿದ್ದರು. ನಮ್ಮ ಗ್ಯಾರಂಟಿಗಳು ಹಾಗೂ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕೆಲಸದಿಂದ ನಮಗೆ ಗೆಲುವಾಗಿದೆ. ಗ್ಯಾರಂಟಿ ಒಳ್ಳೆಯದು ಇರಬಹುದು ಆದರೆ ಚುನಾವಣೆ ಚುನಾವಣೆ ಆಗಿರುತ್ತೆ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಒಂದು ಕಡೆ ವರ್ಕೌಟೆ ಆಗದೆ ಇರುತ್ತೆ ಸಾರ್ವಜನಿಕರು ಒಪ್ಪಕ್ಕೊಳ್ಳಬೇಕಾಗುತ್ತೆ. ಜನರು ರಾಜ್ಯ ಚುನಾವಣೆ ಬೇರೆ ಕೇಂದ್ರ ಚುನಾವಣೆ ಬೇರೆ.

ಸತೀಶ್ ಜಾರಕಿಹೊಳಿ, ಸಚಿವ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳು ಪ್ರಿಯಾಂಕಾ ಗೆದ್ರೂ ಭಾರೀ ಆಕ್ರೋಶ ಹೊರ ಹಾಕಿದ ಸತೀಶ್​ ಜಾರಕಿಹೊಳಿ; ಅಸಲಿ ಕಾರಣವೇನು?

https://newsfirstlive.com/wp-content/uploads/2024/06/priyaka.jpg

Load More