newsfirstkannada.com

ಇಬ್ಬರು ಮಕ್ಕಳನ್ನು 23 ಬಾರಿ ಚುಚ್ಚಿ ಕೊಂದ ಅನ್ಯಕೋಮಿನ ಯುವಕ.. ಬೆಚ್ಚಿ ಬೀಳಿಸುವಂತಿದೆ ಪೋಸ್ಟ್​ಮಾರ್ಟಂ​ ವರದಿ

Share :

Published March 21, 2024 at 10:51am

Update March 21, 2024 at 10:56am

    ದೇಶವನ್ನೇ ಬೆಚ್ಚಿ ಬೀಳಿಸಿದ ಡಬಲ್​ ಮರ್ಡರ್​ ಕೇಸ್ ಮರಣೋತ್ತರ ಪರೀಕ್ಷೆ ವರದಿ​

    ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದು ಎನ್​ಕೌಂಟರ್​ಗೆ ಬಲಿಯಾದ ಕ್ಷೌರಿಕ

    ತಪ್ಪಿಸಿಕೊಂಡಿರುವ ಸಹೋದರನ ಸುಳಿವು ಕೊಟ್ಟರೆ 25 ಸಾವಿರ ರೂಪಾಯಿ ಬಹುಮಾನ

ಉತ್ತರ ಪ್ರದೇಶ: ಅನ್ಯಕೋಮಿನ ವ್ಯಕ್ತಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಬುಡೌನ್​ನ ಮನೆಯಲ್ಲಿದ್ದ 3 ಮಕ್ಕಳ ಮೇಲೆ ಆಯುಧದಿಂದ ದಾಳಿ ಮಾಡಿ ಇಬ್ಬರನ್ನು ಸ್ಥಳದಲ್ಲೇ ಕೊಲೆ ಮಾಡಿದ್ದನು. ವ್ಯಕ್ತಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದು ಕೊನೆಗೆ ಆತನನ್ನು ಬಂಧಿಸುವಲ್ಲಿ ಮುಂದಾದ ಪೊಲೀಸರ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದನು. ಕೊನೆಗೆ ಆತನನ್ನು ಎನ್​ಕೌಂಟರ್​ ಮಾಡಲಾಗಿದೆ. ಇದೀಗ ಇಬ್ಬರ ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ.

22 ವರ್ಷದ ಸಾಜಿದ್​ ಎಂಬ ಅನ್ಯಕೋಮಿನ ವ್ಯಕ್ತಿ ಆಯುಷ್​ (12) ಮತ್ತು ಅಹಾನ್​ನನ್ನು (8) ಕೊಲೆ ಮಾಡಿದ್ದಾನೆ. ಮತ್ತೋರ್ವ ಸಹೋದರ ಆತನ ದಾಳಿಯಿಂದ ಗಂಭೀರ ಗಾಯಗೊಂಡಿದ್ದನೆ. ಹರಿತವಾದ ಆಯುಧದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮರಣೋತ್ತರ ವರದಿಯಲ್ಲಿ ಆಯುಷ್​​ ದೇಹದ ಮೇಲೆ 14 ಗಾಯಗಳು ಕಾಣಿಸಿವೆ. ಅಹಾನ್​ಗೆ ದೇಹದ ಮೇಲೆ 9 ಗಾಯಗಳು ಕಂಡಿವೆ. ಸಾಜಿದ್​ ಇಬ್ಬರ ಮೇಲೆ ಒಟ್ಟು 23 ಬಾರಿ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆಗಾರ ಸಾಜಿದ್​​ ಇಬ್ಬರು ಮಕ್ಕಳ ಬೆನ್ನು, ಎದೆ, ಕಾಲು ಮತ್ತು ಕತ್ತಿನ ಮೇಲೆ ದಾಳಿ ಮಾಡಿದ್ದಾನೆ. ಓಡಲು ಯತ್ನಿಸಿದ ಸಮಯದಲ್ಲಿ ಅವರ ಕಾಲುಗಳಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸಾಜಿದ್​ ಮರಣೋತ್ತರ ಪರೀರಕ್ಷೆ ವರದಿ

ಎನ್​ಕೌಂಟರ್​ ಮೂಲಕ ಹತನಾದ ಸಾಜಿದ್​ಗೆ ಮೂರು ಗುಂಡುಗಳನ್ನು ಹಾರಿಸಲಾಗಿದೆ. ಭೀಕರ ಹತ್ಯೆಯ ಬಳಿಕ ಆತನನ್ನು ಪೊಲೀಸರು ಹಿಡಿಯಲು ಯತ್ನಿಸಿದಾಗ ದಾಳಿಗೆ ಮುಂದಾಗುತ್ತಾನೆ. ಕೊನೆಗೆ ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ. ಇನ್ನು ಪೊಲೀಸ್​​ ಕಾರ್ಯಚರಣೆ ವೇಳೆ ಆತನ ಸಹೋದರ ಜಾವೇದ್​ ತಪ್ಪಿಸಿಕೊಂಡಿದ್ದಾನೆ.

ಆರೋಪಿ ತಂದೆ ಚಿಕ್ಕಪ್ಪ ಪೊಲೀಸರ ವಶಕ್ಕೆ

ಜಾವೇದ್​ ಬಂಧಿಸಲು ಮುಂದಾದ ಪೊಲೀಸರು ಆತನ ತಂದೆ ಮತ್ತು ಚಿಕ್ಕಪ್ಪನನ್ನು ವಿಚಾರಣೆ ಒಳಪಡಿಸಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿಯುತ್ತಿದ್ದಾರೆ. ಅತ್ತ ಜಾವೇದ್​ ಪತ್ತೆಗೆ ಬಲೆ ಬೀಸಿದ್ದಾರೆ.

ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಲಿಲ್ಲ ತೇಲಿದೆ. ಮರಣೋತ್ತರ ಪರೀಕ್ಷೆ ನಂತರ ಅಂತಿಮ ವಿಧಿ ವಿಧಾನಗಳ ಮೂಲಕ ಕಾರ್ಯ ನೆರವೇರಿಸಲಾಗಿದೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ; ಅನ್ಯ ಕೋಮಿನ ವ್ಯಕ್ತಿಯಿಂದ ಇಬ್ಬರು ಮಕ್ಕಳ ಬರ್ಬರ ಹತ್ಯೆ

25 ಸಾವಿರ ಬಹುಮಾನ

ಸದ್ಯ ಸಾಜಿದ್​ ಎನ್​ಕೌಂಟರ್​ ಕುರಿತಾಗಿ ತನಿಖೆ ಚುರುಕುಗೊಂಡಿದೆ. 15 ದಿನಗಳ ಸಮಗ್ರ ವರದಿಯನ್ನು ಒದಗಿಸೋದು ವಿಚಾರಣೆಯ ಪ್ರಮುಖ ಗುರಿಯಾಗಿದೆ. ಜಾವೇದ್​​ ಬಗ್ಗೆ ಹಿಡಿಯಲು ಮಾಹಿತಿ ಕೊಟ್ಟವರಿಗೆ 25 ಸಾವಿರ ಬಹುಮಾನ ಘೋಷಿಸಿದ್ದಾರೆ. ಆತನ ಪತ್ತೆಗಾಗಿ ಪೊಲೀಸರು ತಂಡವನ್ನು ರಚಿಸಿದ್ದಾರೆ.

ಇಬ್ಬರು ಮಕ್ಕಳನ್ನು 23 ಬಾರಿ ಚುಚ್ಚಿ ಕೊಂದ ಅನ್ಯಕೋಮಿನ ಯುವಕ.. ಬೆಚ್ಚಿ ಬೀಳಿಸುವಂತಿದೆ ಪೋಸ್ಟ್​ಮಾರ್ಟಂ​ ವರದಿ

https://newsfirstlive.com/wp-content/uploads/2024/03/Uttar-pradesh-1.jpg

Load More