/newsfirstlive-kannada/media/post_attachments/wp-content/uploads/2024/09/Ganesha-1-1.jpg)
ಮಂಡ್ಯ: ಗಣೇಶನನ್ನು ವಿಘ್ನವಿನಾಯಕ ಎಂದು ಕರೆಯುತ್ತೇವೆ. ಯಾವುದೇ ಕೆಲಸ ಆರಂಭಿಸುವುದಕ್ಕೂ ಮುನ್ನ ಗಣಪತಿಯನ್ನು ಪ್ರಾರ್ಥಿಸಿ ಪ್ರಾರಂಭಿಸುತ್ತೇವೆ. ಆದರೀಗ ವಿಘ್ನವಿನಾಯಕನ ಮೇಲೂ ಕಿಡಿಗೇಡಿಗಳ ಕಣ್ಣು ಬಿದ್ದಿದೆ ಎಂದರೆ ನಂಬಲಸಾಧ್ಯ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಂಪುರ ಗ್ರಾಮದಲ್ಲೊಂದು ದುರ್ಘಟನೆ ಸಂಭವಿಸಿದೆ. ಹಬ್ಬದಂದು ಗ್ರಾಮದ ಯುವಕರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನೇ ಕಿಡಿಗೇಡಿಗಳು ಕದ್ದೊಯ್ದಿದ್ದಾರೆ.
/newsfirstlive-kannada/media/post_attachments/wp-content/uploads/2024/09/Ganesha-2.jpg)
ಇದನ್ನೂ ಓದಿ: ಸೆಕ್ಯೂರಿಟಿ ಕೆಲಸದ ಬದಲಾಗಿ ಯುದ್ಧಭೂಮಿಯಲ್ಲಿ ಕೆಲಸ.. ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಕೊನೆಗೂ ವಾಪಸ್
ಗ್ರಾಮಸ್ಥರು ಇಂದು ವಿಜೃಂಭಣೆಯಿಂದ ವಿಘ್ನ ವಿನಾಯಕನ ವಿಸರ್ಜನೆಗೆ ಪ್ಲಾನ್ ಮಾಡಿದ್ದರು. ಆದರೆ ಶಿವಲಿಂಗದ ಕೆಳಗೆ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಕಿಡಿಗೇಡಿಗಳು ಕನ್ನ ಹಾಕಿದ್ದಾರೆ. ಬೆಳಿಗ್ಗೆ ಗ್ರಾಮಸ್ಥರು ಬಂದು ನೋಡಿದಾಗ ಗಣೇಶ ವಿಗ್ರಹ ಕಣ್ಮರೆಯಾಗಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಗಣಪನಿಲ್ಲದನ್ನ ಕಂಡು ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಬಸವಣ್ಣನ ನಾಡಲ್ಲೇ ಅಸ್ಪೃಶ್ಯತೆ ಜೀವಂತ! ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿತ
ಅನ್ನಸಂತರ್ಪಣೆ ಮೂಲಕ ಅದ್ದೂರಿಯಾಗಿ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದ ಗ್ರಾಮಸ್ಥರಿಗೆ ಭಾರೀ ನಿರಾಸೆಯಾಗಿದ್ದಾರೆ. ಮೂರ್ತಿ ಕಳ್ಳತನ ಮಾಡಿರುವ ಕಿಡಿಗೇಡಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಕಿಡಿಗೇಡಿಗಳು ಗಣೇಶ ಪ್ರತಿಷ್ಠಾಪನೆ ಸಮಯದಲ್ಲಿ ಅಕ್ಕಪಕ್ಕ ಮನೆಗಳ ನಲ್ಲಿಗಳನ್ನೂ ಮುರಿದು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us