ಮಿಸ್ ಸ್ವಿಟ್ಜರ್ಲೆಂಡ್ ಫೈನಲಿಸ್ಟ್ ಕ್ರಿಸ್ಟೀನಾ ಜೋಕ್ಸಿಮೊವಿಕ್ ನಿಗೂಢ ಸಾವು.. ದುರಂತಕ್ಕೆ ಬೆಚ್ಚಿ ಬಿದ್ದ ಜನರು!

author-image
Gopal Kulkarni
Updated On
ಮಿಸ್ ಸ್ವಿಟ್ಜರ್ಲೆಂಡ್ ಫೈನಲಿಸ್ಟ್ ಕ್ರಿಸ್ಟೀನಾ ಜೋಕ್ಸಿಮೊವಿಕ್ ನಿಗೂಢ ಸಾವು.. ದುರಂತಕ್ಕೆ ಬೆಚ್ಚಿ ಬಿದ್ದ ಜನರು!
Advertisment
  • ಮನೆಯಲ್ಲಿ ಮಾಜಿ ಮಿಸ್ ಸ್ವಿಟ್ಜರ್​ಲ್ಯಾಂಡ್ ಫೈನಲಿಸ್ಟ್​ ಕ್ರಿಸ್ಟೀನಾ ಬರ್ಬರ ಹ*ತ್ಯೆ
  • ಕೊ*ಲೆ ಮಾಡಿ, ದೇಹವನ್ನು ಪೀಸ್ ಪೀಸ್ ಮಾಡಿ ಎಲ್ಲಿ ಇಡಲಾಗಿತ್ತು ಗೊತ್ತಾ?
  • ಸ್ಯಾಡಿಸ್ಟ್​ ಮಾನಸಿಕ ಸಮಸ್ಯೆಗಳೇ ಕ್ರಿಸ್ಟೀನಾ ಭೀಕರ ಅಂತ್ಯಕ್ಕೆ ಕಾರಣವಾಯ್ತಾ?

ಮಾಜಿ ಮಿಸ್​ ಸ್ವಿಟ್ಜರ್​ಲ್ಯಾಂಡ್ ಫೈನಲಿಸ್ಟ್ ಭೀಕರ ಹತ್ಯೆಗೆ ಆ ದೇಶವೇ ಒಂದು ಹಂತಕ್ಕೆ ಬೆಚ್ಚಿ ಬಿದ್ದಿದೆ. 38 ವರ್ಷದ ಕ್ರಿಸ್ಟೀನಾ ಜೋಕ್ಸಿಮೊವಿಕ್​ರನ್ನ ಅವರ ಪತಿಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಬಿನ್ನಿಂಗೆನ್​ನ ಅವರ ಮನೆಯ ಲಾಂಡ್ರಿಯಲ್ಲಿ ಫೆಬ್ರವರಿ 13 ರಂದು ಕ್ರಿಸ್ಟೀನಾ ಜೋಕ್ಸಿಮೊವಿಕ್ ಅವರ ಮೃತದೇಹ ಸಿಕ್ಕಿತ್ತು. ಪ್ರಕರಣವನ್ನು ತನಿಖೆ ಮಾಡಿದ ಸ್ಥಳೀಯ ಪೊಲೀಸರು ಕ್ರಿಸ್ಟೀನಾರ 41 ವರ್ಷದ ಪತಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕ್ರಿಸ್ಟೀನಾ ಪತಿ ಥಾಮಸ್​ರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು. ವಿಚಾರಣೆಯಲ್ಲಿ ತನ್ನ ಪತ್ನಿಯನ್ನು ನಾನೇ ಹತ್ಯೆ ಮಾಡಿರುವುದಾಗಿ ಥಾಪಸ್ ಹೇಳಿದ್ದಾರೆ. ಜೊತೆಗೆ ಅಲ್ಲಿನ ಫೆಡರಲ್ ಕೋರ್ಟ್ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ಗೌತಮ್ ಅದಾನಿಗೆ ಬಿಗ್ ಶಾಕ್​.. 26,000 ಕೋಟಿ ಹಣ ಫ್ರೀಜ್! ಏನಿದು ಅಸಲಿ ಕತೆ?

ಫೆಬ್ರವರಿ 13 ರಂದು ಕ್ರಿಸ್ಟೀನಾ ತಮ್ಮ ಮನೆಯ ಲಾಂಡ್ರಿಯಲ್ಲಿ ಹೆಣವಾಗಿ ಬಿದ್ದಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ವೇಳೆ ಆಕೆಯನ್ನು ಕತ್ತುಹಿಸುಕಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. ಕ್ರಿಸ್ಟೀನಾ ಮೃತದೇಹ ಸಿಕ್ಕ ಲಾಂಡ್ರಿ ರೂಮ್​ನಲ್ಲಿ ಚಿಕ್ಕ ಗರಗಸ, ಚಾಕೂ ಹಾಗೂ ದೊಡ್ಡದೊಂದು ಕತ್ತರಿ ಕೂಡ ಸಿಕ್ಕಿತ್ತು. ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಆಕೆಯ ದೇಹವನ್ನು ತುಂಡರಿಸಿ ಅದರ ಮೇಲೆ ಕೆಮಿಕಲ್​ ಸೊಲ್ಯೂಷನ್​​ಗಳನ್ನು ಹಾಕಿ ಕೊಲೆಯನ್ನು ಮುಚ್ಚಿಹಾಕುವ ಕಾರ್ಯವನ್ನು ಮಾಡಲಾಗಿತ್ತು.

publive-image
ಆರೋಪಿ ಥಾಮಸ್ ಹೇಳುವ ಪ್ರಕಾರ ನಾನು ನನ್ನ ಆತ್ಮರಕ್ಷಣೆಗಾಗಿ ಆಕೆಯನ್ನು ಕೊಲೆ ಮಾಡಿದ್ದೇನೆ. ಆಕೆ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಬಂದಳು. ಈ ವೇಳೆ ನಾನು ಆಕೆಯನ್ನು ಹತ್ಯೆ ಮಾಡಿದೆ ಹಾಗೂ ಆಕೆಯ ದೇಹವನ್ನು ಕೆಮಿಕಲ್​ ಬಳಸಿ ಗುರುತು ಸಿಗದಂತೆ ಮಾಡಲು ಯತ್ನಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭೀಕರ ಚಂಡ ಮಾರುತ; ಹಠಾತ್ ಪ್ರವಾಹದಿಂದ 226 ಜನ ಸಾವು.. 134ಕ್ಕೂ ಹೆಚ್ಚು ಮಂದಿ ಕಣ್ಮರೆ

ಥಾಮಸ್ ಹೇಳುವ ಆತ್ಮರಕ್ಷಣೆಯ ವಾದವನ್ನು ಫೊರೆನ್ಸಿಕ್ ರಿಪೋರ್ಟ್ ಅಲ್ಲಗಳೆದಿದೆ. ವಿಚಾರಣೆ ನಡೆಸಿದ ಪೊಲೀಸರು ಆತನಿಗೆ ಹಲವು ಮಾನಸಿಕ ಸಮಸ್ಯೆಗಳು ಇವೆ ಎಂದು ಹೇಳಲಾಗಿದೆ. ಅವನಲ್ಲೊಂದು ಸ್ಯಾಡಿಸ್ಟ್ ಮನಸ್ಥಿತಿ ಇದೆ ಎಂದು ಗುರುತಿಸಲಾಗಿದೆ.

ಕೊಲೆಯಾದ ಕ್ರಿಸ್ಟೀನಾ ಜೊಕ್ಸಿಮೋವಿಕ್ಸ್ ಹುಟ್ಟಿದ್ದು ಬನ್ನಿಂಗೆನ್​​ನ ಸರ್ಬಿಯಾ ಮನೆತನದಲ್ಲಿ. ಮಾಡಲಿಂಗ್​​ ಕ್ಷೇತ್ರಕ್ಕೆ ಇಳಿದಿದ್ದ ಕ್ರಿಸ್ಟೀನಾ 2003ರಲ್ಲಿ ಮಿಸ್ ನಾರ್ಥ್​ವೆಸ್ಟ್ ಸ್ವಿಟ್ಜರ್​ಲ್ಯಾಂಡ್​ನ ಗರಿಮೆಯನ್ನು ಪಡೆದವರು. 2008ರಲ್ಲಿ ಮಿಸ್ ಸ್ವಿಡ್ಜರ್​ಲ್ಯಾಂಡ್​ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನವರೆಗೂ ಹೋದವರು. ನಂತರ ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವತಿಯರ ಸಬಲೀಕರಣದತ್ತ ಗಮನವಹಿಸಿದ ಕ್ರಿಸ್ಟೀನಾ ಅವರಲ್ಲಿ ಹೊಸ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿದ್ದರು. ಇತ್ತೀಚೆಗೆ ಕೋಚಿಂಗ್​ ಸೆಂಟರ್ ಆರಂಭಿಸಿದ್ದ ಕ್ರಿಸ್ಟೀನಾ ಅದನ್ನು ಕೂಡ ತುಂಬಾ ಯಶಸ್ವಿಯಾಗಿ ನಡೆಸಿಕೊಂಡು ಹೋಗಿದ್ದರು. ಜೊತೆಗೆ ಐಟಿ ಕಂಪನಿಯ ರಿಕ್ರ್ಯೂಟ್​ಮೆಂಟ್ ವಿಭಾಗದಲ್ಲಿಯೂ ಕೂಡ ಕಾರ್ಯನಿರ್ವಹಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment