Advertisment

ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..

author-image
Ganesh
Updated On
ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..
Advertisment
  • 17 ವರ್ಷ ಇದ್ದಾಗ ಮನೆ ಬಿಟ್ಟು ಹೋಗಿದ್ದ ವಿಜಯ್​ಕುಮಾರ್
  • ಮಗನ ಫೋಟೋ ಇಟ್ಕೊಂಡು ಊರೂರು ಸುತ್ತಿದ್ದ ಪೋಷಕರು
  • ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಸೆ ಬಿಟ್ಟಿದ್ದ ಅಪ್ಪ-ಅಮ್ಮ

ದಾವಣಗೆರೆ: ಕರುಳ ಕುಡಿಯ ಭಾವನಾತ್ಮಕ ಕ್ಷಣಗಳಿಗೆ ತಾಲೂಕಿನ ಜವಳಘಟ್ಟ ಗ್ರಾಮ ಸಾಕ್ಷಿ ಆಗಿದೆ. 20 ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದ ಮಗ, ತಾಯಿಯ ಎದುರು ದಿಢೀರ್ ಪ್ರತ್ಯಕ್ಷವಾಗಿದ್ದು ಹೆತ್ತ ಕುಡಿಯ ನೋಡುತ್ತಿದ್ದಂತೆಯೇ ಹಡೆದವ್ವ ತಬ್ಬಿಕೊಂಡು ಗಳಗಳನೇ ಕಣ್ಣೀರು ಇಟ್ಟಿದ್ದಾಳೆ.

Advertisment

ವಿಜಯಕುಮಾರ್ 20 ವರ್ಷಗಳ ಬಳಿಕ ಮನೆಗೆ ಬಂದಿದ್ದಾನೆ. 2005ರಲ್ಲಿ 17 ವಯಸ್ಸಿನವಾಗಿದ್ದ ಸಂದರ್ಭದಲ್ಲಿ ವಿಜಯ್ ಕುಮಾರ್ ಹೇಳದೆ ಕೇಳದೆ ಮನೆ ತೊರೆದಿದ್ದ. ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ ಪೋಷಕರು ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

publive-image

ವಿಜಯ ಕುಮಾರ್ ತಂದೆ ತಿಮ್ಮಪ್ಪ, ತಾಯಿ ಶಾರದಮ್ಮ 20 ವರ್ಷಗಳಿಂದ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಹೀಗಾಗಿ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿದುಕೊಂಡಿದ್ದರು. ಇದೀಗ ಆಧಾರ್ ಕಾರ್ಡ್ ಮಾಡಿಸಲು ಶಾಲಾ ದಾಖಲಾತಿ ಬೇಕು ಅಂದಿದ್ದಕ್ಕೆ ದಾಖಲಾತಿ ತೆಗೆಸಲು ಊರಿಗೆ ಬಂದಿದ್ದಾನೆ. ಜವಳಘಟ್ಟ ಗ್ರಾಮಕ್ಕೆ ಹೋಗಲು ದಾರಿ ಕೇಳಿದಾಗ ವಿಜಯ್ ಕುಮಾರ್ ಅನ್ನೋದು ಗೊತ್ತಾಗಿದೆ. 20 ವರ್ಷದ ಹಿಂದೆ ಕಳೆದು ಹೋಗಿದ್ದ ವಿಜಯ್ ಕುಮಾರ್ ಇವನೇನಾ ಎಂದು ನೋಡಲು ಜನ ಮನೆಗೆ ಬರುತ್ತಿದ್ದಾರೆ.

Advertisment

publive-image

20 ವರ್ಷದ ನಂತರ ಬಂದ ಮಗನನ್ನ ಕಂಡು ಕುಟುಂಬ ಖುಷಿಯಾಗಿದೆ. ಶಾಲೆಯನ್ನು ಹುಡುಕುತ್ತ ಹುಟ್ಟೂರಿಗೆ ಬಂದಿದ್ದ ಮಗ ಇದೀಗ ಹೆತ್ತವರ ಮಡಿಲು ಸೇರಿದ್ದಾನೆ. ಈ ಹಿಂದೆ ಕಲಿತ ಪಾಠಶಾಲೆ ಒಂದು ಮಾಡಿದೆ ಎಂದು ಊರಿನ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಅಹಿತಕರ ಸಂಗತಿಗಳ ಮಧ್ಯೆಯೂ ಒಂದೊಳ್ಳೆ ಸುದ್ದಿ.. 40 ದಿನ ಹಿಂದೂ ಬಾಣಂತಿಯ ಆರೈಕೆ ಮಾಡಿ ಕಳುಹಿಸಿದ ಮುಸ್ಲಿಂ ಕುಟುಂಬ

publive-image

ಆತ ಯಾಕೆ ಮನೆ ಬಿಟ್ಟು ಹೋದ ಅನ್ನೋದ್ರ ಬಗ್ಗೆ ಹೇಳ್ತಿಲ್ಲ. ಯಾಕೆ ಹೋಗಿದ್ದೆ ಎಂದು ನನಗೆ ಗೊತ್ತಿಲ್ಲ. ಮನೆ ನೆನಪೇ ಆಗಿಲ್ಲ. 12 ವರ್ಷಗಳ ಹಿಂದೆ ಹೋಗಬೇಕು ಅನ್ನೊಂಡೆ, ಆದರೆ ಮನಸು ಮಾಡಲಿಲ್ಲ. ಬೆಂಗಳೂರು, ಮೈಸೂರಲ್ಲಿ ಕೆಲಸ ಮಾಡುತ್ತಿದ್ದೆ. ಅಡುಗೆ ಕೆಲಸ ಮಾಡಿಕೊಂಡು ಇದ್ದೆ. ನಾನು ಹೋಗುವಾಗ ಮಡ್​​ ರಸ್ತೆ ಇತ್ತು. ಈಗ ನೋಡಿದ್ರೆ ಎಲ್ಲವೂ ಬದಲಾಗಿದೆ. ನನ್ನ ಊರು ನನಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾನೆ.

Advertisment

ಇದನ್ನೂ ಓದಿ:ಎಲ್ಲರ ಕಣ್ಣು ಹಾರ್ದಿಕ್ ಮೇಲೆ.. ಒಂದೇ ಕಲ್ಲಿನಲ್ಲಿ 5 ಹಕ್ಕಿ ಹೊಡೆಯಲು ಪಾಂಡ್ಯ ಪ್ಲಾನ್​​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment