/newsfirstlive-kannada/media/post_attachments/wp-content/uploads/2024/07/Pampanna.jpg)
ರಾಯಚೂರು: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್​ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಈ ದಾಳಿ ನಡೆಸಿದ ಬಳಿಕ ಪಂಪಣ್ಣ ಕುರಿತಾಗಿ ಒಂದಲ್ಲಾ ಒಂದು ಸಂಗತಿ ಹೊರಬರುತ್ತಿದೆ. ಅದರಂತೆಯೇ ಕನ್ನಡದ ಹೆಮ್ಮಯ ಕೋಟ್ಯಾಧಿಪತಿಯಲ್ಲಿ ಪಂಪಣ್ಣ ಭಾಗಿಯಾಗಿ 50 ಲಕ್ಷ ರೂಪಾಯಿ ಗೆದ್ದಿದ್ದರು ಎಂಬ ಸಂಗತಿಯು ಬೆಳಕಿಗೆ ಬಂದಿದೆ.
ಪಂಪಣ್ಣರವರು ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್​ ರಾಜ್​ಕುಮಾರ್​ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ವಿಜೇತರಾಗಿದ್ದರು. 2012 ರಲ್ಲಿ ಕನ್ನಡದ ಕೋಟ್ಯಾಧಿಪತಿ ಶೋ ನಲ್ಲಿ ಭಾಗಿಯಾಗಿದ್ದರು.
ಶಿಕ್ಷಕರಾಗಿದ್ದಲೇ ಕನ್ನಡ ಕೋಟ್ಯಾಧಿಪತಿ ಗೇಮ್ ಶೋ ನಲ್ಲಿ ಸ್ಪರ್ಧಿಸಿದ್ದರು. ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಗೆ ಪಂಪಣ್ಣ ಕ್ವಿಟ್ ಮಾಡಿ 50 ಲಕ್ಷ ಬಹುಮಾನ ಗೆದ್ದಿದ್ದರು.
ಇದನ್ನೂ ಓದಿ: ಶ್ರೀಮಾತಾ ಆಸ್ಪತ್ರೆಯ ಮಾಲೀಕ, ಡಾ ಸತೀಶ್ ಪೂಜಾರಿ ಹೃದಯಘಾತಕ್ಕೆ ಬಲಿ
ಸದ್ಯ ವಾಲ್ಮೀಕಿ ನಿಗಮ ಹಗರಣದಲ್ಲಿ 50 ಲಕ್ಷ ಪಡೆದ ಆರೋಪದಲ್ಲಿ ಪಂಪಣ್ಣ ಹೆಸರು ಕೇಳಿಬಂದಿದೆ. ಈ ಕುರಿತು ಅವರ ಮನೆ ಮೇಲೆ ಮನೆ ಮೇಲೆ ಇ.ಡಿ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us