newsfirstkannada.com

ಅದೊಂದು ಚಟಕ್ಕೆ ಬಿದ್ದಿದ್ದ.. ಹಾಸ್ಟೆಲ್​​ನಲ್ಲಿ ಸಾವಿಗೆ ಶರಣಾದ ಭವಿಷ್ಯದ ಇಂಜಿನಿಯರ್​​..

Share :

Published July 11, 2024 at 11:11am

Update July 11, 2024 at 2:34pm

  ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡ ವಿದ್ಯಾರ್ಥಿ

  ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಟೂಡೆಂಟ್

  ವಸತಿ ನಿಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಪೊಲೀಸ್ ಆಯುಕ್ತರು

ಹುಬ್ಬಳ್ಳಿ: ಆನ್​ಲೈನ್ ಗೇಮಿಂಗ್ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿಯಾದ ಘಟನೆ ಹುಬ್ಬಳ್ಳಿಯ ಶಿರಡಿ ನಗರದಲ್ಲಿ ನಡೆದಿದೆ. ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಮೃತ ವಿದ್ಯಾರ್ಥಿ. ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ.

ಇದನ್ನೂ ಓದಿ: ಶ್ರೀಮಾತಾ ಆಸ್ಪತ್ರೆಯ ಮಾಲೀಕ, ಡಾ ಸತೀಶ್ ಪೂಜಾರಿ ಹೃದಯಘಾತಕ್ಕೆ ಬಲಿ

ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಕೇಶ್ ನಿತ್ಯ ಆನ್​ಲೈನ್​ ಗೇಮ್ ಆಡುತ್ತಿದ್ದನು ಎಂದು ಹೇಳಲಾಗುತ್ತಿದೆ. ಹೀಗಾಗಿ ಆನ್ ಲೈನ್ ಗೇಮ್​ನಲ್ಲಿ ಹಣವನ್ನು ಕಳೆದುಕೊಂಡಿದ್ದನು ಎನ್ನಲಾಗುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: KRS Dam: ಕಾವೇರಿ ಜಲಧಾರೆಗೆ ತುಂಬುತ್ತಿದೆ ಅಣೆಕಟ್ಟು.. ಇಂದು ಕೆಆರ್​ಎಸ್​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಸಾವಿನ ಹಿನ್ನೆಲೆ ಪೊಲೀಸ್ ಆಯುಕ್ತ ಶಶಿಕುಮಾರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕೋಣೆಯ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: 10 ಲಕ್ಷ ಭಾರತದ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಶನಿ ದೇವರ ವಾಹನವನ್ನೇ ಹತ್ಯೆ ಮಾಡ್ತಿದ್ದಾರೆ ಇಲ್ಲಿ!

ಆತ್ಮಹತ್ಯೆ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ಮುಟ್ಟುವುದರೊಳಗಾಗಿ ಆತ ಮೃತಪಟ್ಟಿದ್ದನು. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದೊಂದು ಚಟಕ್ಕೆ ಬಿದ್ದಿದ್ದ.. ಹಾಸ್ಟೆಲ್​​ನಲ್ಲಿ ಸಾವಿಗೆ ಶರಣಾದ ಭವಿಷ್ಯದ ಇಂಜಿನಿಯರ್​​..

https://newsfirstlive.com/wp-content/uploads/2024/07/Shree-Shil.jpg

Load More