newsfirstkannada.com

×

ರಿವಾಲ್ವರ್​ ಹಿಡಿದು ಆಸ್ಪತ್ರೆಗೆ ಆಗಮಿಸಿ ಶಾಸಕ! ಜನ ನಾಯಕನ ಅಂಧಾ ದರ್ಬಾರ್​ ವಿಡಿಯೋ

Share :

Published October 5, 2023 at 8:51am

    ಜೆಡಿಯು ಶಾಸಕ ಗೋಪಾಲ್ ಮಂಡಲ್ ವಿಡಿಯೋ ವೈರಲ್

    ಅನಾರೋಗ್ಯಕ್ಕೀಡಾಗಿದ್ದ ಮೊಮ್ಮಗಳನ್ನ ನೋಡಲು ಬಂದ ಶಾಸಕ

    ರಿವಾಲ್ವರ್ ಹಿಡಿದು ಗ್ಯಾಂಗ್​ಸ್ಟರ್​ ಹಾಗೆ ಪೋಸು ಕೊಟ್ಟ ಗೋಪಾಲ್ ಮಂಡಲ್

ಶಾಸಕರೊಬ್ಬರು ರಿವಾಲ್ವರ್​ ಹಿಡಿದು ಆಸ್ಪತ್ರೆಗೆ ಆಗಮಿಸಿ ಜನರಲ್ಲಿ ಆತಂಕ ಮೂಡಿಸಿರೋ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಗೋಪಾಲಪುರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅನಾರೋಗ್ಯಕ್ಕೀಡಾಗಿದ್ದ ಮೊಮ್ಮಗಳನ್ನ ಆಸ್ಪತ್ರೆಗೆ ಕರೆತಂದಿದ್ರು. ಈ ವೇಳೆ ಶಾಸಕರು ಕೈಯಲ್ಲಿ ರಿವಾಲ್ವರ್ ಹಿಡಿದು ಗ್ಯಾಂಗ್​ಸ್ಟರ್​ ಹಾಗೆ ಆಸ್ಪತ್ರೆಯಲ್ಲಿ ಪೋಸ್​ ಕೊಟ್ಟಿದ್ರು.

ಶಾಸಕರ ಈ ನಡೆಯನ್ನ ನೋಡಿ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಯೊಬ್ರು ಈ ರೀತಿ ನಡೆದುಕೊಂಡಿರೋದು ಬಿಹಾರ ಸಿಎಂ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿವಾಲ್ವರ್​ ಹಿಡಿದು ಆಸ್ಪತ್ರೆಗೆ ಆಗಮಿಸಿ ಶಾಸಕ! ಜನ ನಾಯಕನ ಅಂಧಾ ದರ್ಬಾರ್​ ವಿಡಿಯೋ

https://newsfirstlive.com/wp-content/uploads/2023/10/Gopal-Mandal.jpg

Load More