newsfirstkannada.com

×

KGF ಕಥೆಯನ್ನೇ ಮೀರಿಸುತ್ತೆ ಶಾಸಕ ಮುನಿರತ್ನ ಬದುಕು; ಬೀದಿಯಲ್ಲಿ ಇಡ್ಲಿ ಮಾರುತ್ತಿದ್ದ ಇವ್ರು ಬೆಳೆದಿದ್ದೇ ರೋಚಕ!

Share :

Published September 16, 2024 at 6:23am

Update September 16, 2024 at 6:39am

    ಚಂಗಮ್ಮನ ಮಗ ಮುನಿರತ್ನ ಫುಟ್​​ಬಾತ್​​ನಲ್ಲಿ ಇಡ್ಲಿ ಮಾರುತ್ತಿದ್ದ!

    ಅವತ್ತು ಕಾಂಟ್ರ್ಯಾಕ್ಟರ್​​ ಮುನಿರತ್ನಗೆ ಸಾಥ್​ ಕೊಟ್ಟಿದ್ರು ಸ್ಟಾರ್​​ ನಟ!

    ಮುನಿರತ್ನರ ಕೋದಂಡರಾಮಪುರದ ಸೀನಿಯರ್​ ಬಿ.ಕೆ ಹರಿಪ್ರಸಾದ್!

ಮಾಜಿ ಮಂತ್ರಿ, ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದಾರೆ. ಬಹುದೊಡ್ಡ ಎರಡು ಆರೋಪ ಹೊತ್ತು ಪೊಲೀಸರ ಅತಿಥಿ ಆಗಿದ್ದು, ಈ ಮಧ್ಯೆ ಮುನಿರತ್ನ ಬೆಳೆದು ಬಂದ ಹಾದಿಯ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಸಿನಿಮಾ ಹಿನ್ನೆಲೆಯ ಮುನಿರತ್ನ ಬದುಕು ಸಹ ಪಕ್ಕಾ ಫಿಲ್ಮ್​​ ರೀತಿಯೇ ಇದೆ. ಅಷ್ಟಕ್ಕೂ ಯಾರು ಈ ಮುನಿರತ್ನ? ಇವರಿಗೂ ಗುತ್ತಿಗೆದಾರ ಚಲುವರಾಜುಗೂ ಸಂಬಂಧ ಏನು? ಗಂಭೀರ ಆರೋಪ ಮಾಡ್ತಿರೋ ವೇಲು ನಾಯ್ಕರ್​​ ನಂಟೇನು? ಈ ಎಲ್ಲಾ ಪ್ರಶ್ನೆಗಳ ಜಾಡು ಹಿಡಿದು ಹೊರಟರೇ ಕಾಣಿಸೋದು ಅಕ್ಷರಶಃ ಬದುಕಿನಲ್ಲಿ ನಡೆದ ಕುರುಕ್ಷೇತ್ರ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪ.. ಓಡೋಡಿ ಬಂದು ವೇದಿಕೆ ಏರಿದ ಯುವಕ

ತಾಯಿಗಿಂತ ದೊಡ್ಡ ಯೋಧ ಪ್ರಪಂಚದಲ್ಲಿ ಯಾರೂ ಇಲ್ಲ. ಕೆಜಿಎಫ್​ ಸಿನಿಮಾದ ಈ ಡೈಲಾಗ್​ ಮಾಮೂಲಿ ಡೈಲಾಗ್​ ಅಲ್ಲ. ಝೀರೋದಿಂದ ಹೀರೋ ಆದವರ ಕಥೆಯ ಮುನ್ನುಡಿ. ಸದ್ಯ, ಪೊಲೀಸರ ವಶದಲ್ಲಿರೋ ಮಾಜಿ ಮಂತ್ರಿ ಮುನಿರತ್ನ ಬದುಕಿಗೂ ಕೆಜಿಎಫ್​ ಸಿನಿಮಾದ ಆ ಒಂದು ಸೀನ್​​ಗೂ ಒಂದು ರೀತಿಯ ಸಾಮ್ಯತೆ ಇದೆ. ಲಂಚದ ಬೇಡಿಕೆ, ಜಾತಿ ನಿಂದನೆ ಆರೋಪ ಹೊತ್ತು ಅರೆಸ್ಟ್​ ಆಗಿರೋ ಮುನಿರತ್ನ 2 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪಾರ್ಟ್​​ ಟೈಮ್ ಪ್ರೊಡ್ಯೂಸರ್​, ಫುಲ್ ಟೈಮ್ ಪೊಲಿಟಿಶಿಯನ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಅಸಲಿಗೆ ಯಾರು ಈ ಮುನಿರತ್ನ ಅಂತಾ ಫ್ಲಾಶ್​​ಬ್ಯಾಕ್​​ಗೆ ಹೋದ್ರೆ ಕಾಣಿಸೊ ಸೀನ್ ಇದೇ. ಕೆಜಿಎಫ್​​ ಸಿನಿಮಾದ ಬನ್ ಸೀನ್.

70ರ ದಶಕದ ಆರಂಭದಲ್ಲೇ ಬೆಂಗಳೂರಿನ ಕೋದಂಡರಾಮಪುರದ ಬೀದಿಗಳಲ್ಲಿ ಅಮ್ಮನೊಂದಿಗೆ ಇಡ್ಲಿ ಮಾರುತ್ತಿದ್ದ ಚಂಗಮ್ಮ ಎಂಬುವವರ ಮಗ ಈ ಮುನಿರತ್ನ. 14ನೇ ವಯಸ್ಸಿಗೇ ಅಪ್ಪನನ್ನ ಕಳೆದುಕೊಂಡ ಮುನಿರತ್ನ ಬಾಲ್ಯದಲ್ಲಿ ಒಂದೊಂದು ರೂಪಾಯಿಗೂ ಬೆವರು ಸುರಿಸಿ ದುಡಿದಿದ್ದಾರೆ. ಸಣ್ಣ ಪ್ರಮಾಣದ ಗುತ್ತಿಗೆದಾರರಾಗಿದ್ದ ಸುಬ್ರಹ್ಮಣ್ಯ ನಾಯ್ಡು ಸಾಕಷ್ಟು ನಷ್ಟವನ್ನು ಅನುಭವಿಸಿದ್ರಂತೆ. ಅನಾರೋಗ್ಯದಿಂದ ಕಣ್ಮುಚ್ಚಿದ್ರಂತೆ. ಈ ಟೈಮಲ್ಲಿ ಮಗನ ಭವಿಷ್ಯವನ್ನ ಗಟ್ಟಿಗೊಳಿಸೋದಕ್ಕೆ ಚಂಗಮ್ಮ ಅನ್ನೋ ಈ ತಾಯಿ ಫುಟ್​​ಪಾತ್​​ನಲ್ಲಿ ಇಡ್ಲಿ ಮಾರುತ್ತಿದ್ದರು. ಆರೇಳನೇ ಕ್ಲಾಸ್​​ನಲ್ಲಿ ಓದುತ್ತಿದ್ದ ಮುನಿರತ್ನ ತಾಯಿಗೆ ಸಹಾಯ ಮಾಡ್ತಿದ್ರು. ಹೀಗೆ ತನ್ನ ಬಾಲ್ಯ ಆರಂಭಿಸಿದ ಮುನಿರತ್ನ ಇವತ್ತು ಗೂಟದ ಕಾರಿನಲ್ಲಿ ಓಡಾಡುತ್ತಿರೋ ರಸ್ತೆಗಳಿಗೆ ಒಂದು ಕಾಲಕ್ಕೆ ಬಣ್ಣ ಬಳಿದಿದ್ದಾರೆ. ಅಪ್ಪನ ಎಲ್ಲಿ ಕಳೆದುಕೊಂಡ್ರೋ ಅಲ್ಲೇ ಗಳಿಸಬೇಕು ಅಂತ ಮೊದಲಿಗೆ ಕಂಟ್ರ್ಯಾಕ್ಟರ್​ ಆದ್ರು. ಸಣ್ಣ ಪುಟ್ಟ ಕಾಂಟ್ರ್ಯಾಕ್ಟ್​ ಹಿಡಿದು ಕೆಲಸ ಮಾಡಿಸುತ್ತಿದ್ದರು.

ಇದನ್ನೂ ಓದಿ: ₹20 ಲಕ್ಷ ಕೊಟ್ರೂ ಇನ್ನೂ ಹಣಕ್ಕೆ ಬೇಡಿಕೆ ಇಟ್ಟಿದ್ರಾ ಮುನಿರತ್ನ..? ಸೇಡಿನ ರಾಜಕಾರಣ ಎಂದಿದ್ದೇಕೆ BJP ಶಾಸಕ?

ಮುನಿರತ್ನ ಇವತ್ತು ಗಂಭೀರ ಆರೋಪದ ಮೇಲೆ ಬಂಧನವಾಗಿರಬಹುದು. ಆದರೇ, ಹಸಿವು ಮತ್ತು ಬಡತನ ಅನ್ನೋ ಎರಡು ಯುನಿವರ್ಸಿಟಿಯಲ್ಲಿ ಸಾಕಷ್ಟು ಕಲಿತಿದ್ದಾರೆ ಅಂದರೆ ತಪ್ಪಾಗೋದಿಲ್ಲ. ಮುನಿ ಕಂಟ್ರ್ಯಾಕ್ಟರ್​ ಆಗಿ ವೃತ್ತಿ ಆರಂಭಿಸಿದಾಗ ಅವತ್ತಿನ ಮಲ್ಲೇಶ್ವರಂ ಶಾಸಕರೂ ಆಗಿದ್ದ ಸ್ಟಾರ್​ ನಟ ಸಾಥ್​ ನೀಡಿದ್ರಂತೆ. ಹೌದು, ಅನಂತ್​​ ನಾಗ್ ಅವತ್ತು ಮಲ್ಲೇಶ್ವರಂ ಶಾಸಕರಾಗಿದ್ರು. ಅಷ್ಟೇ ಅಲ್ಲ, ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿದ್ರು. ಹೀಗೆ, ಕಂಟ್ರ್ಯಾಕ್ಟರ್​ ವೃತ್ತಿಯನ್ನು ಆರಂಭಿಸಿದ್ದ ಮುನಿರತ್ನಗೆ ಬಹುದೊಡ್ಡ ಬಲವಾಗಿದ್ದವರು ತಳ ಸಮುದಾಯದ ಜನ. ಆದರೆ ಇವತ್ತು ಜಾತಿ ನಿಂದನೆಯ ಆರೋಪದಲ್ಲೇ ಮುನಿರತ್ನ ಜೈಲು ಸೇರಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 4 ಸಲ ಸತತವಾಗಿ ಗೆಲ್ಲೋದಕ್ಕೂ ಮುನಿರತ್ನಗೆ ಬಹುಮುಖ್ಯ ಬಲವಾಗಿದ್ದವರು ತಮಿಳರು ಹಾಗೂ ದಲಿತರು. ಇಂಥಾ ಮುನಿರತ್ನ ನಾಯ್ಡು ಕಾರ್ಪೋರೇಟರ್​ ಆಗಲು ನೆರವಾದವರು ಬಾಲ್ಯದ ಸೀನಿಯರ್​, ಕಾಂಗ್ರೆಸ್​​​ನ ಹಿರಿಯ ನಾಯಕ.

ಇವತ್ತು ಜಾತಿ ನಿಂದನೆಯ ಆರೋಪ ಹೊತ್ತ ಮುನಿರತ್ನರವರ ರಾಜಕೀಯ ಆರಂಭಕ್ಕೆ ಮುನ್ನುಡಿ ಬರೆದದ್ದು ಅತ್ಯಂತ ಹಿಂದುಳಿದ ಸಮಾಜಕ್ಕೆ ಸೇರಿದ ಕೈ ನಾಯಕ. ಕೋದಂಡರಾಮಪುರದಲ್ಲಿ ಸೀನಿಯರ್​ ಆಗಿದ್ದ ಬಿ.ಕೆ ಹರಿಪ್ರಸಾದ್. ದೆಹಲಿ ಕಾಂಗ್ರೆಸ್​​ಗೆ ಅತ್ಯಂತ ಸನಿಹದಲ್ಲೇ ಇದ್ದ ಬಿ.ಕೆ ಹರಿಪ್ರಸಾದ್ ತಮ್ಮೊಂದಿಗೆ ಬೆಳೆದಿದ್ದ ಹುಡುಗ ಕಾರ್ಪೋರೇಟರ್​ ಆಗ್ಬೇಕು ಅನ್ನೋದು ಗೊತ್ತಾದ್ಮೇಲೆ ಮುಂದೆ ನಿಂತು ಟಿಕೆಟ್ ಕೊಡಿಸಿದ್ರು. 2010ರಲ್ಲಿ ಬಿಬಿಎಂಪಿಯ 37ನೇ ವಾರ್ಡ್​ ಯಶವಂತಪುರದಿಂದ ಕಾರ್ಪೋರೇಟರ್​ ಆಗಿ ಆಯ್ಕೆಯಾದರು ಮುನಿರತ್ನ. ಯಾವ ಕಾರ್ಪೋರೇಷನ್​​ ಮುಂದೆ ಕಾಂಟ್ರ್ಯಾಕ್ಟ್​​ಗಾಗಿ ಕ್ಯೂ ನಿಲ್ಲುತ್ತಿದ್ದರೋ, ಅದೇ ಕಾರ್ಪೋರೇಷನ್​​ಗೆ ಸದಸ್ಯರಾಗಿ ಆಯ್ಕೆ ಆಗಿ ರಾಜಕೀಯದ ಪಯಣ ಅರಂಭವಾಯ್ತು. ಕಾಂಟ್ರ್ಯಾಕ್ಟರ್​ ಆಗಿದ್ದ ಕಾಲದಲ್ಲೇ ಸಿನಿಮಾ ಲೋಕಕ್ಕೂ ಎಂಟ್ರಿ ಕೊಟ್ಟು ಫಿಲ್ಮ್ ಪ್ರೊಡ್ಯೂಸ್​ ಮಾಡಿದ್ರು.

ಆರಂಭದಲ್ಲೇ ಆಂಟಿ ಪ್ರೀತ್ಸೆ ಸಿನಿಮಾ… ಬಾಕ್ಸ್​​ ಆಫೀಸ್​​ ಚಿಂದಿ!

ಮುನಿರತ್ನ ನಾಯ್ಡು ವಿರುದ್ಧ ಇವತ್ತು ಮಹಿಳಾ ನಿಂದನೆಯ ಆರೋಪ ಕೇಳಿ ಬಂದಿದೆ. ಹಾಗಾಗಿಯೇ ನ್ಯಾಯಾಂಗ ಬಂಧನದಲ್ಲಿದ್ದಾರೆ ಮಾಜಿ ಮಂತ್ರಿ. ಆದರೇ, 2001ರಲ್ಲಿ ಮೊಟ್ಟ ಮೊದಲ ಸಲ ಕಾಂಟ್ರ್ಯಾಕ್ಟರ್​​ ಮುನಿರತ್ನ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ರು. ಅನಂತ್​ನಾಗ್, ಖುಷ್ಬು ಹಾಗೂ ರಾಮ್​​ಕುಮಾರ್​​ ತಾರಾಗಣದಲ್ಲಿ ಆಂಟಿ ಪ್ರೀತ್ಸೆ ಅನ್ನೋ ಸಿನಿಮಾ ಮಾಡಿದ್ರು. 16 ಮೇ, 2001ರಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸ್​​ ಆಫೀಸ್​​ನಲ್ಲಿ ಸದ್ದು ಮಾಡಿತ್ತು. ಇದೇ ಸಿನಿಮಾವನ್ನ ತಮಿಳಿನಲ್ಲಿ ಸೂಪರ್​ ಆಂಟಿ ಅಂತ ಡಬ್ ಮಾಡಿದ್ರು. ಅಲ್ಲೂ ಮುನಿರತ್ನಗೆ ಬಹುದೊಡ್ಡ ಯಶಸ್ಸು ಸಿಕ್ಕಿತ್ತು. ಇಲ್ಲಿಂದೀಚಗೆ ಮುನಿರತ್ನ ಪಾರ್ಟ್​​ ಟೈಮ್ ಪ್ರೊಡ್ಯೂಸರ್​ ಆಗಿಯೂ ಯಶಸ್ಸು ಕಾಣಲಾರಂಭಿಸಿದ್ರು. ಇದೇ ಜೋಶ್​​ನಲ್ಲೇ 2003ರಲ್ಲಿ ಉಪೇಂದ್ರರನ್ನು ಹಾಕಿಕೊಂಡು ಸಾಧು ಕೋಕಿಲಾ ನಿರ್ದೇಶನದಲ್ಲಿ ರಕ್ತ ಕಣ್ಣೀರು ಸಿನಿಮಾ ಮಾಡಿದ್ರು. ಈ ಸಿನಿಮಾ ಎಂಥಾ ದಾಖಲೆ ಬರೀತು ಅನ್ನೋದು ಇದೀಗ ಚರಿತ್ರೆ.

ಇದನ್ನೂ ಓದಿ:ಕೋಟಿ ಕೋಟಿ ದುಡ್ಡಿನ ಒಡೆಯ MLA ಮುನಿರತ್ನ.. ಕೇವಲ 20 ಲಕ್ಷ ರೂಪಾಯಿ ಲಂಚಕ್ಕೆ ಕೈ ಚಾಚಿದ್ರಾ?

ರಕ್ತ ಕಣ್ಣೀರು ಸಿನಿಮಾ ಬಳಿಕ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿದ್ದು ಮುನಿರತ್ನರ ಅತ್ಯಾಪ್ತ ದರ್ಶನ್​​ ಉಪೇಂದ್ರ ನಟನೆಯ ಅನಾಥರು ಸಿನಿಮಾ. ಕಾಕತಾಳೀಯ ಎಂಬಂತೆ ಇವತ್ತು ದರ್ಶನ್​ ಹಾಗೂ ಮುನಿರತ್ನ ಇಬ್ಬರೂ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ.ಇದಾದ ಬಳಿಕವೇ ಮುನಿರತ್ನ ಪ್ರೊಡ್ಯೂಸರ್​ ಆಗಿ ಕಠಾರಿವೀರ ಸುರಸುಂದರಾಗಿ ಸಿನಿಮಾ ಮಾಡಿದ್ದು. ಇಲ್ಲೂ ಕೂಡ ಮುನಿರತ್ನ ಸೋಲಲೇ ಇಲ್ಲ. ಈ ಸಿನಿಮಾದಲ್ಲಿ ನಟ ಅಂಬರೀಶ್​​ ಅಭಿನಯಿಸಿದ್ರು. ಅಂಬರೀಶ್​ ಹಾಗೂ ಹರಿ ಪ್ರಸಾದ್​​ ಬೆಂಬಲದಿಂದ ಮುನಿರತ್ನಗೆ ಬಹುದೊಡ್ಡ ಅವಕಾಶವೂ ಸಿಕ್ಕಿತ್ತು. ಅದುವೇ ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್.

ಯಶವಂತಪುರ ಕಾರ್ಪೋರೇಟರ್,​ ಶಾಸಕರಾಗಿಯೂ ಆಯ್ಕೆಯಾದ್ರು!

ಒಂದು ಕಡೆ ಸಿನಿಮಾ ಪ್ರೊಡ್ಯೂಸರ್​. ಮತ್ತೊಂದು ಕಡೆ ಕಾರ್ಪೋರೇಟರ್​. ಎರಡೂ ಹುದ್ದೆಗಳನ್ನು ನಿಭಾಯಿಸುತ್ತಿದ್ದ ಮುನಿರತ್ನಗೆ ಭಾಗ್ಯದ ಬಾಗಿಲು ತೆರೆದುಕೊಂಡಿತ್ತು. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ, 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. ಇದೇ ಕ್ಷೇತ್ರದ ವ್ಯಾಪ್ತಿಯ ಯಶವಂತಪುರ ವಾರ್ಡ್​ ಕಾರ್ಪೋರೇಟರ್​ ಆಗಿದ್ದ ಮುನಿರತ್ನಗೆ ಕಾಂಗ್ರೆಸ್​​ ಅವತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. 2013ರಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಮುನಿರತ್ನ ಶಾಸಕರಾಗಿಯೂ ಆಯ್ಕೆಯಾದ್ರು. 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ ವಿರುದ್ಧ ಸ್ಪರ್ದಿಸಿದ್ದ ಜೆಡಿಎಸ್‌ನ ತಿಮ್ಮನಂಜಯ್ಯ 52,251 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಆಗ ಹಾಲಿ ಶಾಸಕರಾಗಿದ್ದ ಬಿಜೆಪಿಯ ಎಂ ಶ್ರೀನಿವಾಸ್ 50,726 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಒಂದು ಕಾಲಕ್ಕೆ ವಿಧಾನಸೌಧದ ಗೋಡೆಗಳಿಗೆ ಬಣ್ಣ ಬಳಿದಿದ್ದ ಬಡ ಚಂಗಮ್ಮನ ಮಗ ಶಾಸಕನಾಗಿ ಅಸೆಂಬ್ಲಿಗೆ ಕಾಲಿಟ್ಟಿದ್ದ. ಬೆಳೆಯುತ್ತಿದ್ದ ಮುನಿರತ್ನ ಜೊತೆಗೆ ವಿವಾದಗಳು ಬೆಳೆಯುತ್ತಾ ಹೋದ್ವು.

ಸಿದ್ದರಾಮಯ್ಯ ಅನ್ನೋ ರಾಜಕೀಯ ಗುರುವಿಗೆ ಶಿಷ್ಯರಾಗಿದ್ದ ಮುನಿರತ್ನ!

ಇದನ್ನೂ ಓದಿ: ಬಿಜೆಪಿ MLA ಮುನಿರತ್ನ ಅರೆಸ್ಟ್.. 2 ಕೇಸ್‌ನಲ್ಲಿ ಪೊಲೀಸರು ಹಾಕಿರೋ ಸೆಕ್ಷನ್​ಗಳು ಯಾವುವು?

ಅಹಿಂದ ನಾಯಕ ಸಿದ್ದರಾಮಯ್ಯರ ಆಪ್ತವಲಯಕ್ಕೆ ಸೇರಿಕೊಂಡಿದ್ದ ಮುನಿರತ್ನ ಈ ಕ್ಷಣಕ್ಕೂ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ಅಂತಲೇ ಹೇಳುತ್ತಾರೆ. ಒಂದು ಕಾಲಕ್ಕೆ ಸಿದ್ದು ಆಪ್ತ ಬಳಗ ಎಸ್​ಬಿಎಂ ಅನ್ನೋ ಕೋಡ್​ ವರ್ಡ್​ ಮೂಲಕ ಮೂವರು ನಾಯಕರನ್ನ ಕರೀತಿತ್ತು. ಆ ಪೈಕಿ ಸೋಮಶೇಖರ್​, ಭೈರತಿ ಬಸವರಾಜು ಜೊತೆ ಮುನಿರತ್ನ ಕೂಡ ಇದ್ರು. ಅಷ್ಟರಮಟ್ಟಿಗೆ ಸಿದ್ದರಾಮಯ್ಯರೊಂದಿಗೆ ಇದ್ದ ಮುನಿರತ್ನ 2018ರಲ್ಲಿ ಕಾಂಗ್ರೆಸ್​​ನಿಂದ ಶಾಸಕರಾಗಿ ಆಯ್ಕೆ ಆಗಿದ್ರು.

ಜೆಡಿಎಸ್​​ ಕಾಂಗ್ರೆಸ್​ ಮೈತ್ರಿ ಸರ್ಕಾರವನ್ನ ಕೆಡವಿದ ಕ್ಷಿಪ್ರಕ್ರಾಂತಿ 17 ನಾಯಕರ ಪೈಕಿ ಮುನಿರತ್ನ ಕೂಡ ಇದ್ರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಉಪ ಚುನಾವಣೆ ಎದುರಿಸಬೇಕಾಯ್ತು. ಮುನಿರತ್ನ ರಾಜಕೀಯ ಮೇಲಾಟಕ್ಕೆ ಸಿಲುಕಿ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿ ಕ್ಷೇತ್ರ ಉಪಚುನಾವಣೆ ಕಾಣುವಂತೆ ಮಾಡಿದ್ರು. ಹೈಕೋರ್ಟ್‌ನಲ್ಲಿ ಈ ಪ್ರಕರಣಕ್ಕೆ ತಡೆಯಾಜ್ಞೆ ಇದ್ದಿದ್ದರಿಂದ ಈ ಕ್ಷೇತ್ರದ ಉಪಚುನಾವಣೆ 2020ರ ನವೆಂಬರ್‌ನಲ್ಲಿ ನಡೆಯಿತು. ಈ ಚುನಾವಣೆಯಲ್ಲಿ ದಕ್ಷ ಅಧಿಕಾರಿಯಾಗಿದ್ದ ದಿವಂಗತ ಡಿ ಕೆ ರವಿ, ಪತ್ನಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇವರೆದುರು ಸ್ಪರ್ಧಿಸಿದ್ದರು. ಈ ಅದೃಷ್ಟ ಪರೀಕ್ಷೆಯಲ್ಲಿ 58 ಸಾವಿರ ಮತಗಳ ಅಂತರದ ಜಯಕಂಡು ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ ಬಳಿಕ ಮುನಿರತ್ನ ಸಚಿವರಾದ್ರು. ಹೀಗೆ ಹಂತ ಹಂತವಾಗಿ ಮುನಿರತ್ನ ನಾಯ್ಡು ಅಪ್ಪ ಸುಬ್ರಹ್ಮಣ್ಯ ನಾಯ್ಡು ಆಸೆಯನ್ನೂ ಈಡೇರಿಸಿ ಕಾರ್ಪೋರೇಟರ್​ ಅಷ್ಟೇ ಅಗ್ಲಿಲ್ಲ. ಶಾಸಕರೂ ಸಚಿವರೂ ಆದ್ರು. ಸದ್ಯ, ಬಹುದೊಡ್ಡ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಚಲುವರಾಜು, ನಾಯ್ಕರ್​ ಬಗ್ಗೆ ಮುನಿ ಹೇಳಿದ್ದೇನು? ಷಡ್ಯಂತ್ರವೇ?

ಪೊಲೀಸ್​ ವಶದಲ್ಲಿರೋ ಮುನಿರತ್ನ ಬಂಧನಕ್ಕೂ ಮುನ್ನವೇ ವಿಡಿಯೋ ಮೂಲಕ ಒಂದಷ್ಟು ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಅವರು ಆಡಿಯೋ ತೆಗೆದುಕೊಂಡು ಈಗಲೇ ಸ್ಪೀಕರ್ ಕಚೇರಿಗೆ ಚಲುವರಾಜು ಬರಲಿ. ಎರಡು ಸಮುದಾಯ ಸೇರಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಇದೇ ಚಲುವರಾಜು ನನ್ನನ್ನು ಶ್ಲಾಘಿಸಿದ್ದರು. 7-8 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು, ಈಗ ನಾನು ಹಣ ಕೇಳ್ತೀನಾ? ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನನ್ನ ಬಳಿ ಬಂದು ಯಾರೋ ಹಲ್ಲೆ ಮಾಡಿದ್ದರು ಅಂದಿದ್ದರು.

ನಾನು ಎಲ್ಲೂ ನಾಪತ್ತೆಯಾಗಿಲ್ಲ. ನನ್ನ ಸ್ನೇಹಿತರ ಮೂಲಕ ಭೇಟಿ ಮಾಡಲು ಚಲುವರಾಜು ಯತ್ನಿಸಿದ್ದರು ಅಂತ ಹೇಳುತ್ತಿದ್ದಾರೆ. ನಾನು ಕಾನೂನಿನ ಮೊರೆ ಹೋಗುತ್ತೇನೆ. ನಾನು ಯಾವುದೇ ರೀತಿ ಭ್ರಷ್ಟಾಚಾರ ನಡೆಸಿಲ್ಲ. ಕಾಂಗ್ರೆಸ್ ನಲ್ಲಿದ್ದಾಗ ಅವರಿಗೆ ನಾನು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದೆ. ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ಈಗ ನಾನು ಕೆಟ್ಟವನಾಗಿಬಿಟ್ಟಿದ್ದೇನೆಂದು ಅಂತಲೂ ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ಮುನಿರತ್ನ ಯಾರು ಅನ್ನೋ ವಿಚಾರದಷ್ಟೇ ಬಹುಮುಖ್ಯ ಸಂಗತಿ ಚಲುವರಾಜು ಹಾಗೂ ವೇಲು ನಾಯ್ಕರ್​ ಹಿನ್ನೆಲೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KGF ಕಥೆಯನ್ನೇ ಮೀರಿಸುತ್ತೆ ಶಾಸಕ ಮುನಿರತ್ನ ಬದುಕು; ಬೀದಿಯಲ್ಲಿ ಇಡ್ಲಿ ಮಾರುತ್ತಿದ್ದ ಇವ್ರು ಬೆಳೆದಿದ್ದೇ ರೋಚಕ!

https://newsfirstlive.com/wp-content/uploads/2024/09/MUNIRATHNA.jpg

Load More