Advertisment

ಜೀವಬೆದರಿಕೆ, ಜಾತಿನಿಂದನೆ? 36 ಲಕ್ಷ ಹಣಕ್ಕೆ ಬೇಡಿಕೆ? ಮುನಿರತ್ನಗೆ ಮುಕ್ತಿ ಸಿಗೋದು ಕಷ್ಟವೇ?

author-image
AS Harshith
Updated On
ಮುನಿರತ್ನಗೆ ಎದೆನೋವು, ಆಸ್ಪತ್ರೆಯಿಂದ ಆಸ್ಪತ್ರೆಗೆ ಶಿಫ್ಟ್; ಬಂಧನದ ಬಳಿಕ ಕುಗ್ಗಿದ ಬಿಜೆಪಿ ಶಾಸಕ
Advertisment
  • 36 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರಾ ಬಿಜೆಪಿ ಶಾಸಕ ಮುನಿರತ್ನ?
  • ಇಂದು ಕೋರ್ಟ್​​ಗೆ ಹಾಜರುಪಡಿಸಲಿರುವ ಪೊಲೀಸರು
  • ಕೋಲಾರ ಮಾರ್ಗವಾಗಿ ಆಂಧ್ರಕ್ಕೆ ತೆರಳುತ್ತಿದ್ದ ವೇಳೆ ಅರೆಸ್ಟ್​​

ಬಿಜೆಪಿಯ ಪ್ರಭಾವಿ ಶಾಸಕ ಮುನಿರತ್ನ ಜಾತಿನಿಂದನೆ, ಜೀವಬೆದರಿಕೆ ಆರೋಪದಲ್ಲಿ ಲಾಕ್ ಆಗಿದ್ದಾರೆ. ವೈಯಾಲಿಕಾವಲ್ ಠಾಣೆ ಪೊಲೀಸರಿಂದ ಮುನಿರತ್ನ ಬಂಧನ ಆಗಿದ್ದು, ಮೆಡಿಕಲ್ ಚೆಕಪ್ ಮುಗಿಸಿ ಅಶೋಕ್ ನಗರ ಠಾಣೆಯಲ್ಲಿ ಇರಿಸಲಾಗಿದೆ.

Advertisment

ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಲಿದ್ದು ಮುನಿರತ್ನಗೆ ಸಂಕಷ್ಟದ ಉರುಳು ಸುತ್ತಿಕೊಂಡಿದೆ. ಬಿಜೆಪಿಗೂ, ಗುತ್ತಿಗೆದಾರರಿಗೂ ಅದ್ಯಾಕೋ ಎಣ್ಣೆ-ಸೀಗೆಕಾಯಿ ಸಂಬಂಧ. ಅಂದು ಗುತ್ತಿಗೆದಾರರ ಪರ್ಸೆಂಟೇಜ್ ಕದನ ಪಕ್ಷಕ್ಕೆ ಮೆತ್ತಿದ ಕಳಂಕ, ಈಗಲೂ ಹಾಗೇ ಇದೆ. ಈಗ ಬೆಂಗಳೂರಿನ ಆರ್​​ಆರ್​​ ನಗರ ಶಾಸಕ ಮುನಿರತ್ನಗೆ ಅದೇ ‘ಮಾಮೂಲಿ’ ಆರೋಪ ಅಂಟಿದೆ. ಲಂಚಕ್ಕೆ ಬೇಡಿಕೆ, ಅಶ್ಲೀಲ ಭಾಷೆ ಬಳಕೆ. ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪ ಹೆಗಲೇರಿದ್ದು ಸಂಕಷ್ಟಕ್ಕೆ ದೂಡಿದೆ.

publive-image

ಜೀವಬೆದರಿಕೆ, ಜಾತಿನಿಂದನೆ ಬಲೆಯೊಳಗೆ ಮುನಿರತ್ನ ಬಂಧಿ!

ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಕೊಲೆ ಬೆದರಿಕೆ, ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ ಆರೋಪದಡಿ ಮುನಿರತ್ನ ಬಂಧನ ಆಗಿದೆ. ಕೋಲಾರ ಮಾರ್ಗವಾಗಿ ಆಂಧ್ರಕ್ಕೆ ತೆರಳುತ್ತಿದ್ದ ವೇಳೆ ಮುಳಬಾಗಿಲು ಬಳಿ ಬಂಧಿಸಿ ಅಶೋಕ ನಗರ ಠಾಣೆಗೆ ಕರೆತಲಾಗಿದೆ.

ಮುನಿರತ್ನಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್!

ನಿನ್ನೆ ಸಂಜೆ ಶಾಸಕ ಮುನಿರತ್ನ ಬಂಧಿಸಿ ಬೆಂಗಳೂರಿಗೆ ಕರೆತಂದ ವೈಯಾಲಿಕಾವಲ್ ಠಾಣೆ ಪೊಲೀಸರು ಎರಡು ಎಫ್​ಐಆರ್ ದಾಖಲಿಸಿದ್ದಾರೆ. ಮೊದಲಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿ ಬಳಿಕ ಅವರನ್ನ ಮೆಯೋ ಹಾಲ್​ ಬಳಿಯ ಅಶೋಕ ನಗರ ಠಾಣೆಯಲ್ಲಿ ಇರಿಸಿದ್ದಾರೆ. ಪೊಲೀಸರು ಇಂದು ಶಾಸಕ ಮುನಿರತ್ನರನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

Advertisment

publive-image

ಇದನ್ನೂ ಓದಿ: ಬಿಜೆಪಿ MLA ಮುನಿರತ್ನ ಅರೆಸ್ಟ್.. 2 ಕೇಸ್‌ನಲ್ಲಿ ಪೊಲೀಸರು ಹಾಕಿರೋ ಸೆಕ್ಷನ್​ಗಳು ಯಾವುವು?

ಇನ್ನು ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಗುತ್ತಿಗೆದಾರ ವೇಲುನಾಯ್ಕ್ ದೂರು ದಾಖಲಿಸಿದ್ದು ಎರಡು ಎಫ್​ಐಆರ್ ದಾಖಲಾಗಿವೆ. ಇದಕ್ಕೆ ವಿರುದ್ಧವಾಗಿ ಮುನಿರತ್ನ ಪರ ವಕೀಲ ಸದಾನಂದಶಾಸ್ತ್ರಿ ವೈಯಾಲಿಕಾವಲ್ ಠಾಣೆಯಲ್ಲಿ ಕೌಂಟರ್​ ಕಂಪ್ಲೇಂಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ನನಗೆ ಮೊದಲೇ ಗೊತ್ತಿತ್ತು.. ಜೈಲಿಗೆ ಕಳಿಸಲು ಇಬ್ಬರಿಂದ ಜಂಟಿ ಆಪರೇಷನ್’- ಮುನಿರತ್ನ ವಿಡಿಯೋ ಬಿಡುಗಡೆ

Advertisment

ಶಾಸಕ ಮುನಿರತ್ನ ಬಂಧನಕ್ಕೆ ಪ್ರತಿಕ್ರಿಯಿಸಿರೋ ವಿಪಕ್ಷ ನಾಯಕ ಆರ್.ಅಶೋಕ್, ನೋಟಿಸ್ ಕೊಡದೇ ಬಂಧಿಸಿರೋದು ದ್ವೇಷದ ರಾಜಕಾರಣ ಅಂತ ಕಿಡಿಕಾರಿದ್ದಾರೆ.

ಬಿಜೆಪಿ ಇದನ್ನ ದ್ವೇಷದ ರಾಜಕಾರಣ ಅಂತಿದೆ. ಕಾಂಗ್ರೆಸ್​​​ ಮಾತ್ರ ಶಾಸಕ ಮುನಿರತ್ನ ವಿರುದ್ಧ ಹರಿಹಾಯ್ತಿದೆ. ಒಟ್ಟಾರೆ, ಮುನಿರತ್ನ ವಿರುದ್ಧ ಪ್ರಬಲ ದೂರುಗಳು ದಾಖಲಾಗಿದ್ದು, ಮುಕ್ತಿ ಸಿಗೋದು ಕಷ್ಟ ಕಷ್ಟ ಎಂದೇ ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment