newsfirstkannada.com

×

ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳೋದೆ ದಾರಿ; ಶಾಸಕ ರಾಜು ಕಾಗೆ

Share :

Published March 31, 2024 at 8:17am

    ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಜು ಕಾಗೆ

    ಬಡವರಿಗಾಗಿ ಇದ್ದ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ

    ಅಣ್ಣಾಸಾಬ ಜೊಲ್ಲೆ ಯಾವುದಾದರೂ ಒಂದು ಗ್ರಾಮಕ್ಕೆ ಭೇಟಿ ನೀಡಿದ್ದಾರಾ?

ಚಿಕ್ಕೋಡಿ: ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೆ ಹೋದರೆ ನಾವು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದೇ ದಾರಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡುವಾಗ, ಇದುವರೆಗೂ ಬಡವರಿಗಾಗಿ ಇದ್ದ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಇಷ್ಟೆಲ್ಲಾ ಯೋಜನೆಗಳನ್ನ ಬಡವರಿಗಾಗಿ ಕಾಂಗ್ರೆಸ್ ಸರ್ಕಾರ ಮನೆ ಬಾಗಿಲಿಗೆ ಮುಟ್ಟಿಸಿದ್ರೂ, ನೀವೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೆ ಹೋದ್ರೆ ನಾವೇನು ಮಾಡೋದಿಲ್ಲ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ ಎಂದಿದ್ದಾರೆ.

ಬಳಿಕ ಮಾತು ಮುಂದುವರಿಸಿದ ಶಾಸಕ ರಾಜು ಕಾಗೆ, ನಮ್ಮ ಅಭ್ಯರ್ಥಿ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಕ್ಷೇತ್ರದಲ್ಲಿ ಯಾವುದಾದರೂ ಒಂದು ಗ್ರಾಮಕ್ಕೆ ಭೇಟಿ ನೀಡಿದ್ದಾರಾ?. ಯಾವುದೇ ಅಭಿವೃದ್ದಿ ಕಾಮಗಾರಿ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಫಿಕ್ಸ್​​! ರಣಕಣದಲ್ಲಿ ಶುರುವಾಗಿದೆ ಸಂಚಲನ; ಯಾರಿಗೆ ಲಾಭ? ಯಾರಿಗೆ ನಷ್ಟ?

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೊಲ್ಲೆ ಆಯ್ಕೆಗೆ ನಾನೇ ಕಾರಣ ಆದರೆ, ನಮ್ಮನ್ನೂ ಹಾಗೂ ಕಾರ್ಯಕರ್ತರ ಕಡೆಗಣಿಸಿದರು ಜೊಲ್ಲೆ. ಅವರನ್ನು ಸೋಲಿಸಲು ಪ್ರಯತ್ನಿಸಿದ ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರ ಶಿಪರಸ್ಸಿಗೆ ಆದ್ಯತೆ ನೀಡಿದರು. ಜೊಲ್ಲೆ ಪ್ರಚಾರಕ್ಕೆ ಕಾಗವಾಡಕ್ಕೆ ಬರಲಿ ಅವರ ಕುಂಡಲಿ ಬಿಚ್ಚಿಡುತ್ತೇನೆ ಎಂದು ಜೊಲ್ಲೆ ವಿರುದ್ಧ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳೋದೆ ದಾರಿ; ಶಾಸಕ ರಾಜು ಕಾಗೆ

https://newsfirstlive.com/wp-content/uploads/2024/03/Raju-kaage.jpg

Load More